ನಗರಸಭೆಯಿಂದ ಮತದಾನ ಜಾಗೃತಿ

ಮಂಗಳವಾರ, ಏಪ್ರಿಲ್ 23, 2019
33 °C

ನಗರಸಭೆಯಿಂದ ಮತದಾನ ಜಾಗೃತಿ

Published:
Updated:
Prajavani

ಗದಗ: ನಗರಸಭೆ ಸಿಬ್ಬಂದಿಯಿಂದ ನಗರದಲ್ಲಿ ಮಂಗಳವಾರ ಮತದಾನದ ಜಾಗೃತಿ ಕಾರ್ಯಕ್ರಮ ನಡೆಯಿತು.

ನಗರಸಭೆ ಕಚೇರಿಯಿಂದ ಆರಂಭವಾದ ಮತದಾನದ ಜಾಗೃತಿ ಮೂಡಿಸುವ ಮೆರವಣಿಗೆಯು ಗಾಂಧಿ ವೃತ್ತ, ಹಳೇ ಕೋರ್ಟ್‌, ಬಸವೇಶ್ವರ ನಗರ, ಡಿ.ಸಿ. ಮಿಲ್‌ನ ತಳಗೇರಿ ಓಣಿ, ಜವಳ ಗಲ್ಲಿ, ಹುಡ್ಕೋ ಕಾಲೊನಿ, ಬೆಟಗೇರಿ ಭಾಗದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಗದಗ ತಾಲ್ಲೂಕು ಪಂಚಾಯ್ತಿ ಇಒ ಎಚ್.ಎಸ್. ಜಿನಗಾ ಮೆರವಣಿಗೆಗೆ ಚಾಲನೆ ನೀಡಿದರು. ತಾಲ್ಲೂಕು ಆರೋಗ್ಯ ಅಧಿಕಾರಿ ಎಸ್.ಎಸ್. ನೀಲಗುಂದ, ಎಇಇ ಎಲ್.ಜಿ.ಪತ್ತಾರ, ಎಂಜಿನಿಯರ್‌ ಎಸ್.ಎ. ಬಂಡಿವಡ್ಡರ, ಎಸ್.ಬಿ. ಮರಿಗೌಡರ, ಅಶೋಕ ದೊಡ್ಡಮನಿ, ಎನ್.ಎಂ. ಮಕಾನದಾರ, ವಿಜಯಲಕ್ಷ್ಮೀ ಮುಟಗಾರ, ಎಸ್.ವಿ. ಹುಣಸೀಮರದ, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !