ವೈದ್ಯ ಡಾ. ಬಿ.ವೆಂಕಟರಾವ್ ನಿಧನ

7

ವೈದ್ಯ ಡಾ. ಬಿ.ವೆಂಕಟರಾವ್ ನಿಧನ

Published:
Updated:
Deccan Herald

ಶಿವಮೊಗ್ಗ: ಇಲ್ಲಿನ ಉಷಾ ನರ್ಸಿಂಗ್‌ ಹೋಂನ ಸ್ಥಾಪಕ ಹಿರಿಯ ವೈದ್ಯ ಡಾ. ಬಿ.ವೆಂಕಟರಾವ್ (75)ಭಾನುವಾರ ನಿಧನರಾದರು. 

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯವರಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳಕ್ಕೆ ಬಂದು ನೆಲೆಸಿದ್ದರು. ನಂತರ ಶಿವಮೊಗ್ಗಕ್ಕೆ ಬಂದ ವೆಂಕಟರಾವ್‌ ಕುಟುಂಬ ರವೀಂದ್ರ ನಗರದಲ್ಲಿ ವಾಸವಾಗಿತ್ತು. 1976ರಲ್ಲಿ ಉಷಾ ನರ್ಸಿಂಗ್‌ ಹೋಂ ಸ್ಥಾಪಿಸಿದರು.

ಮಣಿಪಾಲ್ ಹಾಗೂ ಮಂಗಳೂ ರಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿದ್ದ ಅವರು ಶಸ್ತ್ರಚಿಕಿತ್ಸೆಯಲ್ಲಿ ನೈಪುಣ್ಯ ಹೊಂದಿದ್ದರು. ಮಣಿಪಾಲ್‌ನ ಕಸ್ತೂರ ಬಾ ಮೆಡಿಕಲ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

ಐಎಂಎ ಅಧ್ಯಕ್ಷರಾಗಿ, ರೋಟರಿ ಶಿವಮೊಗ್ಗ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇಲ್ಲಿನ ಜ್ಞಾನ ದೀಪ ವಿದ್ಯಾ ಸಂಸ್ಥೆಯ ನಿರ್ದೇಶಕರಾಗಿ, ವಿದ್ಯಾ ಭಾರತಿ ಕಾಲೇಜಿನ ಟ್ರಸ್ಟಿಗಳಾಗಿದ್ದರು.

ಸಾಮಾಜಿಕ ಕಳಕಳಿ ಹೊಂದಿದ್ದ ಇವರು ಗ್ರಾಮೀಣ ಪ್ರದೇಶದ ರೋಗಿ ಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದರು. ಅನೇಕ ಸಾಹಿತ್ಯ, ನೃತ್ಯ, ಧಾರ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆಗಳ ಪೋಷಕರಾಗಿದ್ದರು. ಅವರಿಗೆ ಪತ್ನಿ ಡಾ.ಅರುಂಧತಿ, ಪುತ್ರಿಯರಾದ ಡಾ. ಉಷಾ, ಡಾ.ಸೌದಾಮಿನಿ, ಪುತ್ರ ಡಾ.ಉದಯ್ ಇದ್ದಾರೆ. ಅಂತ್ಯಕ್ರಿಯೆ ಭಾನುವಾರ ರೋಟರಿ ಚಿತಾಗಾರದಲ್ಲಿ ನೆರವೇರಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !