ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಉದ್ಯಮಗಳಿಗೆ ಸರ್ಕಾರದಿಂದ ನೇರ ಸೌಲಭ್ಯ: ನಿರಾಣಿ

Last Updated 18 ಡಿಸೆಂಬರ್ 2022, 14:46 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಫೆಡರೇಶನ್ ಆಫ್ ಇಂಡಿಯಾ ( ಎಫ್ ಐ ಐ) ತನ್ನ ಕಚೇರಿ ತೆರೆದಿದ್ದು, ಸಚಿವ ಮುರುಗೇಶ್ ನಿರಾಣಿ ಅವರು ಉದ್ಘಾಟಿಸಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರು ಮಾತನಾಡಿ, ಎಫ್ ಐ ಐ ದೇಶದ ದೊಡ್ಡ ಸಂಸ್ಥೆ. ದಕ್ಷಿಣ ಭಾರತದಲ್ಲೂ ತನ್ನ ಒಕ್ಕೂಟವನ್ನು ಮತ್ತಷ್ಟು ಬಳಗೊಳಿಸುತ್ತಿರುವುದು ಸಂತೋಷದ ವಿಚಾರ' ಎಂದರು. ದೇಶದಲ್ಲಿ ನೂತನ ಉದ್ಯಮ ಹಾಗೂ ಉದ್ಯಮಿಗಳನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರ ಬಹಳಷ್ಟು ಸಹಕಾರ ನೀಡುತ್ತಿದೆ. ಇದರಿಂದ ವೇಗವಾಗಿ ಹೊಸ ಹೊಸ ಉದ್ಯಮಗಳು ಹೆಚ್ಚುತ್ತಿವೆ ' ಎಂದು ಮಾಹಿತಿ ನೀಡಿದರು.

' ಉದ್ಯೋಗ ಸೃಷ್ಟಿ ಹೆಚ್ಚಿದೆ. ಹೊಸ ಉದ್ಯಮಗಳಿಗೆ ನೇರವಾಗಿ ಸರ್ಕಾರದ ಸೌಲಭ್ಯಗಳು ಸಿಗುವಂತೆ ಕೆಲವೇ ದಿನಗಳಲ್ಲಿ ಯೋಜನೆ ರೂಪಿಸಲಾಗುವುದು ' ಎಂದರು.

ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡಿ, ರಾಜ್ಯದಲ್ಲಿ ಹೊಸದಾಗಿ 14 ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲಾ ವಿಮಾನ ನಿಲ್ದಾಣಗಳನ್ನು ಅಭಿವೃದ್ದಿ ಪಡಿಸಲಾಗುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಇದು ಅನುಕೂಲ ಆಗಲಿದೆ ' ಎಂದರು.

ಎಫ್‌ಐಐ-ಟಿಎಂಎ ಅಧ್ಯಕ್ಷರಾದ ಶ್ರೀ ಭಾಲಚಂದ್ರ ಸಿನ್ಹ್ ರಾವ್ ರಾಣೆ ಮತ್ತು ಐಕ್ಯಾಟ್ ಏರ್ ಆಂಬ್ಯುಲೆನ್ಸ್ ಸೇವೆಗಳ ಸಹ ಸಂಸ್ಥಾಪಕಿ, ನಿರ್ದೇಶಕಿ ಮತ್ತು ಐಕ್ಯಾಟ್ ಫೌಂಡೇಶನ್‌ನ ಅಧ್ಯಕ್ಷರಾದ ಡಾ.ಶಾಲಿನಿ ನಲ್ವಾಡ್, ಬ್ರಿಟಿಷ್ ಡೆಪ್ಯುಟಿ ಹೈಕಮಿಶನ್ ಉಪ ಮುಖ್ಯಸ್ಥ ಜೇಮ್ಸ್ ಗಡ್ಬರ್ ಇದ್ದರು.

ಡಾ.ಶಾಲಿನಿ ನಲ್ವಾಡ್ ಅವರು “ಎಫ್‌ಐಐ-ಟಿಎಂಎ” ಇದರ ಉಪಾಧ್ಯಕ್ಷರಾಗಿ ಮತ್ತು ಭಾರತದ ಪ್ರಾದೇಶಿಕ ಕಚೇರಿಗಳ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಮತ್ತು ಅವರೊಂದಿಗೆ ಪ್ರಾದೇಶಿಕ ನಿರ್ದೇಶಕರಾಗಿ ಶ್ರೀಮತಿ ನಿರ್ಮಲಾ ಪರಬ್ ಕೂಡ ನೇಮಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT