ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುನೀತ ಸಾಮ್ರಾಟ ಕಣವಿ!

Last Updated 17 ಫೆಬ್ರುವರಿ 2022, 7:48 IST
ಅಕ್ಷರ ಗಾತ್ರ

ಗದಗ: ಕನ್ನಡ ಸಾರಸ್ವತ ಲೋಕಕ್ಕೆ ‘ಚೆಂಬೆಳಕಿನ ಕವಿ’ ಚೆನ್ನವೀರ ಕಣವಿ ಅವರ ಕೊಡುಗೆ ಅಪಾರ. ಸತ್ವಯುತ ಕವಿತೆಗಳ ಪ್ರತಿ ಸಾಲುಗಳೂ ಅವರನ್ನು ಯಶಸ್ಸಿನ ಉತ್ತುಂಗಕ್ಕೇರಿಸಿದ್ದವು. ಸಾರಸ್ವತ ಲೋಕದ ಕಾವ್ಯ ಸಿಂಹಾಸನದಲ್ಲಿ ವಿರಾಜಮಾನರಾದರೂ ಅವರು ಹುಟ್ಟಿದ ಊರು, ಮೆಟ್ಟಿದ ನೆಲವನ್ನು ಎಂದಿಗೂ ಮರೆಯಲಿಲ್ಲ. ಗದಗ ಜಿಲ್ಲೆಯೊಂದಿಗಿನ ನಂಟನ್ನು ಕೊನೆವರೆಗೂ ಉಳಿಸಿಕೊಂಡಿದ್ದರು.

ಚನ್ನವೀರ ಕಣವಿ ಅವರು ಗದುಗಿನ ತೋಂಟದಾರ್ಯ ಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳ ಜತೆಗೆ ಉತ್ತಮ ಒಡನಾಟ ಇರಿಸಿಕೊಂಡಿದ್ದರು. ಶ್ರೀಗಳ ಜತೆಗೆ ಗೋಕಾಕ್‌ ಚಳವಳಿಯಲ್ಲೂ ಭಾಗವಹಿಸಿದ್ದರು.

ಅಂದಹಾಗೆ, ಚನ್ನವೀರ ಕಣವಿ ಅವರು ಜನಿಸಿದ್ದು ಗದಗ ತಾಲ್ಲೂಕಿನ ಹೊಂಬಳ ಗ್ರಾಮದಲ್ಲಿ. ಹೊಂಬಳ ಗ್ರಾಮ ಕಣವಿ ಅವರ ತಾಯಿ ಪಾರ್ವತವ್ವ ಅವರ ತವರುಮನೆ. ತಂದೆ ಸಕ್ಕರಪ್ಪ ಅವರು ಪ್ರಾಥಮಿಕ ಶಾಲೆ ಶಿಕ್ಷಕರಾಗಿದ್ದರು. ಬಳಿಕ ಇವರ ಕುಟುಂಬ ಧಾರವಾಡ ಸಮೀಪದ ಗರಗ ಗ್ರಾಮಕ್ಕೆ ಸ್ಥಳಾಂತರಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT