ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗದಗ: ಮುಂಗಾರಿನ ಸವಾಲು ಎದುರಿಸಲು ಸಿದ್ಧತೆ

ಗದಗ ಬೆಟಗೇರಿ ನಗರಸಭೆಯಿಂದ ರಾಜಕಾಲುವೆ ಸ್ವಚ್ಛತೆ
Published : 3 ಜೂನ್ 2023, 15:47 IST
Last Updated : 3 ಜೂನ್ 2023, 15:47 IST
ಫಾಲೋ ಮಾಡಿ
Comments

ಗದಗ: ಮುಂಗಾರು ಪ್ರವೇಶಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೆ ಗದಗ ಬೆಟಗೇರಿ ನಗರಸಭೆ ರಾಜಕಾಲುವೆ ಸ್ವಚ್ಛತೆಗೆ ಮುಂದಾಗಿದೆ. ಅವಳಿ ನಗರದ ಒಟ್ಟು 12 ಕಡೆಗಳಲ್ಲಿ ರಾಜಕಾಲುವೆ ಸ್ವಚ್ಛಗೊಳಿಸುವ ಕಾರ್ಯ ಆರಂಭಿಸಿದೆ.

ಅವಳಿ ನಗರದಲ್ಲಿ ಮುಂಗಾರು ಎದುರಿಸಲು ಸಿದ್ಧತೆಗಳು ಆರಂಭಗೊಂಡಿದ್ದು ವಿಶೇಷವಾಗಿ ಬೆಟಗೇರಿ ಭಾಗದಲ್ಲಿ ರಾಜಕಾಲುವೆ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಅತಿಯಾದ ಮಳೆಯಿಂದ ರಾಜಕಾಲುವೆ ಉಕ್ಕಿ ಹರಿಯುವ ಸುಮಾರು 8 ಕಡೆಗಳಲ್ಲಿ ಸ್ವಚ್ಛತೆ ಕಾರ್ಯ ಭರದಿಂದ ಸಾಗಿದೆ. ಅದೇ ರೀತಿ ಗದಗ ಭಾಗದಲ್ಲಿಯೂ ಮೂರು ಕಡೆ ರಾಜಕಾಲುವೆ ಸ್ವಚ್ಛಗೊಳಿಸಲಾಗುತ್ತಿದೆ.

ಕಳೆದ ವರ್ಷ ಅತಿಯಾದ ಮಳೆಯಿಂದ ರಾಜಕಾಲುವೆ ಉಕ್ಕಿಹರಿದು ಸಾಕಷ್ಟು ಹಾನಿ ಉಂಟಾಗಿತ್ತು. ಆದಕಾರಣ, ಈ ಬಾರಿಯ ಸಂಭವನೀಯ ಹಾನಿ ತಪ್ಪಿಸಲು ಬೇಟಗೇರಿ ಭಾಗ, ನರಸಾಪುರ ಕೈಗಾರಿಕಾ ಪ್ರದೇಶ, ಶಿವರತ್ನ ಹೋಟೆಲ್ ಹಿಂಭಾಗ, ದೊಡ್ಡ ನಾಲಾ, ಹುಚ್ಚೀರೇಶ್ವರ ನಗರದ ರಂಗಪ್ಪಜ್ಜನ ಮಠ, ಕನ್ಯಾಳ ಅಗಸಿಯ ಸತೀಶ ಹೂಲಿ ಅವರ ಮನೆ ಹತ್ತಿರ, ಭಜಂತ್ರಿ ಓಣಿಯಿಂದ ಮಾರ್ಕೆಟ್‍ವರೆಗೆ, ವಾರ್ಡ ನಂ. 4ರ ಮಂಜುನಾಥ ನಗರದಲ್ಲಿರುವ ರಾಜಕಾಲುವೆ ಸ್ವಚ್ಛತೆ ಅರಂಭವಾಗಿದೆ.

ಅದೇರೀತಿ ಗದಗ ಭಾಗದ ವಿಶಾಲ ಮಾರ್ಟ್‌ನಿಂದ ಅಜಂತಾ ಹೋಟೆಲ್, ಕಮ್ಮಾರಸಾಲು-ಲೋಬೋಸಾ ಫ್ಯಾಕ್ಟರಿ, ರಹಮತ್ ನಗರದ ಬ್ರಿಡ್ಜ್ ಹತ್ತಿರದ ರಾಜಕಾಲುವೆ ಹೂಳು ತೆಗೆಯುವ ಕಾರ್ಯ ಭರದಿಂದ ಸಾಗಿದೆ.

ಗದಗ-ಬೆಟಗೇರಿ ನಗರಸಭೆ ಅಧಿಕಾರಿಗಳು, ಪರಿಸರ ಎಂಜಿನಿಯರ್‌, ಪೌರಕಾರ್ಮಿಕರು ನಾಲ್ಕೈದು ದಿನಗಳಿಂದ ರಾಜಕಾಲುವೆ ಸ್ವಚ್ಛತೆಯಲ್ಲಿ ತೊಡಗಿದ್ದಾರೆ. ನೀರು ಸರಾಗವಾಗಿ ಹರಿದು ಹೋಗುವಂತೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಮಳೆ ನೀರಿನಿಂದ ಯಾವುದೇ ಅವಘಡಗಳು ಉಂಟಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ಗದಗ ಬೆಟಗಿರಿ ನಗರಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಾಯಕ ಎಂಜಿನಿಯರ್‌ ವಿಕಾಸ್, ಮಂಜುನಾಥ್ ಹಾಗೂ ನಗರಸಭೆಯ ದಫೇದಾರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT