ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಗತಿಯ ಹಾದಿಯಲ್ಲಿ ಮುನ್ನಡೆಯಿರಿ’

Last Updated 9 ಜನವರಿ 2021, 16:58 IST
ಅಕ್ಷರ ಗಾತ್ರ

ಗದಗ: ‘ಪ್ರಗತಿಯ ಹಾದಿಯಲ್ಲಿರುವ ಮಹಿಳೆಯು ಇನ್ನಷ್ಟು ಆಧುನೀಕತೆ ಮೈಗೂಡಿಸಿಕೊಂಡು ಮುನ್ನಡೆಯಬೇಕು’ ಎಂದು ಗದಗ-ಬೆಟಗೇರಿ ಇನ್ನರ್‌ ವ್ಹೀಲ್ ಮಿಡ್‍ಟೌನ್ ಕ್ಲಬ್ ಅಧ್ಯಕ್ಷೆ ಅನುಪಮಾ ಜೋಳದ ಹೇಳಿದರು.

ನಗರದ ಮಹೇಶ್ವರಿ ವಿವಿಧೋದ್ದೇಶಗಳ ಮಹಿಳಾ ಮಂಡಳ ಹಾಗೂ ಕೌಶಲ ಕರ್ನಾಟಕದ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರಿಗೆ ಸ್ವಯಂ ಉದ್ಯೋಗ ಯೋಜನೆಯಡಿ ನಡೆದ ಬ್ಯೂಟಿ ಪಾರ್ಲರ್ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಅತಿಥಿ ಕವಿತಾ ದಂಡಿನ, ‘ಆಧುನಿಕ ಬದುಕಿನ ಶೈಲಿಗೆ ತಕ್ಕಂತೆ ಸೌಂದರ್ಯ ಮೀಮಾಂಸೆ ಬದಲಾಗಿದ್ದು, ಬ್ಯೂಟಿ ಪಾರ್ಲರ್ ಕೋರ್ಸ್‌ ಕಲಿಕೆ ಮಹಿಳೆಯರ ಸ್ವಾವಲಂಬಿ ಬದುಕಿಗೆ ದಾರಿಯಾಗಿದೆ’ ಎಂದರು.

ನಿತ್ಯಂ ಯೋಗ ಕೇಂದ್ರದ ಅಧ್ಯಕ್ಷೆ ಸುಮಂಗಲಾ ಹದ್ಲಿ ಮಾತನಾಡಿ, ‘ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸ್ವಾವಲಂಬನೆ ಅವಶ್ಯವಾಗಿದ್ದು, ತರಬೇತಿಗಳಿಂದ ಇದು ಸಾಧ್ಯ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಹೇಶ್ವರಿ ವಿವಿಧೋದ್ದೇಶಗಳ ಮಹಿಳಾ ಮಂಡಳದ ಅಧ್ಯಕ್ಷೆ ಜಯಶ್ರೀ ಹಿರೇಮಠ, ‘ಇಲಾಖೆ ನೀಡುವ ಸೌಲಭ್ಯಗಳನ್ನು ಮಹಿಳೆಯರಿಗೆ ತಲುಪಿಸುವ ಹೊಣೆಗಾರಿಕೆ ನಮ್ಮದಾಗಿದ್ದು, ಎಲ್ಲರೂ ಅವುಗಳ ಸದುಪಯೋಗ ಪಡೆಯಬೇಕು’ ಎಂದರು.

ವೀಣಾ ಬೈಲಿ ಸ್ವಾಗತಿಸಿದರು. ಗಿರೀಜಾ ಹಿರೇಮಠ ನಿರೂಪಿಸಿದರು. ರಶ್ಮಿಕಾ ಹಿರೇಮಠ ವಂದಿಸಿದರು. ಲಲಿತಾ ಸಂಗನಾಳ, ಮಂಜುಳಾ ಮಲ್ಲಾಪೂರ, ರುಕ್ಸಾನಾ ಬೇಗಂ, ಉಷಾ ನಾಲ್ವಾಡ, ಅರುಣಾ ವಸ್ತ್ರದ, ಪುಷ್ಪಾ ಚೆಂಡೂರ, ಅಕ್ಕಮಹಾದೇವಿ ಹಿರೇಮಠ, ಮಂಜುಳಾ ಮಲ್ಲಾಪೂರ, ಜ್ಯೋತಿ ಪೂಜಾರ, ಪುಷ್ಪಾ ಮುನವಳ್ಳಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT