ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ 18 ಮಂದಿಗೆ ಸೋಂಕು; 44 ಜನರು ಗುಣಮುಖ

Last Updated 6 ಜುಲೈ 2020, 16:43 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿ ಸೋಮವಾರ ಒಂದೇ ಮತ್ತೆ 18 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 228ಕ್ಕೆ ಏರಿಕೆಯಾಗಿದೆ.

ಇಲ್ಲಿನ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 44 ಮಂದಿ ಸೋಂಕಿತರು ಗುಣಮುಖರಾಗಿ ಸೋಮವಾರ ಒಂದೇ ದಿನ ಬಿಡುಗಡೆಯಾಗಿ ಮನೆಗೆ ಮರಳಿದ್ದಾರೆ. ಹೀಗಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ 96ಕ್ಕೆ ತಗ್ಗಿದೆ. ಇದುವರೆಗೆ 128 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಮುಂಡರಗಿ ತಾಲ್ಲೂಕಿನ ಡಂಬಳ ಗ್ರಾಮದ ಹೊಸ ಬಸ್ ನಿಲ್ದಾಣ ಹತ್ತಿರದ ನಿವಾಸಿ 40 ವರ್ಷದ ಪುರುಷ ಪಿ-9729 ಸಂಪರ್ಕದಿಂದ ಮುಂಡರಗಿ ಪಟ್ಟಣದ ಅಂಬಾಭವಾನಿ ನಗರ ನಿವಾಸಿ 36 ವರ್ಷದ ಪುರುಷ (ಪಿ-24739) ಹಾಗೂ 25 ವರ್ಷದ ಮಹಿಳೆಗೆ (ಪಿ-24740) ಸೋಂಕು ದೃಢಪಟ್ಟಿದೆ. ಜೂನ್ 28 ರಂದು ಮಹಾರಾಷ್ಟ್ರದಿಂದ ಜಿಲ್ಲೆಯ ಬಂದ ಮುಂಡರಗಿ ತಾಲ್ಲೂಕಿನ ಮೇಂವುಡಿ ಜನತಾ ಪ್ಲಾಟ್‌ನ ಐವರಲ್ಲಿ ಸೋಂಕು ಪತ್ತೆಯಾಗಿದೆ. ಇವರಲ್ಲಿ 38 ವರ್ಷದ ಪುರುಷ (ಪಿ-24741), 35 ವರ್ಷದ ಮಹಿಳೆ (ಪಿ-24742), 16 ವರ್ಷದ ಯುವತಿ (ಪಿ-24743), 16 ವರ್ಷದ ಯುವಕ (ಪಿ-24744), 9 ವರ್ಷದ ಬಾಲಕಿ (ಪಿ-24745) ಸೇರಿದ್ದಾರೆ.

ಲಕ್ಷ್ಮೇಶ್ವರದ 39 ವರ್ಷದ ಸೋಂಕಿತ ಪುರುಷನ (ಪಿ-11230) ಸಂಪರ್ಕದಿಂದ ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನದ ಹತ್ತಿರದ ಹೂಲಗೇರಿ ಬಣದ 6 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ 32 ವರ್ಷದ ಮಹಿಳೆ (ಪಿ-24746), 14 ವರ್ಷದ ಯುವಕ (ಪಿ-24747), 25 ವರ್ಷದ ಪುರುಷ (ಪಿ-24748), 39 ವರ್ಷದ ಪುರುಷ (ಪಿ-24749), 12 ವರ್ಷದ ಯುವತಿ (ಪಿ-24750), 7 ವರ್ಷದ ಬಾಲಕಿ (ಪಿ-24751) ಸೇರಿದ್ದಾರೆ.

ಗದಗ ತಾಲ್ಲೂಕಿನ ಹೊಂಬಳ ಗ್ರಾಮದ ದೊಡ್ಡ ಓಣಿ ನಿವಾಸಿ 70 ವರ್ಷದ ವೃದ್ಧೆಗೆ (ಪಿ-24752) ಹಾಗೂ ಬೆಂಗಳೂರಿನಿಂದ ಬಂದ ರೋಣ ಪಟ್ಟಣದ 36 ವರ್ಷದ ಪುರುಷನಲ್ಲಿ (ಪಿ-24753) ಸೋಂಕು ಕಾಣಿಸಿಕೊಂಡಿದೆ. ನರಗುಂದ ಪಟ್ಟಣದ ಗಡಿ ಓಣಿಯ 42 ವರ್ಷದ ಸೋಂಕಿತ ಪುರುಷನ (ಪಿ-18279) ಸಂಪರ್ಕದಿಂದ ಅದೇ ಪ್ರದೇಶದ 30 ವರ್ಷದ ಮಹಿಳೆಗೆ (ಪಿ-24754), 38 ವರ್ಷದ ಮಹಿಳೆಗೆ (ಪಿ-24755) ಸೋಂಕು ತಗುಲಿದೆ.

ನರಗುಂದ ಪಟ್ಟಣದ ಗಡಿ ಓಣಿಯ 39 ವರ್ಷದ ಸೋಂಕಿತ ಪುರುಷನ (ಪಿ-15320) ಸಂಪರ್ಕದಿಂದ ಹೊರಕೇರಿ ಓಣಿಯ 26 ವರ್ಷದ ಮಹಿಳೆಗೆ (ಪಿ-24756) ಸೋಂಕು ದೃಡವಾಗಿದೆ.

‘ಸೋಂಕಿತರನ್ನು ಜಿಲ್ಲೆಯ ಕೊವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT