ಅಕ್ಕಮಹಾದೇವಿ ವಿಚಾರಗಳಅನುಷ್ಠಾನದಿಂದ ಸಮಾನತೆ: ಕುಲಪತಿ ಡಾ.ಸಬೀಹಾ ಭೂಮಿಗೌಡ

ಗುರುವಾರ , ಏಪ್ರಿಲ್ 25, 2019
21 °C

ಅಕ್ಕಮಹಾದೇವಿ ವಿಚಾರಗಳಅನುಷ್ಠಾನದಿಂದ ಸಮಾನತೆ: ಕುಲಪತಿ ಡಾ.ಸಬೀಹಾ ಭೂಮಿಗೌಡ

Published:
Updated:
Prajavani

ಗದಗ: ‘12ನೇ ಶತಮಾನದಲ್ಲಿ ವಚನಗಳ ಮೂಲಕ ಸ್ವಾತಂತ್ರ್ಯದ ಕಿಡಿ ಹೊತ್ತಿಸುವ ಮೂಲಕ ಅಕ್ಕಮಹಾದೇವಿ ಅವರು ಮಹಿಳಾ ಸಮಾನತೆಯ ಧ್ವನಿ ಎತ್ತಿದರು. ಅವರ ವಚನಗಳ ಅನುಷ್ಠಾನದಿಂದ ಮಹಿಳಾ ಸಮಾನತೆ ತರಲು ಸಾಧ್ಯವಾಗುತ್ತದೆ’ ಎಂದು ವಿಜಯಪುರ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ.ಸಬೀಹಾ ಭೂಮಿಗೌಡ ಹೇಳಿದರು.

ಇಲ್ಲಿನ ಕೆ.ಎಚ್.ಪಾಟೀಲ ಸಭಾಭವನದಲ್ಲಿ ಅಕ್ಕನ ಬಳಗದ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ‘ಅಕ್ಕಮಹಾದೇವಿ ಅವರ ವಚನಗಳನ್ನು ಅನುಷ್ಠಾನಕ್ಕೆ ತರುವುದೇ, ಅವರಿಗೆ ನಾವು ಸಲ್ಲಿಸುವ ಗೌರವವಾಗಿದೆ. ಅಕ್ಕಮಹಾದೇವಿ ತೋರಿ
ಸಿದ ದಿಟ್ಟತನದ ದಾರಿಯು ಪ್ರತಿಯೊಂದು ಮಹಿಳೆಗೆ ಅನುಕರಣೀಯ. ನಮ್ಮ ಇಷ್ಟಗಳನ್ನು ವ್ಯಕ್ತಪಡಿಸುವ ಧೈರ್ಯವನ್ನು ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಮಹಿಳೆಯರ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲಿ ಕ್ರಾಂತಿಗೈದ ಅಕ್ಕಮಹಾದೇವಿ ಅವರ ವಚನಗಳು ಸರ್ವಕಾಲಕ್ಕೂ ಸ್ಪಂದಿಸುತ್ತವೆ’ ಎಂದರು.

ಅಮೃತ ಸಿಂಚನ ಕೃತಿಯನ್ನು ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ ಬಿಡುಗಡೆಗೊಳಿಸಿದರು. ಅಕ್ಕನ ಬಳಗದ ಸಂಸ್ಥಾಪಕ ಅಧ್ಯಕ್ಷೆ ಚನ್ನಮ್ಮ ಮಾನ್ವಿ ಅವರ ಕುರಿತ ಕೃತಿಯನ್ನು ಧನಶ್ರೀ ಶಿವಕುಮಾರ ಬಿಡುಗಡೆಗೊಳಿಸಿದರು.

‘ಅಕ್ಕನ ಬಳಗ 75 ವರ್ಷಗಳಿಂದ ಮಹಿಳೆಯರ ಅಭಿವೃದ್ಧಿ, ಜಾಗೃತಿಗಾಗಿ ಶ್ರಮವಹಿಸುತ್ತಿರುವುದು ಸಂತಸದ ವಿಷಯ. ಮಹಿಳೆ ಏನೆನ್ನಾದರೂ ಛಲದಿಂದ ಸಾಧಿಸಬಲ್ಲಳು, ಸಹನೆ, ತಾಳ್ಮೆ, ಸೇವಾ ಮನೋಭಾವದಿಂದ ಅಸಮಾನತೆಯಲ್ಲೂ ತನ್ನ ಸಾಮರ್ಥ್ಯವನ್ನು ತೋರಿಸುವ ಛಲ ಹೊಂದಿದ್ದಾರೆ’ ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.

ಶೋಭಾ ಪಾಟೀಲ, ಗಂಗಮ್ಮ ಹುಲಕೋಟಿ ಚಂದ್ರು ಬಾಳಿಹಳ್ಳಿಮಠ ಅವರನ್ನು ಸನ್ಮಾನಿಸಲಾಯಿತು. ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷೆ ಪಾರ್ವತಿ ಮಾಳೆಕೊಪ್ಪಮಠ, ಅಕ್ಕನ ಬಳಗದ ಅಧ್ಯಕ್ಷ ಪ್ರೇಮಾ ಮೇಟಿ, ರೇಣುಕಾ ಅಮಾತ್ಯ, ನಾಗರತ್ನ ಹುಬ್ಳಿಮಠ, ಮಮತಾ ಬಳ್ಳಾರಿ, ಪ್ರೇಮಾ ಮೇಟಿ, ಶೈಲಜಾ ಕವಲೂರ, ಶಿವಲೀಲಾ ಅಕ್ಕಿ, ಲಲಿತಾ ಬಾಳಿಹಳ್ಳಿಮಠ, ಪೂರ್ಣಿಮಾ ಹುಲಕೋಟಿ, ನಂದಾ ಬಾಳಿಹಳ್ಳಿಮಠ, ಶಾರದಾ ಬೊಮ್ಮಸಾಗರ, ಶಾಂತಾದೇವಿ ಕೊಲ್ಲೋಳಗಿ, ಮೀನಾಕ್ಷಿ ಸಜ್ಜನ, ಕಸ್ತೂರಿ ಹಿರೇಗೌಡರ, ಉಷಾ ಧಡೂತಿ, ಶಾರದಾ ಹಿರೇಮಠ, ರೇಣುಕಾ ಅಮಾತ್ಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !