ಲಕ್ಷ್ಮೇಶ್ವರ: ಕಿತ್ತೂರು ರಾಣಿ ಚನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಲಕ್ಷ್ಮೇಶ್ವರ ಶಾಖೆಯಲ್ಲಿ ಠೇವಣಿದಾರರಿಗೆ ಕಳೆದ ಎಂಟು ವರ್ಷಗಳಿಂದ ಠೇವಣಿ ಹಣ ಹಿಂದಿರುಗಿಸದೇ ಸತಾಯಿಸುತ್ತಿದ್ದು, ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಬುಧವಾರ ಜೈ ಹೋ ಜನತಾ ವೇದಿಕೆಯ ಸಹಯೋಗದಲ್ಲಿ ಠೇವಣಿದಾರರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ವಾಸುದೇವ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಜೈ ಹೋ ಜನತಾ ವೇದಿಕೆಯ ರಾಜ್ಯ ಘಟಕ ಅಧ್ಯಕ್ಷ ಶಿವಾನಂದ ಹಿರೇಮಠ ಮತ್ತು ಸಾಮಾಜಿಕ ಹೋರಾಟಗಾರ ರವಿ ಹೊನ್ನಿಕೊಳ್ಳ ಮಾತನಾಡಿ ‘ಲಕ್ಷ್ಮೇಶ್ವರದ ಶಾಖೆಯಲ್ಲಿ ಅಂದಾಜು ₹5.25 ಕೋಟಿಗೂ ಅಧಿಕ ಠೇವಣಿ ಹಣವಿದ್ದು, ಕಾಲು ಭಾಗದಷ್ಟು ಸಾಲವನ್ನು ನೀಡಿ ಉಳಿದ ಹಣವನ್ನು ಕೇಂದ್ರ ಕಚೇರಿಗೆ ತೆಗೆದುಕೊಳ್ಳಲಾಗಿದೆ’ ಎಂದು ಆರೋಪಿಸಿದರು.

ಕೂಡಲೇ ಠೇವಣಿದಾರರ ಹಣವನ್ನು ಮರಳಿಸಲು ಕ್ರಮಕೈಗೊಳ್ಳಬೇಕು. ಸಂಘದ ಕೇಂದ್ರ ಕಚೇರಿಯ ಆಡಳಿತ ಮಂಡಳಿಯನ್ನು ವಂಚನೆ ಆರೋಪದಡಿ ಬಂಧಿಸಿ ತಕ್ಕ ಶಿಕ್ಷೆ ನೀಡಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದರು.

ಠೇವಣಿದಾರರಾದ ಅಪ್ಪಣ್ಣ ಸೊರಟೂರ, ಸಚಿನ್ ಕರ್ಜೆಕಣ್ಣವರ, ದಿನೇಶ ಗಾಂಜಿ, ವಿ.ಸಿ. ರಬಕವಿ, ಎಸ್.ಎಸ್. ವಸ್ತ್ರದ, ಮೃತ್ಯುಂಜಯ ಹಾವೇರಿಮಠ, ಮಹಾಂತೇಶ ಕರ್ಜೆಕಣ್ಣವರ, ಶ್ರೀಪಾಲ ಗಾಂಧಿ, ಎಸ್.ಎನ್. ಮಲ್ಲಾಡದ, ಈರಣ್ಣ ದವಡಿ, ಬಸವರಾಜ ಚಕ್ರಸಾಲಿ, ಪ್ರಾಣೇಶ ವ್ಯಾಪಾರಿ, ಮಧು ಗಾಂಧಿ, ಖುಷಿ ಗಾಂಧಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.