ಶೌಚಾಲಯ ದುರಸ್ತಿಗೆ ಕಾರ್ಯಯೋಜನೆ ಸಿದ್ಧ: ಸಿಇಒ
‘ಗದಗ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳ ಶೌಚಾಲಯಗಳ ದುರಸ್ತಿಗೆ ವಿಶೇಷ ಕ್ರಮವಹಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಕಾರ್ಯಯೋಜನೆ ಸಿದ್ಧಗೊಂಡಿದ್ದು ಅದರ ಅನುಸಾರ ದುರಸ್ತಿ ಕಾರ್ಯ ಪೂರ್ಣಗೊಳಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭರತ್ ಎಸ್. ತಿಳಿಸಿದ್ದಾರೆ. ₹10 ಸಾವಿರದ ಒಳಗೆ ಮುಗಿಯಬಹುದಾದ ದುರಸ್ತಿಯನ್ನು ಸರ್ಕಾರದಿಂದ ಶಾಲೆಗಳಿಗೆ ಸಿಗುವ ನಿರ್ವಹಣಾ ವೆಚ್ಚದಿಂದಲೇ ಮಾಡಿಸುವಂತೆ ಸೂಚಿಸಲಾಗಿದೆ. ಹಾಗೆಯೇ ಹೆಚ್ಚು ವೆಚ್ಚ ಬೇಡುವ ಶೌಚಾಲಯಗಳನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಸಿಗುವ ಅನುದಾನ ಮತ್ತು ಗಣಿಬಾಧಿತ ಪ್ರದೇಶಗಳಲ್ಲಿನ ಶಾಲಾ ಶೌಚಾಲಯಗಳನ್ನು ಖನಿಜ ನಿಧಿ ಬಳಸಿ ದುರಸ್ತಿಗೊಳಿಸಲು ಯೋಜಿಸಲಾಗಿದೆ’ ಎಂದು ತಿಳಿಸಿದ್ದಾರೆ.