ನರಗುಂದ: ಪಟ್ಟಣದಲ್ಲಿ ಸುತ್ತಾಡುತ್ತಿರುವ ದನಕರುಗಳನ್ನು ಸ್ಥಳಾಂತರಿಸದೇ ಅವುಗಳ ಸುರಕ್ಷತೆಗಾಗಿ ಕೊಂಡವಾಡ ನಿರ್ಮಾಣ ಮಾಡಬೇಕು. ಗೋವು, ದನಕರುಗಳನ್ನು ರಕ್ಷಿಸಲು ಮುಂದಾಗಬೇಕು ಎಂದು ಆಗ್ರಹಿಸಿ ಗೋ ಸೇವಾ ಸಮಿತಿಯ ತಾಲ್ಲೂಕು ಘಟಕದಿಂದ ತಹಶೀಲ್ದಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗೋ ಸೇವಾ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ರಾಜೇಂದ್ರ ಪಾಟೀಲ, ‘ಪಟ್ಟಣದಲ್ಲಿ ಈ ಮೊದಲು ದನ-ಕರುಗಳನ್ನು ಹಾಕಲು ಕೊಂಗವಾಡ ಇತ್ತು. ಈಗ ಕೆಲ ವರ್ಷಗಳ ಹಿಂದೆ ಇದ್ದ ಕೊಂಗವಾಡದಚ ಜಾಗವನ್ನು ಪುರಸಭೆ ಬಳಸಿಕೊಂಡಿದ್ದು, ದನ ಕರುಗಳಿಗಾಗಿ ಪರ್ಯಾಯ ಜಾಗ ಮೀಸಲಿಟ್ಟಿಲ್ಲ’ ಎಂದು ದೂರಿದರು.

ರೈತ ಸಂಗಪ್ಪ ಪೂಜಾರ ಮಾತನಾಡಿ, ‘ನಗರದಲ್ಲಿ ಸುತ್ತಾಡುತ್ತಿರುವ ದನಕರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾರೆ. ಪುರಸಭೆ ಇಲಾಖೆಯು ರಸ್ತೆಯಲ್ಲಿ ತಿರಗಾಡುತ್ತಿರುವ ದನಕರುಗಳನ್ನು ಗೋಶಾಲೆಗೆ ಬಿಟ್ಟು ಬರುವ ನೆಪದಲ್ಲಿ ಖಾಸಗಿ ವಾಹನಗಳಲ್ಲಿ ಸಾಗಾಟ ಮಾಡುವುದು ಕಂಡು ಬಂರುತ್ತಿದೆ. ನಗರದಲ್ಲಿ ಸೂಕ್ತ ಸ್ಥಳ ಗುರುತಿಸಿ ಗೋವುಗಳಿಗಾಗಿ ಕೊಂಗವಾಡ ಮಾಡಬೇಕು’ ಎಂದು ಆಗ್ರಹಿಸಿದರು.

ಭಾರತೀಯ ಕಿಸಾನ್ ಸಂಘದ ಜಿಲ್ಲಾ ಮುಖಂಡ ಎಸ್.ಎಸ್ ಪಾಟೀಲ, ರವಿಗೌಡ ಪಾಟೀಲ, ಸಂಗಣ್ಣ ಕಳಸಾ ಮಾತನಾಡಿದರು.

ಮೀನಾಜಿ ಜೋರಾಪೂರ, ರವಿಗೌಡ ಪಾಟೀಲ, ಶಂಕರಗೌಡ ಪಾಟೀಲ, ಭಾರತೀಯ ಕಿಸಾನ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಗಾಳಪ್ಪನವರ, ಚಂದ್ರಗೌಡ ಕನ್ನೂರ, ಅಜ್ಜನಗೌಡ ಪಾಟೀಲ, ವಿಠ್ಠಲ ಮುಧೋಳೆ, ಮಾಧು ಪವಾರ, ವೆಂಕನಗೌಡ ಮುದ್ದನಗೌಡ್ರ, ನಾಗರಾಜ ಚಿತ್ರಗಾರ, ಬಸವರಾಜ ಪೂಜಾರ, ಮಂಜು ಮೆಣಸಗಿ, ಮುತ್ತು ಚಿಕ್ಕನರಗುಂದ, ಪ್ರವೀಣ ವಡ್ಡರ, ಸಚೀನ ಸಾಬಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.