ರಸ್ತೆ ಅಪಘಾತ:ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದ ಜಮೀರ್ ಅಹ್ಮದ್‌

7

ರಸ್ತೆ ಅಪಘಾತ:ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದ ಜಮೀರ್ ಅಹ್ಮದ್‌

Published:
Updated:
Deccan Herald

ಗದಗ: ಹುಲಕೋಟಿ ಸಮೀಪ ಗದಗ–ಹುಬ್ಬಳ್ಳಿ ಹೆದ್ದಾರಿಯಲ್ಲಿ ಗುರುವಾರ ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿ ಸಚಿವ ಜಮೀರ್ ಅಹ್ಮದ್‌ ಖಾನ್‌ ಮಾನವೀಯತೆ ಮೆರೆದಿದ್ದಾರೆ.

ಟಂಟಂ ಮತ್ತು ಕ್ರೂಸರ್‌ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟರು. ಐವರಿಗೆ ಗಂಭೀರ ಗಾಯಗಳಾಗಿ ನರಳುತ್ತಿದ್ದರು.ಜಮೀರ್ ಅಹ್ಮದ್‌ ಖಾನ್‌ ಇದೇ ಮಾರ್ಗವಾಗಿ ಕೊಪ್ಪಳ ಜಿಲ್ಲೆ‌ ಕುಷ್ಟಗಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೋಗುತ್ತಿದ್ದರು. ಅಪಘಾತದಲ್ಲಿ ನರಳುತ್ತಿದ್ದವರನ್ನು ಕಂಡು, ತಕ್ಷಣ ವಾಹನ ನಿಲ್ಲಿಸಿ, ಕೆಳಗೆ ಇಳಿದುಬಂದ ಅವರು, ಗಾಯಾಳುಗಳನ್ನು ತಾವೇ ಎತ್ತಿಕೊಂಡು ಸ್ಥಳಕ್ಕೆ ಬಂದಿದ್ದ ೧೦೮ ವಾಹನದಲ್ಲಿ ಕೂರಿಸಿ, ಆಸ್ಪತ್ರೆಗೆ ಕರೆದುಕೊಂಡು ಹೋಗಲು ನೆರವಾದರು.

ಈ ಅಪಘಾತದಲ್ಲಿ ಹುಲಕೋಟಿ ಗ್ರಾಮದ ಬಸವರಾಜ್ (32) ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಬಾಬಾಜಾನ್, ದೇವಕ್ಕ, ಮಾಂತೇಶ, ಸುನಿತಾ ಎಂಬುವರಿಗೆ ಗಾಯಗಳಾಗಿದ್ದು, ಅವರನ್ನು ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಜಿಮ್ಸ್‌) ದಾಖಲಿಸಲಾಗಿದೆ. ಗದಗ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !