ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ: ಆಹಾರ ಸಾಮಾಗ್ರಿ ವಿತರಣೆ

Last Updated 15 ಅಕ್ಟೋಬರ್ 2018, 15:48 IST
ಅಕ್ಷರ ಗಾತ್ರ

ಗದಗ: ಇಲ್ಲಿನ ದಾಸರ ಓಣಿಯ ವಿಠ್ಠಲ ರುಕ್ಮಾಯಿ ದೇವಸ್ಥಾನದ ಸಮೀಪದಲ್ಲಿ ಜಿಲ್ಲಾ ಸಹಸ್ರಾರ್ಜುನ ಸೇವಾ ಟ್ರಸ್ಟ್‌ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ದಸರಾ ಹಬ್ಬದ ಅಂಗವಾಗಿ ಎಸ್‍ಎಸ್‌ಕೆ ಸಮಾಜದ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿ ಹಾಗೂ ಸೀರೆ, ಹೊಲಿಗೆ ಯಂತ್ರ ವಿತರಿಸಲಾಯಿತು.

ಹೊಸಪೇಟೆಯ ಹಂಸಾಂಬಾ ಶಾರದಾ ಆಶ್ರಮದ ಅಧ್ಯಕ್ಷ ಮಾತಾ ಪ್ರಭೋದಾಮಯಿ ಸಾನ್ನಿಧ್ಯವಹಿಸಿದ್ದರು.
ಎಸ್‍ಎಸ್‌ಕೆ ಸಮಾಜದ ಮುಖಂಡ ಮುರಳಿಧರಸಾ ಕಲಬುರ್ಗಿ ಕಾರ್ಯಕ್ರಮ ಉದ್ಘಾಟಿಸಿದರು. ‘ಸಮುದಾಯದ ಜನರು ವ್ಯಾಪಾರ, ವ್ಯವಹಾರ ಜತೆಗೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವತ್ತ ಗಮನಹರಿಸಬೇಕು’ ಎಂದು ಅವರು ಹೇಳಿದರು.

ರೇಣುಕಾ ಹಬೀಬ ಹಾಗೂ ತಂಡದವರು ಭರತನಾಟ್ಯ ಪ್ರದರ್ಶಿಸಿದರು. ಟ್ರಸ್ಟ್ ಅಧ್ಯಕ್ಷ ವಿನೋದ ಭಾಂಡಗೆ, ವೆಂಕಟೇಶ ಕಾಟಿಗರ, ಸಂತೋಷ ಭಾಂಡಗೆ, ಪರಶುರಾಮ ಹಬೀಬ, ಚೇತನ ಬಾಕಳೆ, ವಿನೋದ ಭಾಂಡಗೆ, ಸತೀಶ ಸೋಳಂಕಿ, ವಿನಾಯಕ ಶಿದ್ಲಿಂಗ, ಶ್ರೀನಿವಾಸ ಭಾಂಡಗೆ, ಷಣ್ಮುಕಸಾ ಬಸವಾ, ರಾಜು ಭಾಂಡಗೆ, ಗಜು ಹಬೀಬ, ಗುರು ಹಬೀಬ, ಬಸವರಾಜ ಪೂಜಾರ, ಲಕ್ಷ್ಮೀಬಾಯಿ ಭಾಂಡಗೆ, ಲಕ್ಷ್ಮೀಬಾಯಿ ಪವಾರ, ಗಂಗೂಬಾಯಿ ಹಬೀಬ, ಸುರೇಶ ಭಾಂಡಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT