ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಕಾಂಗ್ರೆಸ್‌ಗೆ ಆನ್‌ಲೈನ್ ಚುನಾವಣೆ

Last Updated 26 ಡಿಸೆಂಬರ್ 2020, 18:37 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ (ಕೆಪಿವೈಸಿ) ಸಾಂಸ್ಥಿಕ ಚುನಾವಣೆ ಈ ಬಾರಿ ಆನ್‌ಲೈನ್‌ನಲ್ಲಿ‌ ನಡೆಯಲಿದೆ. ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಜೆ.ಎಂ. ಲಿಂಗ್ಡೋ ಅವರ ನೇತೃತ್ವದ ಫೌಂಡೇಷನ್ ಫಾರ್‌ ಅಡ್ವಾನ್ಸ್ಡ್‌ ಮ್ಯಾನೇಜ್‌ಮೆಂಟ್ ಆಫ್‌ ಎಲೆಕ್ಷನ್‌ ಸಂಸ್ಥೆಯು ಚುನಾವಣಾ ಪ್ರಕ್ರಿಯೆಯನ್ನು ನಡೆಸಲಿದೆ. ಕೆಪಿವೈಸಿ ರಾಜ್ಯ ಘಟಕ, ಜಿಲ್ಲಾ ಘಟಕ ಹಾಗೂ ಬ್ಲಾಕ್‌ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ.

‘ಕೋವಿಡ್ ಕಾರಣಕ್ಕೆ ಈ ಬಾರಿ ಆನ್‌ಲೈನ್ ಚುನಾವಣೆ ನಡೆಸಲಾಗುತ್ತಿದೆ. ಕೆಪಿವೈಸಿ ಸದಸ್ಯರೆಲ್ಲರೂ ಮತದಾನಕ್ಕೆ ಅರ್ಹರು. ಚುನಾವಣೆ ದಿನ ಅವರ ಮೊಬೈಲ್ ಫೋನ್‌ಗೆ ಒಂದು ಬಾರಿ ಬಳಸುವ ಪಾಸ್‌ವರ್ಡ್‌ (ಒಟಿಪಿ) ಕಳಿಸಲಾಗುತ್ತದೆ. ಇದನ್ನು ಬಳಸಿ ಅವರು ಮತ ಚಲಾಯಿಸಬಹುದು‘ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

’ಮತದಾನದ ವೇಳೆ ಸೆಲ್ಫಿ ಕಳುಹಿಸುವುದು ಕಡ್ಡಾಯ. ಆದ್ದರಿಂದ ಯಾರದ್ದೋ ಮೊಬೈಲ್‌ ಫೋನ್, ಒಟಿಪಿ ಬಳಸಿ ಇನ್ಯಾರೋ ಮತ ಚಲಾಯಿಸಲಾಗದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT