ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಾಶಿವ ಆಯೋಗದ ವರದಿ ಜಾರಿಗೆ ಪ್ರಯತ್ನ: ಮುನೇನಕೊಪ್ಪ

Last Updated 3 ಫೆಬ್ರುವರಿ 2023, 5:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಒಳ ಮೀಸಲಾತಿಗೆ ಸಂಬಂಧಿಸಿದ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಹದಿನೆಂಟು ದಿನಗಳಿಂದ ನಗರದ ಮಿನಿ ವಿಧಾನ ಸೌಧದ ಎದುರು ಧರಣಿ ನಡೆಸುತ್ತಿರುವ ಪರಿಶಿಷ್ಟ ಪಂಚಮ ಕುಲಬಾಂಧವರ ಒಕ್ಕೂಟದ ಸದಸ್ಯರನ್ನು ಜವಳಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಗುರುವಾರ ಭೇಟಿ ಮಾಡಿದರು.

ಧರಣಿ ನಿರತರ ಅಹವಾಲು ಆಲಿಸಿದ ಮುನೇನಕೊಪ್ಪ, ‘ಸದಾಶಿವಆಯೋಗದ ವರದಿ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ, ವರದಿ ಜಾರಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ತಮ್ಮ ನ್ಯಾಯಯುತವಾದ ಹಕ್ಕುಗಳನ್ನು ಕೇಳುವ ಹಾಗೂ ಅದನ್ನು ಪಡೆಯಲು ಹೋರಾಟ ಮಾಡುವ ಹಕ್ಕುಎಲ್ಲರಿಗೂ ಇದೆ. ಸರ್ಕಾರ ಅವರ ಬೇಡಿಕೆಯನ್ನು ಸಕಾಲದಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಿದೆ’ ಎಂದರು.

ಒಕ್ಕೂಟದ ಮುಖಂಡರಾದ ಮಂಜುನಾಥ ಕೊಂಡಪಲ್ಲಿ, ಶಂಕರ ಅಜಮನಿ, ಶ್ರೀನಿವಾಸ ರಟ್ಟಿ, ಬಸಂತಕುಮಾರ ಅನಂತಪುರ, ನಾಗರಾಜ ಜಾಲಿಗಿಡದ, ಕಬಡ್ಡಿ ಬಸವರಾಜ, ಶ್ರೀನಿವಾಸ ಭೂದೇತಿ, ಲೋಕಮಾನ್ಯ ರಾಮದತ್ತ, ಎಂ.ಪಿ. ಬಳ್ಳಾರಿ, ಮೇಘರಾಜ ಹಿರೇಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT