ಮುಂಡರಗಿ: ‘ಬಸವಣ್ಣನವರು ವಿಶ್ವದ ಮೊದಲ ಸಮಾಜವಾದಿ ಚಿಂತಕ. ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಅವರು ಜಗತ್ತಿನ ಪ್ರಜಾಪ್ರಭುತ್ವ ಮಾದರಿಯ ಆಡಳಿತಕ್ಕೆ ಪ್ರೇರಣೆಯಾದರು’ ಎಂದು ನಿವೃತ್ತ ಉಪನ್ಯಾಸಕ ಆರ್.ಕೆ.ರಾಯನಗೌಡರ ತಿಳಿಸಿದರು.

ಇಲ್ಲಿಯ ಚೈತನ್ಯ ಶಿಕ್ಷಣ ಸಂಸ್ಥೆಯಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸೋಮವಾರ ಹಮ್ಮಿಕೊಂಡಿದ್ದ ಶರಣ ಚಿಂತನ ಮಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉಪನ್ಯಾಸಕ ಜೆ.ಕುಮಾರ ಮಾತನಾಡಿ, ‘ಕಾಯಕ ಹಾಗೂ ದಾಸೋಹ ನಿಷ್ಠೆಯುಳ್ಳ ಹರಳಯ್ಯ ಅವರು ಜಾತಿ ಹಾಗೂ ಕುಲಗಳನ್ನು ಮೀರಿ ಶರಣ ಸಾಹಿತ್ಯದಲ್ಲಿ ತಮ್ಮನ್ನು ಗುರುತಿಸಿಕೊಂಡರು’ ಎಂದರು.

ತಾಲ್ಲೂಕ ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಆರ್.ಎಲ್.ಪೊಲೀಸಪಾಟೀಲ, ಚೈತನ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ವೀಣಾ ಪಾಟೀಲ ಮಾತನಾಡಿದರು. ರತ್ನಾ ಕಾಗನೂರಮಠ, ನಯನಾ ಅಳವುಂಡಿ, ಕಸಾಪ ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ, ನಾರಾಯಣಪ್ಪ ಗುಬ್ಬಿ, ಎಸ್.ಬಿ.ಕರಿಭರಮಗೌಡರ, ವಿ.ಕೆ.ಗುಡದಪ್ಪನವರ, ಎಂ.ಎಸ್.ಶೀರನಹಳ್ಳಿ, ಯುವರಾಜ ಮುಂಡರಗಿ, ಎನ್.ಎಸ್.ಅಲೀಪುರ, ಎಸ್.ಕೆ.ಹುಬ್ಬಳ್ಳಿ, ಶಂಕರ ಕುಕುನೂರ, ಎಂ.ಐ.ಮುಲ್ಲಾ, ಕೃಷ್ಣ ಸಾಹುಕಾರ, ಹನುಮರೆಡ್ಡಿ ಇಟಗಿ, ಎಂ.ಎಸ್.ಹೊಟ್ಟಿನ, ಗೌರಮ್ಮ ಕೊಪ್ಪಳ, ಜಯಶ್ರೀ ಅಳವಂಡಿ, ಮಾನಸ ಅಳವಂಡಿ ಇದ್ದರು.

‘ಶರಣರ ತತ್ವಾದರ್ಶ ಪಾಲಿಸಬೇಕಿದೆ’

ವ್ಯಕ್ತಿಗೆ ಆರೋಗ್ಯ ಹಾಗೂ ದೇಶಕ್ಕೆ ನೈತಿಕತೆಯೇ ಸಂಪತ್ತು ಎಂಬುವುದನ್ನು ಶರಣರು ಸಾರಿದ್ದರು. ಇಂದು ನೈತಿಕತೆ ಕಣ್ಮರೆಯಾಗುತ್ತಿದ್ದು ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಗಳು ಕಲುಷಿತಗೊಂಡಿವೆ. ಇಂತಹ ಪರಸ್ಥಿತಿಯಲ್ಲಿ ಶರಣರ ತತ್ವಾದರ್ಶಗಳು ಹೆಚ್ಚು ಪ್ರಸ್ತುತವೆನಿಸುತ್ತಿವೆ ಎಂದು ನಿವೃತ್ತ ಉಪನ್ಯಾಸಕ ಆರ್.ಕೆ.ರಾಯನಗೌಡರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.