ನರೇಗಲ್: ‘ಭಾರತೀಯರೆಲ್ಲರೂ ಒಂದೇ ಎಂಬ ಮನೋಭಾವನೆ ಪ್ರತಿಯೊಬ್ಬ ಪ್ರಜೆಯ ಮಾತಾಗಬೇಕು ಆಗ ಮಾತ್ರ ಸುಭದ್ರ, ಸಂಘಟಿತ ದೇಶ ನಿರ್ಮಿಸಲು ಸಾಧ್ಯ’ ಎಂದು ಹಿರೇಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ನರೇಗಲ್ ಹೋಬಳಿ ಮಟ್ಟದ ಹಿಂದೂ ಸಮ್ಮೇಳನ ಕರಪತ್ರ ಗುರುವಾರ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದ ಅವರು, ಜ.24ರಂದು ಪಟ್ಟಣದಲ್ಲಿ ಹಮ್ಮಿಕೊಳ್ಳಲಾದ ಹಿಂದೂ ಸಮ್ಮೇಳನದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು’ ಎಂದರು

‘ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪಿಸಿ ನೂರು ವರ್ಷ ಪೂರ್ಣಗೊಳಿಸಿದ ನಿಮಿತ್ತ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ. ಸಮ್ಮೇಳನ ಮೂಲಕ ಹಿಂದೂ ಜಾಗೃತಿ, ರಾಷ್ಟ್ರಪ್ರೇಮ ಭಾವನೆಯನ್ನು ದೇಶದ ನಾಗರಿಕರಲ್ಲಿ ಮೂಡಿಸಲಾಗುತ್ತಿದೆ’ ಎಂದರು.

ಸಮ್ಮೇಳನ ಅಧ್ಯಕ್ಷ ಬಸವರಾಜ ವಂಕಲಕುಂಟಿ ಅವರು ಸಮ್ಮೇಳನ ಸಿದ್ದತೆ ಕುರಿತು ಮಾಹಿತಿ ನೀಡಿದರು. ಆನಂದ ಕುಲಕರ್ಣಿ, ಜಗದೀಶ ಸಂಕನಗೌಡ್ರ, ಆರ್.ಕೆ. ಗಚ್ಚಿನಮಠ, ಉಮೇಶ ಪಾಟೀಲ, ರಘುನಾಥ ಕೊಂಡಿ, ಮಂಜುನಾಥ ಹೆಗಡೆ, ಎಸ್.ಕೆ. ಪಾಟೀಲ, ಮಲ್ಲನಗೌಡ ಪಾಟೀಲ, ಶಿವಕುಮಾರ ಮಾವಿನಕಾಯಿ, ಚನಬಸಪ್ಪ ಕುಷ್ಟಗಿ, ರವಿ ಮ್ಯಾಗೇರಿ, ಮಹೇಶ ಜೋಳದ, ಸುರೇಖಾ ರಾಯಭಾಗಿ, ಶಿಮಾ ಕೊಂಡಿ, ನಿರ್ಮಲಾ ಹಿರೇಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.