ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಂಚಣಿ ಯೋಜನೆ ಜಾರಿಗೆ ಹೋರಾಟ: ಪರಿಷತ್ ಸದಸ್ಯ ಸಂಕನೂರ

Published 2 ಜೂನ್ 2024, 13:58 IST
Last Updated 2 ಜೂನ್ 2024, 13:58 IST
ಅಕ್ಷರ ಗಾತ್ರ

ಗದಗ: ‘ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2006ರ ನಂತರ ನೇಮಕಗೊಂಡು ನಿವೃತ್ತಿ ನಂತರ ನೀಡುವ ಎನ್‌ಪಿಎಸ್ ಆಗಲಿ, ಒಪಿಎಸ್ ಯಾವ ಪಿಂಚಣಿ ಯೋಜನೆಯು ಜಾರಿಯಲ್ಲಿ ಇರುವುದಿಲ್ಲ. ಹಾಗಾಗಿ ಅಂತವರ ಬದುಕು ಕಷ್ಟದಾಯಕವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ನಿವೃತ್ತಿ ಹೊಂದಿರುವ ಹಾಗೂ ಹೊಂದಲಿರುವ ನೌಕರರು ನೆಮ್ಮದಿಯ ಬದುಕು ಸಾಗಿಸಲು ಮುಂಬರುವ ಸದನದಲ್ಲಿ ಪಿಂಚಣಿ ಯೋಜನೆ ಜಾರಿಗೆ ತರಲು ಒತ್ತಾಯಿಸುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಹೇಳಿದರು.

ಶಾಲಾ ಶಿಕ್ಷಣ ಹಾಗೂ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಡಾ.ಟಿ.ಎನ್. ಗೋಡಿ, ಡಾ.ಜಿ.ಎಸ್. ಯತ್ನಟ್ಟಿ, ಎಂ.ಆರ್. ಹೆಬ್ಬಳ್ಳಿ, ಬಿ.ಎಸ್.ಮಾನೇದ, ಎಸ್.ಕೆ. ಹೊಸಮನಿ ಹಾಗೂ ಎಸ್.ಆರ್. ಕಲಘಟಗಿ ಅವರನ್ನು ಸಂಕನೂರ ಅಭಿಮಾನಿ ಬಳಗದ ವತಿಯಿಂದ ನಗರದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.

ಪ್ರಾಚಾರ್ಯ ಎಂ.ಸಿ.ಕಟ್ಟಿಮನಿ, ಪ್ರೊ. ಎಸ್.ಎಸ್.ಸೋಮಣ್ಣವರ ಮಾತನಾಡಿದರು.

ಪ್ರಾಚಾರ್ಯ ಅಶೋಕ ಅಂಗಡಿ ಸ್ವಾಗತಿಸಿದರು. ಪ್ರೊ. ಶಶಿಧರ ಕುರಿ ವಂದಿಸಿದರು. ಉಪನ್ಯಾಸಕರಾದ ಈರಣ್ಣ ಹಾದಿಮನಿ, ಜಗದೀಶ ನರಗುಂದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT