ಶುಕ್ರವಾರ, ಮೇ 27, 2022
22 °C

ಶಿಥಿಲಾವಸ್ಥೆ ಗ್ರಾ.ಪಂ. ಮಳಿಗಗಳನ್ನು ಬಾಡಿಗೆ ನೀಡದಂತೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

24ಎಎನ್‌ಟಿ1ಇಪಿ:ಆನವಟ್ಟಿಯ ರಾಜ್ಯ ಹೆದ್ದಾರಿ ಕಾಮಗಾರಿ ವೀಕ್ಷಣೆ ಮಾಡಿದ ಶಾಸಕ ಕುಮಾರ ಬಂಗಾರಪ್ಪ

ಆನವಟ್ಟಿ: ಇಲ್ಲಿನ ರಾಜ್ಯ ಹೆದ್ದಾರಿ ರಸ್ತೆ ಪಕ್ಕ ಅಳವಡಿಸಿರುವ ಒಳಚರಂಡಿ ಮೂಲಕ ಕೊಳಚೆ ನೀರನ್ನು ಕೆರೆಗಳಿಗೆ ಬೀಡದಂತೆ ಗುತ್ತಗೆ ಪಡೆದ ಕಂಪನಿ ಹಾಗೂ ಕೆಶಿಪ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. 

ಶನಿವಾರ ಬಸ್‌ ತಂಗುದಾಣದಿಂದ ಜೋಡಿಕಟ್ಟೆ ಕೆರೆವರೆಗೆ ಕಾಲುನಡಿಗೆಯಲ್ಲಿ ಶಾಸಕ ಕುಮಾರ ಬಂಗಾರಪ್ಪ ರಾಜ್ಯ ಹೆದ್ದಾರಿಯ ಕಾಮಗಾರಿಯನ್ನು ವೀಕ್ಷಣೆ ಮಾಡಿ ಮಾತನಾಡಿದರು. 

ಹಳ್ಳಿಗಳ ಜೀವ ಕೆರೆಗಳಾಗಿದ್ದು. ಕುಡಿಯಲು ಈ ನೀರನ್ನು ಗ್ರಾಮಸ್ಥರು ಬಳಕೆ ಮಾಡಿಕೊಳ್ಳುತ್ತಾರೆ. ಹಾಗಾಗಿ ಯಾವುದೇ ಕಾರಣಕ್ಕೂ ಒಳಚರಂಡಿಯ ಕೊಳಚೆ ನೀರು ಕೆರೆಗೆ ಬೀಡಬಾರದು. ಚರಂಡಿ ನೀರ ಬೀಡಲು ಪರ್ಯಾಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ತಿಳಿಸಿದರು.

ಕೆಲವು ಕಡೆ ರಸ್ತೆ ಕ್ರಮವಾಗಿ ನಿರ್ಮಿಸದೇ ಲೋಪದೋಷಗಳಿಂದ ನಿರ್ಮಿಸಲಾಗಿದೆ. ಅಭಿವೃಧಿ ಕೆಲಸಗಳನ್ನು ಮಾಡುವಾಗ ಯಾರದೆ ಮುಲಾಜು ನೋಡುವ ಅಗತ್ಯವಿಲ್ಲ. ಅಧಿಕಾರಿಗಳು ಗುತ್ತಿಗೆ ಪಡೆದ ಆರ್‌ಎನ್‌ಎಸ್‌ ಕಂಪನಿ ಅಧಿಕಾರಿಗಳ ಜೊತೆ ಚರ್ಚಿಸಿ, ಲೋಪದೋಷವಾಗಿರುವ ಕಡೆ ಸರಿಪಡಿಸುವಂತೆ ತಿಳಿಸಿದರು.

ಸರ್ಕಾರಿ ಜಾಗ (ಪಿಡಬ್ಲೂಡಿ) ಇದ್ದಲ್ಲೂ ಸಹ ಪೂರ್ಣವಾಗಿ ಬಳಸದೆ ಮನಸೋಯಿಚ್ಚೆ ಕಾಮಗಾರಿ ಮಾಡಿದನ್ನು ನೋಡಿ ಅಧಿಕಾರಿಗಳ ಮೇಲೆ ಗರಂ ಆದರೂ ಎಲ್ಲಾ ಇಲಾಖೆಯ ಅಧಿಕಾರಿಗಳು ಪರಸ್ಪರ ಸಹಕಾರದಿಂದ ಅಭಿವೃಧಿ ಕೆಲಸಗಳನ್ನು ಮಾಡಬೇಕು. ಗುತ್ತಿಗೆದಾರರು ಮನಸಾ ಇಚ್ಚೆ ಕಾಮಗಾರಿ ಮಾಡುವಂತೆ ಇಲ್ಲ. ನಿಯಾನುಸಾರ ಕಾಮಗಾರಿ ಮಾಡುವಂತೆ ಹಾಗೂ ಅಧಿಕಾರಿಗಳು ಬೇಜಾವಬ್ದಾರಿತನ ಬಿಟ್ಟು ಕಾಮಗಾರಿಗಳ ಕಡೆ ಗಮನ ನೀಡುವಂತೆ ತಾಕೀತು ಮಾಡಿದರು.

ಶಿಥಿಲಾವಸ್ಥೆ ಮಳಿಗೆ ಬಾಡಿಗೆ ನೀಡದಂತೆ ಎಚ್ಚರಿಕೆ: ಬಾಡಿಗೆ ಬರುತ್ತದೆ ಎಂಬ ಕಾರಣಕ್ಕೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಶಿಥಿಲಾವಸ್ಥೆ ತಲುಪಿರುವ ಮಳಿಗೆಗಳನ್ನು ಬಾಡಿಗೆ ನೀಡಕೂಡದು. ಮಳಿಗೆ ಬಾಡಿಗೆದಾರನ ಮೇಲೆ ಬಿದ್ದರೆ ಸರ್ಕಾರಕ್ಕೆ ನಷ್ಟವಾಗುತ್ತದೆ ಎಂದ ಅವರು ಶುದ್ಧ ಕುಡಿಯುವ ನೀರಿನ ಘಟಕದ ಪಕ್ಕ ಇರುವ ಗ್ರಾಮ ಪಂಚಾಯ್ತಿಯ ಮೂರು ಶಿಥಿಲಾವಸ್ಥೆ ಮಳಿಗೆಗಳನ್ನು ಕೂಡಲೇ ಬಾಡಿಗೆದಾರರಿಂದ ಗ್ರಾಮ ಪಂಚಾಯ್ತಿ ವಶಕ್ಕೆ ಪಡೆದು ನೆಲಸಮ ಮಾಡುವಂತೆ ಪಿಡಿಒ ರಾಜಪ್ಪ ಅವರಿಗೆ ಸೂಚಿಸಿದರು.

ಸಂಜೆ ಕೋಟಿಪುರದ ಕೈಟಬೈರೇಶ್ವರ ದೇವಸ್ಥಾನದಲ್ಲಿ ಗ್ರಾಮದ ವರ್ತಕರು,ಸ್ಥಳೀಯ ಮುಖಂಡರು, ಎಲ್ಲಾ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯ್ತಿ ಸದಸ್ಯರು, ತಾಲ್ಲೂಕು ಪಂಚಾಯ್ತಿ ಸದಸ್ಯರು ಸೇರಿದ ಸಭೆಯಲ್ಲಿ ಶಾಸಕ ಕುಮಾರ ಬಂಗಾರಪ್ಪ ಪಾಲ್ಗೊಂಡು ಸ್ಥಳೀಯರಿಂದ ಅವಹಾಲು ಸ್ವೀಕರಿಸಿ, ಗ್ರಾಮದ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ ಅವರು ನಾನು ಈ ಹಿಂದೆ ಎರಡು ಬಾರಿ ಸಚಿವನಾಗಿದ್ದು. ತಾಲ್ಲೂಕಿನ ಸಮಗ್ರ ಅಭಿವೃಧಿಗೆ ಸ್ಪಷ್ಠ ಕಲ್ಪನೆಗಳನ್ನು ಹೊಂದಿದ್ದು. ಅಭಿವೃಧಿ ಕಡೆ ಹೆಚ್ಚಿನ ಗಮನ ನೀಡಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು