ಮುಳಗುಂದ: ಪಟ್ಟಣದ ಐತಿಹಾಸಿಕ ಅಬ್ಬಿಕೆರೆ ಸೇರುತ್ತಿರುವ ಊರೊಳಗಿನ ಚರಂಡಿ ನೀರಿಗೆ ಹೊರ ಹೋಗಲು ಪರ್ಯಾಯ ವ್ಯವಸ್ಥೆ ಮಾಡದೆ ಇರುವುದರಿಂದ ಕೆರೆಯ ನೀರು ದುರ್ನಾತ ಬೀರುತ್ತಿದೆ.

ಒಂದು ಕಾಲದಲ್ಲಿ ಗ್ರಾಮದ ಜನರಿಗೆ ಕುಡಿಯುವ ಶುದ್ಧ ನೀರಾಗಿತ್ತು ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ. ಆದರೆ ಈಗ ಕೈ ತೊಳಿಯಲು ಸಹ ಯೋಚಿಸುವಷ್ಟು ನೀರು ಮಲೀನಗೊಂಡಿದೆ. ಈ ಕೆರೆ ಸರಾಸರಿ 20 ಎಕರೆ ವಿಸ್ತಿರ್ಣ ಹೊಂದಿದೆ.

ಕೆರೆಯ ದಕ್ಷಿಣ, ಪಶ್ಚಿಮ ದಿಕ್ಕಿನಲ್ಲಿರುವ ಬಹುಭಾಗ ಮನೆಗಳ ತ್ಯಾಜ್ಯ ನೀರು ಈ ಕೆರೆಗೆ ಬಂದು ಸೇರುತ್ತಿದೆ. ಇದರ ಸುತ್ತಲಿರುವ ಸಾರ್ವಜನಿಕರಿಗೆ ಕೆರೆ ದಡವೆ ಬಯಲು ಬರ್ಹಿದೆಸೆ ತಾಣವಾಗಿರುವುದು ದುರ್ದೈವದ ಸಂಗತಿ.

ತಿಪ್ಪೆ, ಇನ್ನಿತರ ಕಸವನ್ನು ತಂದು ದಡದಲ್ಲೆ ಸುರಿಯಲಾಗುತ್ತಿದೆ. ಇನ್ನೂಂದು ಕಡೆ ಸುಲಭ ಶೌಚಾಲಯದ ನೀರು ಪೈಪ್ ಒಡೆದು ಕೆರೆಗೆ ಸೇರುತ್ತಿದೆ. ಸ್ವಚ್ಛತೆ ಕುರಿತು ಪಪಂ ಮೂಡಿಸುತ್ತಿಲ್ಲ ಜಾಗೃತಿ ಎಂದು ಸಾರ್ವಜನಿಕರು ಅಸಮಾದಾನ ವ್ಯಕ್ತಪಡಿಸಿದ್ದಾರೆ.

ಕೆರೆಯ ಮದ್ಯ ಪ್ರಾಕೃತಿಕವಾದ ನಡುಗಡ್ಡೆಯಿದ್ದು ಪುರಾತನ ಹುಣಸೆ ಮರ, ಸಣ್ಣ ಪುಟ್ಟ ಗಿಡಗಂಟೆಗಳು ಬೆಳೆದು ವಿವಿಧ ಜಾತಿಯ ಪಕ್ಷಿಗಳ ನೆಲೆಸುವ ನೆಚ್ಚಿನ ತಾಣವಾಗಿದೆ. ಈಚೆಗೆ ಅಪರೂಪದ ವಿದೇಶಿ ಪಕ್ಷಿಗಳು ಸಹ ಇಲ್ಲಿ ಕಾಣುತ್ತಿರುವುದ ಜನರನ್ನು ಬೆರಗುಗೊಳಿಸಿವೆ.

2013 ರಲ್ಲಿ ಸ್ಥಳಿಯ ಪಂಚಾಯ್ತಿ ವತಿಯಿಂದ ಕೆರೆ ಅಭಿವೃದ್ದಿ ಮಾಡುವ ಯೋಜನೆ ಕೈಗೊಂಡಿತ್ತಾದರೂ ಸಂಪೂರ್ಣ ಕಾಮಗಾರಿ ನಡೆದಿರಲಿಲ್ಲ. ಈಗ ಅಂದಾಜು ₹ 2.75 ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದು ಸಂತಸ ಮೂಡಿಸಿದೆ.

ಆದರೆ ಮನೆಗಳ ತ್ಯಾಜ್ಯ ನೀರು ಕೆರೆಗೆ ಸೇರುವುದನ್ನ ತಪ್ಪಿಸಲು ಯೋಜನೆ ರೂಪಿಸಲಾಗಿಲ್ಲ. ಈ ಹಿಂದೆ ಹೊಲಗಳ ಮಳೆ ನೀರು ಹರಿದು ಬರುವ ಕಾಲುವೆ ನಿರ್ಮಾಣ ಮಾಡಲಾಗಿತ್ತು. ಈ ಕಾಲುವೆ ಮೂಲಕವು ಚರಂಡಿ ನೀರು ಬಂದು ಕೆರೆಗೆ ಸೇರುತ್ತಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಮಾಬೇಕು ಎಂದು ಕರ್ನಾಟಕ ಜನಪರ ಅಭಿವೃದ್ದಿ ವೇದಿಕೆಯ ಗದಗ ಜಿಲ್ಲಾ ಕಾರ್ಯಾಧ್ಯಕ್ಷ ಮಹಾಂತೇಶ ಎಸ್.ಕಣವಿ ಆಗ್ರಹಿಸಿದರು.

ಕೆಲವೆಡೆ ಚರಂಡಿ ನೀರು ಕೆರೆಗೆ ಸೇರುತ್ತಿದೆ. ಇದನ್ನು ಬೇರೆಡೆಗೆ ಸಾಗಿಸುವ ಯೋಜನೆ ಇದ್ದು ಕೆರೆ ಸುತ್ತಮುತ್ತಲಿರುವ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುತ್ತೇವೆ
ಮಂಜುನಾಥ ಗುಳೇದ ಪ.ಪಂ ಮುಖ್ಯಾಧಿಕಾರಿ

ಕೆರೆಗೆ ಮಲೀನ ನೀರು ಬರುವುದನ್ನು ತಡೆಯುವಂತೆ ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗುವದು. ಇದರ ಬಗ್ಗೆ ಮುಖ್ಯಾಧಿಕಾರಿಗಳ ಗಮನಕ್ಕೂ ತರಲಾಗುವುದು
ಲಕ್ಷ್ಮವ್ವ ಕುಂದಗೋಳ ಪಪಂ ಸದಸ್ಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.