ಬೆಳಿಗ್ಗೆ ಬಿಸಿಲಿತ್ತು, ಮಧ್ಯಾಹ್ನ 3 ಗಂಟೆಯಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಯಿತು. ನಂತರ ಸಂಜೆ 4.30ಕ್ಕೆ ಗುಡುಗು, ಮಿಂಚು ಸಹಿತ ಆರಂಭವಾದ ಮಳೆ ಒಂದು ತಾಸು ಜೋರಾಗಿ ಸುರಿಯಿತು. ನಂತರ ಕೆಲಹೊತ್ತು ಜಿಟಿಜಿಟಿ ಮಳೆ ಸುರಿಯಿತು. ಹೊಲ ಹರಗಿ ಹಿಂಗಾರು ಕೃಷಿಗಾಗಿ ಕಾಯ್ದು ಕುಳಿತಿದ್ದ ರೈತರು ಖುಷಿಪಟ್ಟರು. ಈರುಳ್ಳಿ ಕಿತ್ತು ಗುಡ್ಡೆ ಹಾಕಿದ್ದು ಮಳೆ ಬಂದಾಗ ರಕ್ಷಣೆ ಮಾಡಿಕೊಳ್ಳಲು ಪರದಾಡಿದರು.