ಶಿರಹಟ್ಟಿ: ಶಿಕ್ಷಕರು ದೇಶದ ನಿರ್ಮಾಪಕರಾಗಿದ್ದು, ಮಕ್ಕಳಿಗೆ ಮೌಲ್ಯಯುತ, ಸಂಸ್ಕಾರಯುತ ಶಿಕ್ಷಣ ನೀಡಬೇಕು. ಶಿಕ್ಷಣದಿಂದ ಮಾತ್ರ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣೇಗೌಡ ಎಚ್. ಪಾಟೀಲ ಅಭಿಪ್ರಾಯಪಟ್ಟರು.

ಸ್ಥಳೀಯ ಸೇಂಟ್ ಜೋಸೆಫ್ ಇಂಗ್ಲಿಷ್ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ 2025-26ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಪರೀಕ್ಷೆ ಒಂದು ಆಟವಿದ್ದಂತೆ. ಏಕಾಗ್ರತೆಯಿಂದ ಅಭ್ಯಾಸ ಮಾಡಿ ಪರೀಕ್ಷೆಯನ್ನು ಆಡಿ ಗೆಲ್ಲುವ ಆತ್ಮವಿಶ್ವಾಸ ತಮ್ಮದಾಗಿಸಿಕೊಳ್ಳಬೇಕು. ಭಯದಿಂದ ಓದಬಾರದು. ಪರೀಕ್ಷೆ ಸಂದರ್ಭದಲ್ಲಿ ಆತಂಕಕ್ಕೆ ಒಳಗಾಗದೆ ಮುಕ್ತವಾಗಿ ಓದಿದರೆ ಹೆಚ್ಚು ಅಂಕ ಗಳಿಸಬಹುದು. ಸಮಯ ಪರಿಪಾಲನೆ, ಏಕಾಗ್ರತೆ, ಆಸಕ್ತಿ, ಅರ್ಥೈಸಿಕೊಳ್ಳುವ ಮನೋಭಾವ ಯಶಸ್ಸಿನ ಸೂತ್ರವಾಗಿದೆ. ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೇರಿ ದೇಶದ ಸೇವೆ ಮಾಡುವಂತಾಗಬೇಕು. ಜ್ಞಾನವುಳ್ಳವರನ್ನು ಪ್ರಪಂಚವು ಕೈ ಬೀಸಿ ಕರೆಯುತ್ತಿದ್ದು, ನಮ್ಮ ಸಮಸ್ಯೆಗಳು ಪರಿಹರಿಸಕೊಳ್ಳಬೇಕಾದರೆ ಶಿಕ್ಷಣ ಪಡೆಯಬೇಕು. ವಿವಿಧ ರಂಗಗಳಲ್ಲಿ ಉತ್ತಮ ಶಿಕ್ಷಣ ಪಡೆದು ಬಂದಾಗ ಮಾತ್ರ ಸಮಾಜ, ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಕಡ್ಲಿಕೊಪ್ಪ ಮಾತನಾಡಿದರು. ಪಾಸ್ಟರ್ ಅಭಿನವ ಪಾಲ್, ಪಾಸ್ಟರ್ ರಾಜು ಮಳಿಗೇರ ಕ್ರಿಸ್ಮಸ್ ಸಂದೇಶ ಹೇಳಿದರು. ಶಾಲಾ ಮುಖ್ಯೋಪಾಧ್ಯಾಯ ಸುಖಲತಾ ಸಾಮ್ರಾಟ್, ಶಾಲಾ ಅಧ್ಯಕ್ಷ ಎಸ್.ಎಸ್.ಸಾಮ್ರಾಟ್, ಪ.ಪಂ ಮಾಜಿ ಸದಸ್ಯ ದೀಪು ಕಪ್ಪತ್ತನವರ, ಹೊನ್ನಪ್ಪ ಶಿರಹಟ್ಟಿ, ಮಂಜುನಾಥ ಘಂಟಿ, ದೇವಪ್ಪ ಬಟ್ಟೂರ, ಎಚ್.ಆರ್.ಬೆನಹಾಳ, ಅಜ್ಜು ಪಾಟೀಲ, ಮತ್ತು ಮಜ್ಜಗಿ, ಮಾಬುಸಾಬ ಲಕ್ಷ್ಮೇಶ್ವರ, ಆನಂದ ಕೋಳಿ, ಅಕ್ಬರ್ ಯಾದಗಿ, ಕವಿತಾ ಕಾಶಪ್ಪ ಸ್ವಾಮಿ, ಪಲ್ಲವಿ ಫಕೀರೇಶ ಸ್ವಾಮಿ ಸೇರಿದಂತೆ ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.