ಮಂಗಳವಾರ, ಸೆಪ್ಟೆಂಬರ್ 27, 2022
27 °C

ವಿಜೃಂಭಣೆಯ ಮಡಿವಾಳ ಮಾಚಿದೇವರ ಜಾತ್ರಾ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಇಲ್ಲಿನ ಗಂಗಾಪೂರ ಪೇಟೆಯಲ್ಲಿರುವ ವೀರಗಂಟಿ ಮಡಿವಾಳ ಮಾಚಿದೇವರ 49ನೇ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ 5.30ಕ್ಕೆ ರುದ್ರಾಭಿಷೇಕ ನಡೆಯಿತು. ಬೆಳಿಗ್ಗೆ 9ಕ್ಕೆ ಗುರು ಮಡಿವಾಳ ಮಾಚಿದೇವರ ಭಾವಚಿತ್ರ ಮೆರವಣಿಗೆ ತೋಂಟದಾರ್ಯ ಮಠದ ಆವರಣದಿಂದ ಹೊರಟು ಮಹೇಂದ್ರಕರ ಸರ್ಕಲ್‌ ಟಾಂಗಕೂಟ, ಹತ್ತಿಕಾಳ ಕೂಟ, ತಿಲಕ್‌ ಪಾರ್ಕ್‌, ಜುಮ್ಮಾ ಮಸೀದಿ ಮಾರ್ಗ, ಚವಡಿ ಕೂಟ, ಪ್ಯಾಟಿ ವೀರಭದ್ರೇಶ್ವರ ದೇವಸ್ಥಾನದ ಮಾರ್ಗವಾಗಿ ಗಂಗಾಪೂರ ಪೇಟೆ ತಲುಪಿತು. ಮಾಚಿ ದೇವರ ಮೆರವಣಿಗೆಗೆ ಡೊಳ್ಳು ಕುಣಿತ ಮೆರಗು ತುಂಬಿತು. 

ಮಧ್ಯಾಹ್ನ 12.30ಕ್ಕೆ ಮಹಾ ಅನ್ನ ಸಂತರ್ಪಣೆ ನಡೆಯಿತು. ಇದೇ ಸಂದರ್ಭದಲ್ಲಿ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರಿಗೆ ಗದಗ ಶಹರ ಮಡಿವಾಳ ಸಮುದಾಯದ ಗುರು ಹಿರಿಯರು ಸನ್ಮಾನ ಮಾಡಿದರು ಎಂದು ಸಮುದಾಯ ಮುಖಂಡ ಮಹೇಶ ಮಡಿವಾಳರ ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.