ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಕಾರ್ಯದಲ್ಲಿ ರಡ್ಡಿ ಸಮಾಜದ ಕೊಡುಗೆ ಅಪಾರ

ಮಹಾಯೋಗಿ ವೇಮನ ಸಂಸ್ಥಾನಮಠದ ವೇಮನಾನಂದ ಸ್ವಾಮೀಜಿ
Published 10 ಮೇ 2024, 15:34 IST
Last Updated 10 ಮೇ 2024, 15:34 IST
ಅಕ್ಷರ ಗಾತ್ರ


ನರಗುಂದ:
ಸಮಾಜ ಚಿಕ್ಕದಾದರೂ ಅದರ ಕೀರ್ತಿ ದೊಡ್ಡದಾಗಿದೆ. ಸ್ವಾಭಿಮಾನದಿಂದ ಬದುಕುವ ರಡ್ಡಿ ಸಮಾಜದ ಬಂಧುಗಳು ರಾಷ್ಟ್ರಕಾರ್ಯ ಮಾಡುವಲ್ಲಿ ಎತ್ತಿದ ಕೈ ಆಗಿದ್ದಾರೆ ಎಂದು ಹೇಮರಡ್ಡಿ ಮಲ್ಲಮ್ಮ ರಡ್ಡಿಗುರುಪೀಠದ ಶ್ರೀಮಹಾಯೋಗಿ ವೇಮನ ಸಂಸ್ಥಾನಮಠದ ವೇಮನಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ಆರೂಡ ಭವನದಲ್ಲಿ ಶುಕ್ರವಾರ ತಾಲ್ಲೂಕು ರಡ್ಡಿ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಶಿವಶರಣೆ ಹೇಮರಡ್ಡಿ ಮಲ್ಲಮ್ಮಳ 602 ನೇ ಜಯಂತಿ ಆಚರಣೆಯಲ್ಲಿ ಮಾತನಾಡಿದರು.

ಕಾಯಕದಲ್ಲಿ ದೇವರನ್ನು ಕಾಣುವ ಸಮಾಜದ ಬಂಧುಗಳು ವಿವಿಧ ಸಮಾಜಗಳೊಂದಿಗೆ ಸಮನ್ವಯದಿಂದ ಬಾಳನ್ನು ನಡೆಸುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಜನರಿಗೆ ಉದ್ಯೋಗ ನೀಡುತ್ತಾ ಆ ಕುಟುಂಬಗಳಿಗೆ ಆಸರೆಯಾಗಿದ್ದಾರೆ. ರಡ್ಡಿ ಸಮಾಜದ ಹೇಮರಡ್ಡಿ ಮಲ್ಲಮ್ಮಳ ಆದರ್ಶ ಗಳನ್ನು ಪಾಲಿಸುವಂತೆ ಸಲಹೆ ಮಾಡಿದರು.

ಮಾಜಿ ಶಾಸಕ ಬಿ.ಆರ್.ಯಾವಗಲ್ಲ ಮಾತನಾಡಿ, ಸಣ್ಣ ಸಮಾಜವಾಗಿರುವ ರಡ್ಡಿ ಸಮಾಜವು ವಿವಿಧ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಲು ಸಂಘಟಿಕರಾಗಬೇಕಾಗಿದೆ ಎಂದು ಹೇಳಿದರು.

ತಾಲೂಕಾಧ್ಯಕ್ಷ ಬಿ ಆರ್ ಪಾಟೀಲ, ಉಪನ್ಯಾಸಕ ಲಿಂಗಾರಡ್ಡಿ ಆಲೂರ ಮಾತನಾಡಿದರು.

2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ರಡ್ಡಿ ಸಮಾಜದ ಅನುಪಮ ಮೇಟಿ, ಪ್ರಿಯಾಂಕ ಚಿಕ್ಕರಡ್ಡಿ, ಶ್ರೀನಿವಾಸರಡ್ಡಿ ಮೇಟಿ, ವಿಕಾಸ ದಾಡಿಭಾವಿ ಕಿರಣಗೌಡ ನಡಮನಿ, ವಾಣಿಶ್ರೀ ಕುಲಕರ್ಣಿ, ಸಾಗರ ಕಿಲಬನೂರ, ಬಸಮ್ಮ ಮುದರಡ್ದಿ ಹಾಗೂ ಸಮಾಜದ ನಿಕಟಪೂರ್ವ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬೈರನಹಟ್ಟಿ ಶಾಂತಲಿಂಗ ಶ್ರೀ, ವಿ. ಎಸ್ ಪಾಟೀಲ, ಪ್ರವೀಣ ಮೇಟಿ, ಪ್ರವೀಣ ಸಾಲಿಗೌಡ್ರ, ಶ್ರೀನಿವಾಸ ಪಾಟೀಲ, ಸಚೀನ ಕಲ್ಲೂರ, ಶ್ರೀನಿವಾಸರೆಡ್ಡಿ ವೆಂಕರಡ್ಡಿಯವರ, ಸತೀಶ ನಾಗನೂರ, ನಾರಾಯಣ ತಿಮ್ಮರಡ್ಡಿಯವರ, ಡಾ.ವೀರನಗೌಡ ಪಾಟೀಲ, ಅಶೋಕ ಕೊಪ್ಪಳ, ಎಸ್ ಎಸ್ ಮಲ್ಲನಗೌಡ್ರ, ಗಿರೀಶ ನೀಲರಡ್ಡಿ, ಆನಂದ ಮೇಟಿ, ಮುತ್ತಪ್ಪ ಲಿಂಗದಾಳ, ಅಶೋಕ ಪಾಟೀಲ, ಶಿವರಡ್ಡಿ ಪೆಟ್ಲೂರ, ದೇವರಡ್ಡಿ ವೆಂಕರಡ್ಡಿಯವರ, ಎಸ್ ಆರ್ ಮೇಟಿ, ಡಿ ಅಜ್ಜಿ ಸರ್ ಇದ್ದರು.

ಮೆರವಣಿಗೆ: ಮಹಾಸಾದ್ವಿ ಶಿವಶರಣಿ ಹೇಮರಡ್ಡಿ ಮಲ್ಲಮ್ಮರ ಹಾಗೂ ಮಹಾಯೋಗಿ ವೇಮನರ ಭಾವಚಿತ್ರಗಳ ಮೆರವಣಿಗೆ ನಡೆಸಲಾಯಿತು. ಪಟ್ಟಣದ ಸೋಮಾಪೂರ ಓಣಿಯಲ್ಲಿನ ಶಿವಾನಂದ ಮಠದಿಂದ ವಿವಿಧ ವಾಧ್ಯಮೇಳದೊಂದಿಗೆ ಮೆರವಣಿಗೆ ಆರಂಭವಾಯಿತು. ನಗರದ ಪ್ರಮುಖ ರಾಜಬೀದಿಗಳಲ್ಲಿ ಸಂಚರಿಸಿ ಆರೋಡ ಭವನಕ್ಕೆ ತಲುಪಿದ ನಂತರ ಶ್ರೀಗಳ ಸಾನಿಧ್ಯದಲ್ಲಿ ಕಾರ್ಯಕ್ರಮ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT