ಬುಧವಾರ, ಏಪ್ರಿಲ್ 14, 2021
32 °C

ಬಟ್ಟೂರು ಗ್ರಾಮ ಪಂಚಾಯ್ತಿ: ನಾಮಪತ್ರ ಸಲ್ಲಿಕೆ ಆರಂಭ

ನಾಗರಾಜ ಎಸ್‌.ಹಣಗಿ Updated:

ಅಕ್ಷರ ಗಾತ್ರ : | |

Prajavani

ಲಕ್ಷ್ಮೇಶ್ವರ: ಸಮೀಪದ ಬಟ್ಟೂರು ಗ್ರಾಮ ಪಂಚಾಯ್ತಿಗೆ ಮಾರ್ಚ್‌ 30ರಂದು ಮತದಾನ ನಡೆಯಲಿದ್ದು, ಸೋಮವಾರದಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿತು.

ಒಟ್ಟು 13 ಸ್ಥಾನಗಳಿಗಾಗಿ ನಡೆಯುವ ಚುನಾವಣೆಗೆ ಮಾರ್ಚ್‌ 19 ನಾಮಪತ್ರ ಸಲ್ಲಿಸಲು ಕೊನೆಯ ದಿನ. 20ರಂದು ನಾಮಪತ್ರಗಳ ಪರಿಶೀಲನೆ, 22ರಂದು ನಾಮಪತ್ರ ಹಿಂತೆಗೆದುಕೊಳ್ಳುವುದು, 29ರಂದು ಮತದಾನ, 31ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ.

ಬಟ್ಟೂರು 5, ಶೆಟ್ಟಿಕೇರಿ 2, ಕುಂದ್ರಳ್ಳಿ 4 ಮತ್ತು ಕುಂದ್ರಳ್ಳಿ ತಾಂಡಾದಿಂದ 3 ಹೀಗೆ ಒಟ್ಟು 14 ಸದಸ್ಯರ ಆಯ್ಕೆ ನಡೆಯಲಿದೆ. ಬಟ್ಟೂರಿನ ಐದು ಸ್ಥಾನಗಳಲ್ಲಿ 2 ಸಾಮಾನ್ಯ, 2 ಅನುಸೂಚಿತ ಜಾತಿ ಮತ್ತು ಸಾಮಾನ್ಯ ಮಹಿಳೆಗೆ 1 ಸ್ಥಾನ ಮೀಸಲಾಗಿದೆ. ಶೆಟ್ಟಿಕೇರಿ ಅನುಸೂಚಿತ ಜಾತಿಗೆ 1 ಮತ್ತು ಅನುಸೂಚಿತ ಜಾತಿ ಮಹಿಳೆಗೆ 1 ಸ್ಥಾನ ಮೀಸಲಾಗಿದೆ. ಅದರಂತೆ ಕುಂದ್ರಳ್ಳಿಯಲ್ಲಿ 2 ಸಾಮಾನ್ಯ, ಹಿಂದುಳಿದ ಅ ವರ್ಗದ ಮಹಿಳೆ 1 ಹಾಗೂ ಸಾಮಾನ್ಯ ಮಹಿಳೆ 1ರಂತೆ ಕುಂದ್ರಳ್ಳಿ ತಾಂಡಾದಲ್ಲಿ 1 ಅನುಸೂಚಿತ ಜಾತಿ, 1 ಸಾಮಾನ್ಯ ಮತ್ತು 1 ಸ್ಥಾನ ಅನುಸೂಚಿತ ಪಂಗಡದ ಮಹಿಳೆಗೆ ಮೀಸಲಾಗಿದೆ.‌

ಒಟ್ಟು 4,611 ಮತದಾರರು ಮತ ಚಲಾಯಿಸಲಿದ್ದು, ಅವರಲ್ಲಿ ಬಟ್ಟೂರಿನ 933 ಪುರುಷರು, 854 ಮಹಿಳೆಯರು, ಕುಂದ್ರಳ್ಳಿಯ 667 ಪುರುಷ ಮತ್ತು 600 ಮಹಿಳೆಯರು, ಕುಂದ್ರಳ್ಳಿ ತಾಂಡಾದ 436 ಪುರುಷ ಮತ್ತು 430 ಮಹಿಳೆಯರು ಹಾಗೂ ಶೆಟ್ಟಿಕೇರಿ ಗ್ರಾಮದ 343 ಪುರುಷರು ಮತ್ತು 348 ಮಹಿಳಾ ಮತದಾರರು ಮತ ಚಲಾಯಿಸಲಿದ್ದಾರೆ.‌

ಬಟ್ಟೂರು ಗ್ರಾಮ ಪಂಚಾಯ್ತಿ ಶಾಸಕ ರಾಮಣ್ಣ ಲಮಾಣಿ ಅವರ ಸ್ವಕ್ಷೇತ್ರವಾಗಿದ್ದು, ಚುನಾವಣೆ ಕಾವು ಏರುವ ಲಕ್ಷಣಗಳು ಈಗಾಗಲೇ ಗೋಚರಿಸುತ್ತಿವೆ. ಸೋಮವಾರ ನಾಮಪತ್ರ ಅರ್ಜಿ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಅಕಾಂಕ್ಷಿಗಳು ಬಂದಿದ್ದು ಕಂಡು ಬಂದಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.