ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಮಾಲರಿಗೆ ನೆರವು ನೀಡಲು ಆಗ್ರಹ

Last Updated 24 ಸೆಪ್ಟೆಂಬರ್ 2020, 4:18 IST
ಅಕ್ಷರ ಗಾತ್ರ

ಮುಂಡರಗಿ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ಎಪಿಎಂಸಿಯ ಅನ್ನದಾನೀಶ್ವರ ಹಮಾಲರ ಸಂಘದ ಕಾರ್ಯಕರ್ತರು ಬುಧವಾರ ಕೆಲಸ ಸ್ಥಗಿತಗೊಳಿಸಿ ಎಪಿಎಂಸಿ ಕಾರ್ಯದರ್ಶಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ರಾಜ್ಯದ ಹಲವಾರು ಎಪಿಎಂಸಿ ಮತ್ತು ನಗರ ಗ್ರಾಮೀಣ ಪ್ರದೇಶದಲ್ಲಿ ನನೆಗುದಿಗೆ ಬಿದ್ದಿರುವ ವಸತಿ ಯೋಜನೆಯನ್ನು ಜಾರಿಗೆ ತರಲು ಅಗತ್ಯ ಕ್ರಮ ಕೈಗೊಳ್ಳಬೇಕು. ಕೋವಿಡ್-19 ಲಾಕ್‍ಡೌನ್ ಸಮಯದಲ್ಲಿ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೀಡಾಗಿರುವ ಎಲ್ಲ ಹಮಾಲಿ ಕಾರ್ಮಿಕರಿಗೆ ತಿಂಗಳಿಗೆ ₹7,500 ರಂತೆ ಕನಿಷ್ಠ ಆರು ತಿಂಗಳ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು.

ನೂತನವಾಗಿ ಜಾರಿಗೆ ಬಂದಿರುವ ಎಪಿಎಂಸಿ ಕಾಯ್ದೆಯು ಹಮಾಲರಿಗೆ ಮಾರಕವಾಗಿದ್ದು, ಅದು ಹಮಾಲಿ ಕಾರ್ಮಿಕರನ್ನು ಸಂಕಷ್ಟಕ್ಕೀಡು ಮಾಡುತ್ತದೆ. ಆದ್ದರಿಂದ ಅದನ್ನು ತಕ್ಷಣ ಹಿಂಪಡೆಯಬೇಕು. ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಭವಿಷ್ಯ ನಿಧಿ ಯೋಜನೆ ಹಾಗೂ ಪಿಂಚಣಿ ಜಾರಿ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯ ಕೆಲಸ 200 ದಿನಗಳಿಗೆ ಹೆಚ್ಚಿಸಬೇಕು. ನಗರ ಪ್ರದೇಶಗಳ ಬಡವರಿಗೂ ಉದ್ಯೋಗ ಖಾತ್ರಿ ಯೋಜನೆಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಪ್ರಧಾನಮಂತ್ರಿ ಜೀವನ್‌ ಜ್ಯೋತಿ ವಿಮಾ ಮತ್ತು ಸುರಕ್ಷಾ ವಿಮಾ ಯೋಜನೆಗೆ ಅಸಂಘಟಿತ ಕಾರ್ಮಿಕರನ್ನು ನೊಂದಾಯಿಸಿಕೊಳ್ಳಬೇಕು. ನೊಂದಾಯಿತ ಕಾರ್ಮಿಕರಿಗೆ ಮರಣ ಪರಿಹಾರ ನೀಡಬೇಕು ಮತ್ತು ಯೋಜನೆಗೆ ಸೇರುವ ಕಾರ್ಮಿಕರ ವಯಸ್ಸಿನ ಮಿತಿ 60ವರ್ಷಕ್ಕೆ ಹೆಚ್ಚಿಸಬೇಕು ಎಂದು ಮನವಿ ಮಾಡಿಕೊಂಡರು.

ಎಪಿಎಂಸಿ ಸಹಾಯಕ ಕಾರ್ಯದರ್ಶಿ ಎಂ.ಎಂ.ಪಟೇಲ್ ಅವರು ಮನವಿ ಸ್ವೀಕರಿಸಿದರು. ಹಮಾಲರ ಸಂಘದ ಉಪಾಧ್ಯಕ್ಷ ಯಮನಪ್ಪ ಪೂಜಾರ, ಗವಿಶಿದ್ದಪ್ಪ ಬಾಳಿಕಟ್ಟಿ, ಮರ್ದಾನಸಾಬ್ ತಪ್ಪಡಿ, ಹುಚ್ಚಪ್ಪ ಕಡೇಮನಿ, ಮಹಾಂತೇಶ ಹಾಲಿನವರ, ಕೋಟೆಪ್ಪ ಬೇವಿನಕಟ್ಟಿ, ಸುರೇಶ ಪೂಜಾರ, ರಮೇಶ ಅಬ್ಬಿಗೇರಿ, ನಿಂಗಪ್ಪ ಹರಿಜನ, ಅಬ್ದುಲ್‍ಸಾಬ್ ಜಾಲಗಾರ, ಯಮನೂರಪ್ಪ ಅಳವಂಡಿ, ಚಂದ್ರಪ್ಪ ಬಚನಳ್ಳಿ, ಪರಮೇಶ ಬ್ಯಾಲವಾಡಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT