ಗುರುವಾರ , ಅಕ್ಟೋಬರ್ 29, 2020
19 °C
ಸೋಂಕು ಪರೀಕ್ಷೆಗಾಗಿ ಈವರೆಗೆ ಸಂಗ್ರಹಿಸಿದ ಗಂಟಲು ದ್ರವ ಮಾದರಿ: 60,143

ಗದಗ ಜಿಲ್ಲೆ: 75 ಮಂದಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ಜಿಲ್ಲೆಯಲ್ಲಿ ಮತ್ತೆ 75 ಮಂದಿಗೆ ಕೋವಿಡ್‌–19 ದೃಢಪಟ್ಟಿದೆ’ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ.

ಗದಗ ತಾಲ್ಲೂಕಿನಲ್ಲಿ 35, ಮುಂಡರಗಿ 16, ನರಗುಂದ 4, ರೋಣ 11 ಹಾಗೂ ಶಿರಹಟ್ಟಿ ತಾಲ್ಲೂಕಿನ 9 ಮಂದಿಗೆ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ. 

ಸೋಂಕು ದೃಢಪಟ್ಟ ಪ್ರದೇಶಗಳು: ಗದಗ- ಬೆಟಗೇರಿ ನಗರಸಭೆ ವ್ಯಾಪ್ತಿಯ ಮುಳಗುಂದ ನಾಕಾ, ಆರ್.ಕೆ.ನಗರ, ಸೋಮೇಶ್ವರ ದೇವಸ್ಥಾನ ರಸ್ತೆ, ವೀರನಾರಾಯಣ ದೇವಸ್ಥಾನದ ರಸ್ತೆ, ಹುಡ್ಕೋ ಕಾಲೊನಿ, ಪಂಚಾಕ್ಷರಿ ನಗರ, ವಕೀಲ ಚಾಳ, ಜನತಾ ಪ್ಲಾಟ್‌, ವಿ.ಎನ್.ಟಿ.ರಸ್ತೆ, ಜೆ.ಟಿ.ಕಾಲೇಜು ರಸ್ತೆ, ರಾಜೀವಗಾಂಧಿ ನಗರ, ಚೌಡಿ ಕೂಟ, ಜವಳಿ ಗಲ್ಲಿ, ಗಾಂಧಿ ನಗರ, ಕಾಶಿ ವಿಶ್ವನಾಥ ನಗರ, ಗಂಗಾಪುರ ಪೇಟೆ, ಗದಗ ತಾಲ್ಲೂಕಿನ ಹುಲಕೋಟಿ, ಕುರ್ತಕೋಟಿ, ಲಕ್ಕುಂಡಿ, ಅಸುಂಡಿ.

ಮುಂಡರಗಿ ತಾಲ್ಲೂಕಿನ ಮುಂಡವಾಡ, ಗಂಗಾಪುರ, ಹಿರೇವಡ್ಡಟ್ಟಿ, ನರಗುಂದ ಪಟ್ಟಣದ ಸಿದ್ಧರಾಮೇಶ್ವರ ನಗರ, ನರಗುಂದ ತಾಲ್ಲೂಕಿನ ಮದಗುಣಕಿ, ಬೆನಕೊಪ್ಪ.

ರೋಣ ಪಟ್ಟಣದ ನವನಗರ, ರೋಣ ತಾಲ್ಲೂಕಿನ ಬೆಳವಣಕಿ, ಮಲ್ಲಾಪುರ, ಕೌಜಗೇರಿ, ನರೇಗಲ್, ಹಾಲಕೇರಿ, ಜಿಗೇರಿ, ಸವಡಿ, ಗಜೇಂದ್ರಗಡ ಪಟ್ಟಣದ ಬಸ್‌ ನಿಲ್ದಾಣದ ರಸ್ತೆ, ಗಡ್ಡಿಯವರ ಪ್ಲಾಟ್‌, ಶಿರಹಟ್ಟಿ ಪಟ್ಟಣದ ಇಂಗಳಾಪುರ ಓಣಿ, ಶ್ರೀನಿವಾಸ ಮೆಡಿಕಲ್ಸ್‌, ಹಳೆ ಪೋಸ್ಟ್‌ ಆಫೀಸ್‌ ರಸ್ತೆ, ಶಿರಹಟ್ಟಿ ತಾಲ್ಲೂಕಿನ ಹರಿಪುರ, ಲಕ್ಷ್ಮೇಶ್ವರದ ವಿನಾಯಕ ನಗರ, ಬಸ್ತಿ ಬಣ, ಪೇಟೆಬನದಲ್ಲಿ ಸೋಂಕು ಪ್ರಕರಣಗಳು ದಾಖಲಾಗಿವೆ.

–––––

ಗದಗ ಜಿಲ್ಲೆ ಅಂಕಿ ಅಂಶ

ಒಟ್ಟು ಪ್ರಕರಣಗಳು: 8,366; ಇಂದಿನ ಪ್ರಕರಣ: 75

ಸೋಂಕಿನಿಂದ ಗುಣಮುಖರಾದವರು: 7,366; ಇಂದಿನ ಗುಣಮುಖ: 149
 
ಸಕ್ರಿಯ ಪ್ರಕರಣಗಳು: 881

ಇಲ್ಲಿಯವರೆಗೆ ಕೋವಿಡ್‍ನಿಂದ ಮೃತಪಟ್ಟವರು: 119, ಇಂದಿನ ಸಾವು: 02

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು