ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕತೆ ಬಿಂಬಿಸುವ ಹುಣ್ಣಿಮೆ, ಅಮಾವಾಸ್ಯೆ; ಅರಣ್ಯಾಧಿಕಾರಿ ದೀಪಿಕಾ

Published 29 ನವೆಂಬರ್ 2023, 13:15 IST
Last Updated 29 ನವೆಂಬರ್ 2023, 13:15 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ‘ಹುಣ್ಣಿಮೆ, ಅಮಾವಾಸ್ಯೆಗಳು ನಮ್ಮ ಶ್ರೇಷ್ಠ ಶ್ರೀಮಂತ ಪರಂಪರೆಯ ಒಂದು ಪ್ರಮುಖ ಭಾಗ. ಋತುಮಾನಕ್ಕನುಗುಣವಾಗಿ ಬರುವ ಈ ಹುಣ್ಣಿಮೆ ಹಬ್ಬಗಳು ನಮ್ಮ ಹಿರಿಯರ ವೈಜ್ಞಾನಿಕ ಮನೋಭಾವ ಬಿಂಬಿಸುತ್ತಿವೆ’ ಎಂದು ಗದಗ ಜಿಲ್ಲಾ ಅರಣ್ಯಾಧಿಕಾರಿ ದೀಪಿಕಾ ಭಾಜಪೈ ಹೇಳಿದರು.

ಪಟ್ಟಣದ ಭಕ್ತರ ಸೇವಾ ಟ್ರಸ್ಟ್ ಸಮಿತಿಯಿಂದ ಗೌರಿ ಹುಣ್ಣಿಮೆ ಅಂಗವಾಗಿ ಇಲ್ಲಿನ ಸೋಮೇಶ್ವರ ದೇವಸ್ಥಾನದಲ್ಲಿ ಸೋಮವಾರ ಜರುಗಿದ ಪುಲಿಗೆರೆ ಪೌರ್ಣಿಮೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಉಪನ್ಯಾಸಕಿ ಅಮೃತಾ ಸಂತೋಷ ಗುಡಗೇರಿ ಮಾತನಾಡಿ, ‘ಗೌರಿ ಹುಣ್ಣಿಮೆ ನಮ್ಮ ಸಂಸ್ಕೃತಿಯ ಪ್ರತೀಕ. ಗೌರಿ ಹುಣ್ಣಿಮೆಯ ಹಾಡುಗಳು ಜಾನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ’ ಎಂದರು.

ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ‘ಉನ್ನತ ಅಧಿಕಾರಿಗಳು ಇದ್ದರೂ ಕೂಡ ದೀಪಿಕಾ ಬಾಜಪೈ ಅವರು ಈ ನೆಲದ ಸಂಸ್ಕೃತಿಯನ್ನು ಗೌರವಿಸಿ ಕಾರ್ಯಕ್ರಮದಲ್ಲಿ ಸಾಮಾನ್ಯ ಮಹಿಳೆಯ ಹಾಗೆ ಹೂ ದಂಡೆ ಹಾಕಿಕೊಂಡು ಸೋಮೇಶ್ವರನಿಗೆ ಆರತಿ ಬೆಳಗಿದ್ದು ಅಭಿಮಾನ ಪಡುವ ಸಂಗತಿ’ ಎಂದರು.

ಅನುಜಾ ಪೂಜಾರ, ಅನ್ನಪೂರ್ಣಮ್ಮ ಮಹಾಂತಶೆಟ್ರ, ನಿರ್ಮಲಾ ಅರಳಿ ಮಾತನಾಡಿದರು. ಚನ್ನಪ್ಪ ಜಗಲಿ, ಡಿ.ಬಿ. ಬಳಿಗಾರ, ನೀಲಪ್ಪ ಕರ್ಜಕಣ್ಣವರ, ಬಸವೇಶ ಮಹಾಂತಶೆಟ್ರ, ಎಸ್.ಎಫ್. ಆದಿ, ಸಿದ್ದನಗೌಡ್ರ ಬಳ್ಳೊಳ್ಳಿ, ಎಂ.ಸಿದ್ದಲಿಂಗಯ್ಯ, ಸುರೇಶ ರಾಚನಾಯ್ಕರ, ಗೀತಾ ಮಾನ್ವಿ, ಅಶ್ವಿನಿ ಅಂಕಲಕೋಟಿ, ವಿರುಪಾಕ್ಷಪ್ಪ ಆದಿ, ಎಂ.ಬಿ. ಕಣವಿ, ನಾಗರಾಜ ಕಳಸಾಪುರ, ಶಂಕ್ರಮ್ಮ ಹುರಕಡ್ಲಿ, ನಂದಿನಿ ಪೂಜಾರ, ಸೋಮಶೇಖರ ಕೆರಿಮನಿ, ಬಿ.ಎಸ್. ಹರ್ಲಾಪುರ, ಈಶ್ವರ ಮೆಡ್ಲೇರಿ, ಚಂದ್ರು ನೇಕಾರ, ಗೋಪಾಲನಾಯ್ಕ, ಬಸವರಾಜ ಮೆಣಸಿನಕಾಯಿ, ವಿ.ಎಂ. ಹೂಗಾರ, ರಾಘವೇಂದ್ರ ಪೂಜಾರ, ಎಸ್.ವಿ. ಕನೋಜ್, ಎನ್.ಆರ್. ಸಾತಪುತೆ, ಸತೀಶ ಬೋಮಲೆ, ಆರ್.ಪಿ. ರಾಯಚೂರ ಇದ್ದರು. ಸುಮಾ ಚೋಟಗಲ್ಲ ಸ್ವಾಗತಿಸಿದರು. ಸಂಚಾಲಕ ಜಿ.ಎಸ್. ಗುಡಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ನೇಹಾ ಹೊಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT