ನರೇಗಲ್: ಜನರಲ್ಲಿ ಓದಿನ ಅಭಿರುಚಿ ಹೆಚ್ಚಿಸುವಲ್ಲಿ ಹಾಗೂ ಶೈಕ್ಷಣಿಕ, ಸಾಂಸ್ಕೃತಿಕ ಜ್ಞಾನದ ವಿಕಾಸವನ್ನು ಕಾಣುವಲ್ಲಿ ಗ್ರಂಥಾಲಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ನರೇಗಲ್ ಪಟ್ಟಣ ಹಾಗೂ ಹೋಬಳಿಯಾದ್ಯಂತ ವಿವಿಧ ಗ್ರಾಮಗಳಲ್ಲಿ ಗ್ರಂಥಾಲಯಗಳ ನಿರ್ವಹಣೆ ಸಮಸ್ಯೆಯಿಂದಾಗಿ ಅನೇಕ ಕಡೆಗಳಲ್ಲಿ ಬಾಗಿಲು ಹಾಕಲಾಗಿದೆ. ಸಿಬ್ಬಂದಿ ಕೊರತೆ, ಕಟ್ಟಡ ಸಮಸ್ಯೆಯಿಂದಾಗಿ ಗ್ರಾಮೀಣ ಜನರಿಗೆ ಪುಸ್ತಕ, ಪತ್ರಿಕೆಗಳು ಸಿಗದಂತಾಗಿವೆ.

ಕಳೆದೆರಡು ವರ್ಷಗಳಿಂದ ಸರ್ಕಾರ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಂಥಾಲಯಗಳನ್ನು ಆರಂಭಿಸುತ್ತಿದೆ. ಆದರೆ ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಅವುಗಳಿಗೆ ಬೀಗ ಬೀಳುತ್ತಿವೆ. ಬೆರಳೆಣಿಕೆಯಷ್ಟು ಗ್ರಂಥಾಲಯಗಳು ಮಾತ್ರ ಸುಸಜ್ಜಿತವಾಗಿವೆ. ಉಳಿದವು ನಾಮಕಾವಾಸ್ತೆ ಎಂಬಂತಿವೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರು ಆರೋಪ ಮಾಡಿದ್ದಾರೆ.

ಗದಗ ಜಿಲ್ಲೆಯ ವಿದ್ಯಾಕಾಶಿ ಎಂದು ಪ್ರಸಿದ್ದಿಯಾಗಿರುವ ನರೇಗಲ್ ಪಟ್ಟಣದ ಗ್ರಂಥಾಲಯಕ್ಕೆ ಇಂದಿಗೂ ಕಟ್ಟಡ ಭಾಗ್ಯ ದೊರೆತಿಲ್ಲ. ಪಟ್ಟಣ ಪಂಚಾಯಿತಿ ಪಕ್ಕದಲ್ಲಿರುವ ಗ್ರಂಥಾಲಯವು ಮೂಲಸೌಕರ್ಯಗಳ ಕೊರತೆಯಿಂದ ಸೊರಗಿದೆ. ಹಲವು ವರ್ಷಗಳ ಹಿಂದೆ ನಿರ್ಮಿಸಿದ ಕಟ್ಟಡದಲ್ಲಿ ಗ್ರಂಥಾಲಯ ನಡೆಯುತ್ತಿದೆ. ಕಟ್ಟಡದ ಚಾವಣಿ ಶಿಥಿಲಾವಸ್ಥೆಗೆ ತಲುಪಿದೆ. ಮಳೆ ಬಂದಾಗ ಚಾವಣಿ ಸೋರುತ್ತದೆ. ಓದುಗರು ಕುಳಿತುಕೊಳ್ಳಲು ಕಟ್ಟಡದಲ್ಲಿ ಸರಿಯಾದ ಆಸನಗಳು, ಟೇಬಲ್ ಮತ್ತು ಸಮರ್ಪಕ ಬೆಳಕಿನ ವ್ಯವಸ್ಥೆ ಸೇರಿದಂತೆ ಇನ್ನಿತರೆ ಸೌಕರ್ಯಗಳು ಇಲ್ಲ. ಗ್ರಂಥಾಲಯದ ಮುಂಭಾಗದಲ್ಲಿ ಕೆಲವೊಮ್ಮೆ ಕಲ್ಲಿನ ಕಡಿ, ಮರಳು ಹಾಕಿರುತ್ತಾರೆ. ಎದುರಲ್ಲಿಯೇ ಮೂತ್ರ ವಿಸರ್ಜನೆಗೆ ಮುಂದಾಗುತ್ತಾರೆ. ಸ್ವಲ್ಪ ದೂರದಲ್ಲಿರುವ ಗಾಂಧಿ ಭವನದಲ್ಲಿ ಟ್ರಾಕ್ಟರ್, ಕಾರ್, ಟಂಟಂ ಪಾರ್ಕಿಂಗ್ ಮಾಡುತ್ತಾರೆ. ಎತ್ತುಗಳನ್ನು ಸಹ ಕಟ್ಟುತ್ತಾರೆ. ಸಂಜೆಯಾದರೆ ಕುಡುಕರ, ಪುಂಡರ ಅಡ್ಡೆಯಾಗಿ ಪರಿವರ್ತನೆಯಾಗುತ್ತದೆ. ಇದರಿಂದಾಗಿ ಜನರು ಗ್ರಂಥಾಲಯದ ಕಡೆಗೆ ಹೋಗುತ್ತಿಲ್ಲ.

ಗ್ರಾಮದ ಸಂತೆ ಬಜಾರಿನ ಗಣೇಶ ಗುಡಿಯ ಎದುರಲ್ಲಿ ಕಿರು ಕಟ್ಟಡವೊಂದನ್ನು ನಿರ್ಮಿಸಲಾಗಿದೆ. ಅದನ್ನು ಗ್ರಂಥಾಲಯಕ್ಕೆ ಮೀಸಲಿಡಲಾಗಿದೆ ಎನ್ನುತ್ತಾರೆ. ಆದರೆ ಅದನ್ನು ಸಾರ್ವಜನಿಕ ಮೂತ್ರಾಲಯದ ಪಕ್ಕದಲ್ಲಿ ನಿರ್ಮಿಸಿರುವುದರಿಂದ ಓದುಗರಿಗೆ ಕಿರಿಕಿರಿ ಆಗುತ್ತದೆ ಎನ್ನುವ ಆರೋಪದಿಂದ ಹಸ್ತಾಂತರವಾಗಿಲ್ಲ. ಪಟ್ಟಣಕ್ಕೆ ಕಲ್ಯಾಣ ಕರ್ನಾಟಕ ಹಾಗೂ ವಿವಿಧ ಊರುಗಳಿಂದ ಕಲಿಯಲಿಕ್ಕೆ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಬರುತ್ತಾರೆ. ಅವರಿಗೆ ಹಾಗೂ ಸ್ಥಳೀಯರಿಗೆ ಅನಕೂಲವಾಗುವ ಹಾಗೆ ಸೂಕ್ತ ಜಾಗದಲ್ಲಿ ನಿರ್ಮಾಣ ಮಾಡಬೇಕು ಎನ್ನುವುದು ಪುಸ್ತಕ ಪ್ರೇಮಿಗಳ ಆಗ್ರಹವಾಗಿದೆ.

ಇಲ್ಲಿನ ಗ್ರಂಥಾಲಯದಲ್ಲಿ ಸಾಹಿತ್ಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲಕರವಾದ ಪುಸ್ತಕಗಳನ್ನು ದುರ್ಬೀನು ಹಾಕಿ ಹುಡುಕಿದರೂ ಸಿಗುವುದಿಲ್ಲ. ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ತಾಂತ್ರಿಕ ಶಿಕ್ಷಣ ಪಡೆದ ಯುವಕರು ನಾನಾ ಹುದ್ದೆಗಳಿಗೆ ಅರ್ಜಿ ಹಾಕಿದ್ದು, ಅವರಿಗೆ ಓದಲು ಪುಸ್ತಕಗಳ ಕೊರತೆ ಎದುರಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿರುವ ಯುವಕರಿಗೆ ನರೇಗಲ್ ಪಟ್ಟಣದಲ್ಲಿ ಸಾರ್ವಜನಿಕ ಗ್ರಂಥಾಲಯವಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲದಂತಾಗಿದೆ. ಆದ್ದರಿಂದ ಈ ಕುರಿತು ಜಾಗೃತಿ ಮೂಡಿಸಿ ಅಗತ್ಯ ಪುಸ್ತಕಗಳನ್ನು ತರಬೇಕು ಹಾಗೂ ಈಗಿನ ಕಟ್ಟಡವನ್ನು ಕಡವಿ ಸುಸಜ್ಜಿತವಾದ ಆಧುನಿಕ ಗ್ರಂಥಾಲಯ ನಿರ್ಮಾಣ ಮಾಡಬೇಕು ಎಂದು ಶಿಕ್ಷಕ ರಮೇಶ ಆಗ್ರಹಿಸಿದರು.

ಜಕ್ಕಲಿ ಗ್ರಾಮದ ಬಸ್ ನಿಲ್ದಾಣದ ಒಂದು ಭಾಗದಲ್ಲಿ ಅದ್ದೂರಿಯಾಗಿ ಆರಂಭಿಸಲಾದ ಗ್ರಂಥಾಲಯ ದೂಳು ಹಿಡಿದಿದೆ. ಒಂದೂ ಪುಸ್ತಕಗಳಿಲ್ಲ. ಓದುಗರು ಬಂದು ಕುಳಿತುಕೊಂಡು ಓದಲು ಪತ್ರಿಕೆಗಳಿಲ್ಲ. ಸಂಚಾರಿ ಜನರು ಬಂದು ನೆಲೆಸುವ ತಾಣವಾಗಿದೆ. ಆದರೆ ಪಕ್ಕದಲ್ಲಿಯೇ ಇರುವ ಗ್ರಾಮ ಪಂಚಾಯಿತಿ ಅಧಿಕಾರಿಗಳು ಈ ಕುರಿತು ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ಅದೇರೀತಿ ನಿಡಗುಂದಿಕೊಪ್ಪ ಗ್ರಾಮದಲ್ಲಿ ಆರಂಭಿಸಲಾದ ಗ್ರಂಥಾಲಯವೂ ಕದ ಹಾಕಿರುತ್ತದೆ. ಗ್ರಂಥಪಾಲಕರಿಗೆ ತಿಳಿದಾಗ ಮಧ್ಯಾಹ್ನದ ನಂತರ ತೆರೆಯುತ್ತಾರೆ. ಹೀಗಾಗಿ ಜನರಿಗೆ ಅನಕೂಲವಾಗಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಶನಿವಾರ, ಭಾನುವಾರ ಎರಡು ದಿನ ಮಧ್ಯಾಹ್ನದ ನಂತರ ಗ್ರಂಥಾಲಯ ತೆರೆಯುತ್ತೇವೆ. ಮೂರು ಪತ್ರಿಕೆಗಳನ್ನು ತೆಗೆದುಕೊಳ್ಳುತ್ತೇವೆ ಎಂದು ನಿಯೋಜಿತ ಗ್ರಂಥಪಾಲಕಿ ಶರಣಮ್ಮ ಕುರಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.