ಸುಗ್ನಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ; ಸಮಸ್ಯೆಗಳ ಮಹಾಪೂರ

7

ಸುಗ್ನಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ; ಸಮಸ್ಯೆಗಳ ಮಹಾಪೂರ

Published:
Updated:
Deccan Herald

ಶಿರಹಟ್ಟಿ: ’ಗ್ರಾಮದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ. ಮಕ್ಕಳು, ಮಹಿಳೆಯರು ನಿರ್ಭಿತಿಯಿಂದ ಸಂಚರಿಸುವುದು ಕಷ್ಟವಾಗಿದೆ. ದಯವಿಟ್ಟು ಸರಾಯಿ ಮುಕ್ತ ಗ್ರಾಮವನ್ನಾಗಿ ಮಾಡಬೇಕು‌‌’ ಇದು ತಾಲ್ಲೂಕಿನ ಸುಗ್ನಳ್ಳಿ ಗ್ರಾಮಕ್ಕೆ  ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಭೇಟಿ ನೀಡಿದಾಗ, ಅಲ್ಲಿನ ಮಹಿಳೆಯರು ಅವಲತ್ತುಕೊಂಡ ಪರಿ.

ಪಾನ್‌ಶಾಪ್‌, ಕಿರಾಣಿ ಅಂಗಡಿಗಳಲ್ಲಿ ಕೆಲವರು ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾರೆ. ಕೆಲವರು ಸಂಜೆಯಾದೊಡನೆ ಜೇಬಿನಲ್ಲಿಟ್ಟುಕೊಂಡು ಸರಾಯಿ ಮಾರಾಟ ಮಾಡುವ ಪ್ರಕರಣಗಳು ಇಲ್ಲಿ ಸಾಕಷ್ಟು ಕಂಡುಬರುತ್ತಿವೆ.ನೆಮ್ಮದಿ ಜೀವನ ನಡೆಸಲು ತೀವ್ರ ತೊಂದರೆಯಾಗಿದೆ.ಇದಕ್ಕೆ ಪರಿಹಾರ ಕಲ್ಪಿಸಿ ಎಂದು ಮನವಿ ಮಾಡಿಕೊಂಡರು.

ನಾಲ್ಕು ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಹಲವು ದಶಕಗಳಿಂದ ಕುಡಿಯುವ ನೀರಿನ ಸಮಸ್ಯೆ ಇದೆ. ಪ್ಲೋರೈಡಯುಕ್ತ ನೀರನ್ನು ಸೇವಿಸುತ್ತಿದ್ದು, ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

‘ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಸುಗ್ನಳ್ಳಿ ಗ್ರಾಮ ಸೇರ್ಪಡೆಯಾಗಿದ್ದು, ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಿ, ನೀರು ಪೂರೈಕೆಗೆ ಕ್ರಮ ವಹಿಸಲಾಗುವುದು’ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.

ಉಪವಿಭಾಗಾಧಿಕಾರಿ ಪಿ.ಎಸ್‌. ಮಂಜುನಾಥ, ತಹಶೀಲ್ದಾರ್‌ ಎ.ಡಿ. ಅಮರಾವದಗಿ, ತಾಲ್ಲೂಕು ಪಂಚಾಯ್ತಿ ಇ.ಒ ಆರ್‌.ವೈ. ಗುರಿಕಾರ, ನೀರು ಸರಬರಾಜು ಇಲಾಖೆ ಅಧಿಕಾರಿ ಬಾಬುರಾವ ಜ್ಯೋತಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗಿರಿಜಮ್ಮ ಕುರಿ, ಶಿವಲಿಂಗಪ್ಪ ಜಕ್ಕಲಿ, ವಿರೂಪಾಕ್ಷಪ್ಪ ರಾಹುತ, ಸುಭಾಶ ಬಡ್ನಿ, ನಾಗಪ್ಪ ಓಲೇಕಾರ, ಮಂಜುನಾಥ ಅಡವಿ, ಶಂಕ್ರಪ್ಪ ಕುರಿ ಮತ್ತಿತರರು ಉಪಸ್ಥಿತರಿದ್ದರು

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !