ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ಮಹಾಪರಿನಿರ್ವಾಣ ದಿನ ಆಚರಣೆ

Last Updated 7 ಡಿಸೆಂಬರ್ 2018, 17:38 IST
ಅಕ್ಷರ ಗಾತ್ರ

ಗದಗ: ಉತ್ತರ ಕರ್ನಾಟಕ ಚಲವಾದಿ ಮಹಾಸಭಾ ಜಿಲ್ಲಾ ಘಟಕದಿಂದ ಅಂಬೇಡ್ಕರ್‌ ಅವರ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಮಹಾಸಭಾದ ಪದಾಧಿಕಾರಿಗಳು ಇಲ್ಲಿನ ನಗರಸಭೆ ಆವರಣದಲ್ಲಿರುವ ಅಂಬೇಡ್ಕರ್‌ ಮೂರ್ತಿಗೆ ಪುಷ್ಪ ಅರ್ಪಿಸಿದರು. ಸಂಜೆ ಮೇಣದ ಬತ್ತಿ ಹಚ್ಚಿ ಅವರಿಗೆ ಗೌರವ ನಮನ ಸಲ್ಲಿಸಿದರು.

ಮಹಾಸಭಾದ ಗೌರವಾಧ್ಯಕ್ಷ ಚಂದ್ರಶೇಖರ ಕಾಳೆ, ಅಧ್ಯಕ್ಷ ರವಿ ಕರಬಸಣ್ಣವರ, ಉಪಾಧ್ಯಕ್ಷ ಹೇಮಂತ ಕಾಳೆ, ಬಸವರಾಜ ಚಲವಾದಿ, ಸಂಘಟನಾ ಕಾರ್ಯದರ್ಶಿ ಶಿವಾನಂದ ಚಲವಾದಿ, ಮಹಿಳಾ ಅಧ್ಯಕ್ಷ ವಸಂತಿ ಮಲ್ಲಾಪುರ, ಸಂಗಪ್ಪ ದೊಡ್ಡಮನಿ, ಯಲ್ಲಪ್ಪ ತಮ್ಮಣ್ಣವರ, ಮಲ್ಲಪ್ಪ ದೊಡ್ಡಮನಿ, ಹುಚ್ಚಪ್ಪ ಕರಬಸಣ್ಣವರ, ನಿಂಗಬಸಪ್ಪ ಸಿಕ್ಕೇರಿ, ಪ್ರಕಾಶ ಕಾಳೆ, ಶಿವಣ್ಣ ದೊಡ್ಡಮನಿ, ನಾಗಪ್ಪ ಕಾಳೆ, ಬಿ.ಜಿ. ಕರಬಸಣ್ಣವರ, ಲಕ್ಷ್ಮಣ ಚವಣ್ಣವರ, ಶೇಖಣ್ಣ ಮನ್ನೂರ, ಬಸವರಾಜ ತಮ್ಮಣ್ಣವರ, ಬಸವರಾಜ ಕರಬಸಣ್ಣವರ, ಶಂಭು ಕಾಳೆ, ರವಿ ಚಲವಾದಿ, ಬೂದೇಶ ಬಾಳಮ್ಮನವರ, ನಾಗರಾಜ ಚಲವಾದಿ ಇದ್ದರು.

ಜಿಲ್ಲಾಡಳಿತ:ಡಾ.ಬಿ.ಆರ್. ಅಂಬೇಡ್ಕರ್‌ ಅವರ ಮಹಾಪರಿನಿರ್ವಾಣ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ನಗರಸಭೆ ಆವರಣದಲ್ಲಿರುವ ಅಂಬೇಡ್ಕರ್‌ ಮೂರ್ತಿಗೆ ಮಾಲಾರ್ಪಣೆ ಮಾಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಡಿವೈಎಸ್‌ಪಿ ವಿಜಯಕುಮಾರ್ ಟಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಖಾಜಾ ಹುಸೇನ್ ಮುಧೋಳ ಇದ್ದರು.

ನಂತರ ಜಿಲ್ಲಾಡಳಿತ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು. ಖಜಾನೆ ಇಲಾಖೆಯ ಉಪನಿರ್ದೇಶಕ ಸುರೇಶ ಹಳ್ಯಾಳ, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎಸ್.ಜಿ. ಪಲ್ಲೇದ, ಕ್ರೀಡಾ ಇಲಾಖೆಯ ಅಧಿಕಾರಿ ವಿಶ್ವನಾಥ ಇದ್ದರು.

ಜಿಲ್ಲಾ ಪರಿಶಿಷ್ಟ ಜಾತಿ ಕಾಂಗ್ರೆಸ್‌ ವಿಭಾಗದಿಂದ ಡಾ.ಬಿ.ಆರ್. ಅಂಬೇಡ್ಕರ್ 62ನೇ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮ ನಡೆಯಿತು. ಮಾಜಿ ಶಾಸಕ ಡಿ.ಆರ್. ಪಾಟೀಲ, ನಗರಸಭೆಯ ಅಧ್ಯಕ್ಷ ಸುರೇಶ ಕಟ್ಟಿಮನಿ, ಬಸವರಾಜ ಕಡೇಮನಿ, ಗುರಣ್ಣ ಬಳಗಾನೂರ, ವಿದ್ಯಾಧರ ದೊಡ್ಡಮನಿ, ಸುಜಾತಾ ದೊಡ್ಡಮನಿ, ಮಾರ್ತಂಡಪ್ಪ ಹಾದಿಮನಿ, ವೀಣಾ ಕಟ್ನಳ್ಳಿ, ಮಹಾಂತೇಶ ಮಣ್ಣಮ್ಮನವರ, ಮಿಲಿಂದ ಕಾಳೆ, ವಸಂತ ಚವಡಣ್ಣವರ, ಸಂಗಪ್ಪ ನೀಲುಗಲ್ಲ, ವಿರೇಶ ಶಿವಶಿಂಪೇರ, ಮಹಾಂತೇಶ ಸೌದರಿ, ಮಹಾದೇವಪ್ಪ ದೊಡ್ಡಮನಿ, ಫಾರೂಕ ಬಾರಿಗಿಡದ, ಇಮಾಮಸಾಬ್ ಕದಡಿ, ಕರಬಸಣ್ಣವರ, ಶಂಭು ಕಾಳೆ ಇದ್ದರು.

ಕೆಎಸ್‌ಆರ್‌ಟಿಸಿ ನೌಕರರ ಸಂಘ:ಡಾ.ಬಿ.ಆರ್. ಅಂಬೇಡ್ಕರ್‌ ಅವರ ಮಹಾಪರಿನಿರ್ವಾಣ ದಿನದ ಅಂಗವಾಗಿ ಕೆ.ಎಸ್.ಆರ್.ಟಿ. ನೌಕರರ ಸಂಘದ ಪದಾಧಿಕಾರಿಗಳು ನಗರಸಭೆಯ ಆವರಣದಲ್ಲಿರುವ ಅಂಬೇಡ್ಕರ್‌ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಡಿ.ಟಿ.ಒ. ಬಸವಂತಪುರ, ಹಿರೇಮಠ, ಡಿಎಂಪಿ ಮಡಿವಾಳರ, ಪಿ.ಎಂ. ತೇರದಾಳ, ಬಿ.ಎನ್. ಮೇಟಿ, ಶಾಂತಣ್ಣ ಮುಳಗುಂದ, ರಾಮೇನಹಳ್ಳಿ, ಸಿ.ಎಂ. ಮದ್ನೂರ, ಬಿ.ಕೆ. ಹೊಸಮನಿ, ವೆಂಕಟೇಶ ಲಮಾಣಿ, ಎಂ.ಎಚ್. ಸಾಲಿ, ಪಿ.ಬಿ. ಹೊಸಮನಿ, ಸಂಕನಕಲ್ಲ, ಪಾಟೀಲ ಇದ್ದರು.

ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆ:ಬೆಟಗೇರಿಯ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಆಚರಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಗಣೇಶಸಿಂಗ್ ಬ್ಯಾಳಿ, ಎಸ್.ವಿ. ಶಿವಪ್ಪಯ್ಯನಮಠ, ಕೆ.ಎಸ್. ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT