ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡೂರು ಹಳ್ಳದಲ್ಲಿ ಕಾಣಿಸಿಕೊಂಡ ನೊರೆ;ಆತಂಕ

Last Updated 17 ಅಕ್ಟೋಬರ್ 2018, 14:12 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ತಾಲ್ಲೂಕಿನ ದೊಡ್ಡೂರು ಗ್ರಾಮದ ಹಳ್ಳದಲ್ಲಿ ಬುಧವಾರ ಭಾರಿ ಪ್ರಮಾಣದಲ್ಲಿ ನೊರೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬುಧವಾರ ಈ ಭಾಗದಲ್ಲಿ ಧಾರಾಕಾರ ಮಳೆಯಾಗಿತ್ತು. ಮಳೆ ನಿಂತ ನಂತರ, ಮಳೆ ನೀರಿನ ಜತೆಗೆ ಹಳ್ಳದಲ್ಲಿ ಭಾರಿ ಪ್ರಮಾಣದಲ್ಲಿ ನೊರೆ ಹರಿದು ಬರುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ಈ ರೀತಿ ಹಳ್ಳದಲ್ಲಿ ನೊರೆ ಹರಿದು ಬಂದಿದ್ದು, ಇದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ದೊಡ್ಡೂರು ಗ್ರಾಮದಿಂದ 4 ಕಿ.ಮೀ ದೂರದಲ್ಲಿ ಶಿಗ್ಲಿ ಗ್ರಾಮ ಇದ್ದು,ಇಲ್ಲಿ ನೇಕಾರರು ನೂಲಿಗೆ ಬಣ್ಣ ಹಾಕುತ್ತಾರೆ. ಬಣ್ಣ ಹಾಕಿದ ನಂತರ ಉಳಿಯುವ ತ್ಯಾಜ್ಯದ ನೀರನ್ನು ಇದೇ ಹಳ್ಳಕ್ಕೆ ಬಿಡುತ್ತಾರೆ. ಚರಂಡಿ ನೀರಿನ ಜತೆಗೆ ಈ ಮಲಿನ ನೀರು ಹಳ್ಳದಲ್ಲಿ ಮಡುಗಟ್ಟಿ ನಿಂತು, ಜಲಮೂಲ ಕಲುಷಿತಗೊಂಡಿದೆ. ಮಳೆಕೊರತೆಯಿಂದ ಇತ್ತೀಚಿನ ವರ್ಷಗಳಲ್ಲಿ ಈ ಹಳ್ಳದಲ್ಲಿ ನೀರಿನ ಪ್ರಮಾಣವೂ ಕಡಿಮೆಯಾಗಿದೆ. ಆದರೆ, ಬುಧವಾರ ಮಳೆಯಾದ ಹಿನ್ನೆಲೆಯಲ್ಲಿ ಹಳ್ಳದ ಒಡಲಲ್ಲಿದ್ದ ವಿಷಯುಕ್ತ ನೀರು ನೊರೆಯಾಗಿ ಪರಿವರ್ತನೆಯಾಗಿರಬಹುದು ಎಂಬ ಶಂಕೆಯನ್ನು ಈ ಭಾಗದ ಜನರು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT