ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಕ್ಷ್ಮೇಶ್ವರ: ನವೀಕರಣಗೊಂಡ ಸಿಆರ್‌ಸಿ ಕೇಂದ್ರದ ಉದ್ಘಾಟನೆ

Published 24 ಜನವರಿ 2024, 13:10 IST
Last Updated 24 ಜನವರಿ 2024, 13:10 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ತಾಲ್ಲೂಕಿನ ಪುಟಗಾಂವ್‍ ಬಡ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನವೀಕರಣಗೊಂಡ ಸಿಆರ್‌ಸಿ ಕೇಂದ್ರವನ್ನು ಶಾಸಕ ಡಾ.ಚಂದ್ರು ಲಮಾಣಿ ಬುಧವಾರ ಉದ್ಘಾಟಿಸಿದರು.

ಆನಂತರ ಮಾತನಾಡಿದ ಅವರು ‘ಪುಟಗಾಂವ್‍ಬಡ್ನಿಯಲ್ಲಿ ಸಮೂಹ ಸಂಪನ್ಮೂಲ ಕೇಂದ್ರವು ಕಳೆದ ಹಲವು ವರ್ಷಗಳಿಂದ ಪಾಳು ಬಿದ್ದಿತ್ತು. ಇದೀಗ ಕೇಂದ್ರ ದುರಸ್ತಿಗೊಂಡಿದ್ದು ಶೈಕ್ಷಣಿಕ ಚಟುವಟಿಕೆ ನಡೆಸಲು ಅನುಕೂಲವಾಗಲಿದೆ. ಫುಟಗಾಂವ ಬಡ್ನಿ ಕ್ಲಸ್ಟರ್ ಸಿಆರ್‌ಪಿ ಗಿರೀಶ್ ನೇಕಾರ ಮತ್ತು ಸ್ಥಳೀಯ ಕ್ಲಸ್ಟರಿನ ಸಂಬಂಧಿತ ಮುಖ್ಯ ಶಿಕ್ಷಕರು, ಸಹಶಿಕ್ಷಕರ ಸಹಾಯ, ಸಹಕಾರದಿಂದ ಈ ಕಟ್ಟಡಕ್ಕೆ ಜೀವ ನೀಡುವಲ್ಲಿ ಯಶಸ್ವಿಯಾಗಿದ್ದಾರೆ‘ ಎಂದರು

‘ಹಾಳಾಗಿದ್ದ ಕಟ್ಟಡವನ್ನು ಸಿಆರ್‌ಪಿ ಗಿರೀಶ ನೇಕಾರ ₹1.15 ಲಕ್ಷ ವೆಚ್ಚದಲ್ಲಿ ನವೀಕರಣ ಮಾಡಿದ್ದಾರೆ. ಅದರಂತೆ ಶಿಗ್ಲಿಯಲ್ಲಿ ಜ್ಯೋತಿ ಗಾಯಕವಾಡ, ಲಕ್ಷೇಶ್ವರದಲ್ಲಿ ಉಮೇಶ ನೇಕಾರ, ಸೂರಣಗಿಯಲ್ಲಿನ ಕಟ್ಟಡವನ್ನು ಲೊಕೇಶ ಮಠದ ನೇತೃತ್ವದಲ್ಲಿ ನವೀಕರಣಕ್ಕೆ ಅಣಿಯಾಗಿರುವುದು ಶ್ಲಾಘನೀಯ’ ಎಂದು ಹೇಳಿದರು.

‘ತಾಲ್ಲೂಕಿನಲ್ಲಿ ಶಿಥಿಲಗೊಂಡಿರುವ ಸಿಆರ್‌ಪಿ ಕಟ್ಟಡಗಳನ್ನು ತಮ್ಮ ಸ್ವಂತ ಮತ್ತು ದಾನಿಗಳ ಸಹಾಯದಿಂದ ಅಭಿವೃದ್ಧಿಗೊಳಿಸುವ ಮೂಲಕ ಇಲಾಖೆಯ ಅಳಿಲು ಸೇವೆ ಮಾಡುತ್ತಿರುವುದು ಖುಷಿ ತಂದಿದೆ. ಬಿಇಒ ಜಿ.ಎಂ. ಮುಂದಿನಮನಿ ಹೇಳಿದರು.

ಬಿಆರ್‌ಪಿ ಈಶ್ವರ ಎಸ್.ಮೆಡ್ಲೇರಿ, ಬಸವರಾಜ ಯರಗುಪ್ಪಿ, ವಾಸು ದೀಪಾಲಿ ಅವರು ಶಿಕ್ಷಣ ಇಲಾಖೆಯಲ್ಲಿನ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ನಡೆಯುವ ಕಾರ್ಯಚಟುವಟಿಕೆಗಳಾದ 5,8 ಮತ್ತು 9ನೇ ತರಗತಿ ಮೌಲ್ಯಾಂಕನ ಪೂರ್ವ ಸಿದ್ಧತೆ ಹೇಗೆ ಮಾಡಿಕೊಳ್ಳಬೇಕು ಎಂಬ ವಿಷಯದ ಕುರಿತು ಮತ್ತು ಮುಖ್ಯ ಗುರುಗಳು ತಮ್ಮ ಶಾಲೆಯಲ್ಲಿ ನಿರ್ವಹಿಸುವ ಜವಾಬ್ದಾರಿಗಳ ಕುರಿತು ಮಾತನಾಡಿದರು.

ಶಾಲೆಯ ನೂತನ ಎಸ್‌ಡಿಎಂಸಿ ಪದಾಧಿಕಾರಿಗಳನ್ನು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರನ್ನು ಸನ್ಮಾನಿಸಲಾಯಿತು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪ್ರೇಮಕ್ಕ ಮಾದರ, ಎಸ್‍ಡಿಎಂಸಿ ಅಧ್ಯಕ್ಷ ರಮೇಶ ಮರಿಹೊಳಲಣ್ಣನವರ, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ಎಂ.ಬಿ. ಹೊಸಮನಿ, ಡಿ.ಎಚ್. ಪಾಟೀಲ, ಬಿ.ಎಸ್. ಹರ್ಲಾಪೂರ, ಚಂದ್ರಕಾಂತ ನೇಕಾರ, ಎಲ್.ಎನ್. ನಂದೆಣ್ಣವರ, ಡಿ.ಡಿ. ಲಮಾಣಿ, ಬಿ.ಬಿ. ಯತ್ತಿನಹಳ್ಳಿ. ಪ್ರಭಾರಿ ಮುಖ್ಯ ಶಿಕ್ಷಕ ವೈ.ಎಸ್. ತಿರಕಣ್ಣವರ ಸಿಆರ್‌ಪಿ ಸಿ.ವಿ. ವಡಕಣ್ಣವರ, ಜಿ.ಆರ್. ಪಾಟೀಲ, ಎನ್.ಎನ್. ಸಾವಿರಕುರಿ, ಕೆಂಚಮ್ಮ ಕಂಬಳಿ, ಜ್ಯೋತಿ ಗಾಯಕವಾಡ, ಉಮೇಶ್ ನೇಕಾರ, ಗಿರೀಶ್ ನೇಕಾರ, ಸತೀಶ್ ಬೊಮಲೆ, ಎಲ್.ಎಫ್. ಮಠದ, ತಿರಕಪ್ಪ ಪೂಜಾರ, ಎಸ್.ಎನ್. ಪಶುಪತಿಹಾಳ, ಎನ್.ಎ. ಮುಲ್ಲಾ, ಎ.ಡಿ. ಸೋಮನಕಟ್ಟಿ, ಎಸ್.ಆರ್. ಪೂಜಾರ, ಆರ್.ಎಮ್. ಕಮ್ಮಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT