ನರೇಗಲ್: ‘ಫ್ಲೋರೈಡ್ ಅಂಶ ಹೆಚ್ಚಾಗಿರುವ ಆಹಾರ ಹಾಗೂ ನೀರು ಸೇವನೆಯಿಂದ ಫ್ಲೋರೋಸಿಸ್ ಕಾಯಿಲೆ ಬರುತ್ತದೆ. ಇದನ್ನು ತಡೆಗಟ್ಟುವುದು ಅತ್ಯಂತ ಅವಶ್ಯಕ’ ಎಂದು ಜಿಲ್ಲಾ ಫ್ಲೋರೋಸಿಸ್ ಪ್ರಯೋಗ ಶಾಲಾ ತಂತ್ರಜ್ಞ ಎಸ್.ಕೆ ಚೌಡಾಣ್ಣವರ ಹೇಳಿದರು.

ನರೇಗಲ್ ಸಮೀಪದ ಬೂದಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಫ್ಲೋರೋಸಿಸ್ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಫ್ಲೋರೋಸಿಸ್ ರೋಗ ಲಕ್ಷಣಗಳು: ಹಲ್ಲುಗಳಲ್ಲಿ ಹಳದಿ, ಕಂದು ಬಣ್ಣ ಬದಲಾವಣೆ ಕಾಣಿಸುತ್ತದೆ. ಮೂಳೆ, ಕೀಲುಗಳಲ್ಲಿ ವಿಪರೀತ ನೋವು, ವಾಂತಿ, ಹೊಟ್ಟೆ ಉಬ್ಬರ, ಹೊಟ್ಟೆ ನೋವು ಕಾಣಿಸುತ್ತದೆ. ಹೆಚ್ಚು ಮೂತ್ರ ವಿಸರ್ಜಿಸುವುದು ಹಾಗೂ ನಿಶಕ್ತಿ ಕಾಣಿಸುವುದು ರೋಗದ ಲಕ್ಷಣಗಳಾಗಿವೆ.

‘ಫ್ಲೋರೈಡ್ ನಮ್ಮ ದೇಹಕ್ಕೆ ಬೇಕಾದ ಒಂದು ಖನಿಜಾಂಶ. ನಾವು ಸೇವಿಸುವ ಆಹಾರ ಮತ್ತು ಕುಡಿಯುವ ನೀರಿನಲ್ಲಿ ಅವಶ್ಯಕತೆಗಿಂತ ಹೆಚ್ಚು ಫ್ಲೋರೈಡ್ ಇದ್ದರೆ ಫ್ಲೋರೋಸಿಸ್ ಉಂಟಾಗುತ್ತದೆ. ದಂತ ಫ್ಲೋರೋಸಿಸ್, ಮೂಳೆ ಫ್ಲೋರೋಸಿಸ್ ಕಾಣಿಸಿಕೊಳ್ಳುತ್ತದೆ. ಫ್ಲೋರೋಸಿಸ್ ಹಲ್ಲುಗಳ ದಂತಕವಚ ಮೇಲೆ ಹೆಚ್ಚು ಪರಿಣಾಮ ಬಿರುತ್ತದೆ’ ಎಂದರು.

ಮುಖ್ಯಶಿಕ್ಷಕ ಬಿ.ವಿ. ದೇಸಾಯಿಪಟ್ಟಿ, ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಕೆ. ಕೇಸರಿ, ಸಿಎಚ್ಒ ಸಂತೋಷ ರಾಥೋಡ್, ಆಶಾ ಕಾರ್ಯಕರ್ತೆ ವಿಜಯಲಕ್ಷ್ಮೀ ಧಡೇಸೂರಮಠ, ಐಶ್ವರ್ಯ ಬಿಂಗಿ, ದೀಪಾ ಮಾದರ, ಕಾವ್ಯಾ ಎಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.