ನರೇಗಲ್: ‘ಭಾರತದಲ್ಲಿ ಗೋವುಗಳನ್ನು ದೇವತೆಯೆಂದು ಪೂಜಿಸುತ್ತಾರೆ. ಆಕಳ ಕ್ಷೀರ ಅಮೃತಕ್ಕೆ ಸಮಾನವಾಗಿದೆ’ ಎಂದು ದತ್ತ ದೇವಸ್ಥಾನದ ಅಧ್ಯಕ್ಷ ನಾಗರಾಜ ಗ್ರಾಮಪುರೋಹಿತ ಹೇಳಿದರು.

ನರೇಗಲ್ ಪಟ್ಟಣದ ದತ್ತಾತ್ರೇಯ ದೇವಸ್ಥಾನದಲ್ಲಿ 116ನೇ ವರ್ಷದ ಗುರುಪ್ರತಿಪದೆ ಉತ್ಸವದ ಅಂಗವಾಗಿ ಗುರು ದತ್ತಾತ್ರೇಯರಿಗೆ ಭಾನುವಾರ ನಡೆದ ಕ್ಷೀರಾಭಿಷೇಕದ ನಂತರ ಅವರು ಮಾತನಾಡಿ, ‘ಕ್ಷೀರ ಎಲ್ಲರನ್ನೂ ಸಮಾನವಾಗಿ ಸಂತೃಪ್ತಿ ಪಡಿಸುವ ಪದಾರ್ಥ’ ಎಂದರು.

11 ಜನ ಋತ್ವಿಜರು ರುದ್ರಪಠಣ ಮಾಡುತ್ತ ದತ್ತಾತ್ರೇಯರಿಗೆ ಕ್ಷೀರಾಭಿಷೇಕದ ಸೇವೆಯನ್ನು ಅತ್ಯಂತ ಭಕ್ತಿ– ಭಾವದಿಂದ ನೆರವೇರಿಸಿದರು. ವಿಶ್ವನಾಥಭಟ್ಟ ವೈದ್ಯ, ದತ್ತ ದೇಸ್ಥಾನದ ಅರ್ಚಕ ಶ್ರೀವಲ್ಲಭಶಾಸ್ತ್ರಿ ಸದರಜೋಶಿ, ರವಿ ರಾಮದಾಸಿ, ಎಸ್.ಎಚ್ ಕುಲಕರ್ಣಿ, ಎ. ಜಿ. ಕುಲಕರ್ಣಿ, ಅಜೀತ ಕುಲಕರ್ಣಿ, ಅರುಣ ಗ್ರಾಮಪುರೋಹಿತ, ಹರೀಶ ಕುಲಕರ್ಣಿ, ಮಂಜುನಾಥ ಕುಲಕರ್ಣಿ, ಪ್ರಶಾಂತ ಗ್ರಾಮಪುರೋಹಿತ, ವಿನಾಯಕ ಗ್ರಾಮಪುರೋಹಿತ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.