ಬಹಳ ದಿನಗಳ ನಂತರ ಮಳೆ ಕಂಡ ರೈತರು ಹರ್ಷ ವ್ಯಕ್ತಪಡಿಸಿದರು. ಹಿಂಗಾರು ಬೆಳೆಗಳಾದ ಕಡಲೆ, ಜೋಳ, ಗೋಧಿ, ಕುಸುಬಿ ಸೇರಿದಂತೆ ಅನೇಕ ಬೆಳೆಗಳು ಭೂಮಿಯಲ್ಲಿ ತೇವಾಂಶವಿಲ್ಲದೆ ನೆಲಬಿಟ್ಟು ಮೇಲೆಳುತ್ತಿರಲಿಲ್ಲ. ಆದರೆ ಈಗ ಸುರಿದ ಮಳೆ ಬೆಳೆಗಳಿಗೆ ಅನಕೂಲಕರವಾಗಿದೆ. ಇದೇ ರೀತಿ ಮೂರ್ನಾಲ್ಕು ಮಳೆಯಾದರೆ ಹಿಂಗಾರಿಗೆ ಅನಕೂಲವಾಗಲಿದೆ ಎಂದು ರೈತರಾದ ಶರಣಪ್ಪ ಗುತ್ತೂರ, ಬಸವರಾಜ ತಳವಾಳ, ಶರಣಪ್ಪ ಕೊಂಡಿ ತಿಳಿಸಿದರು.