ಶುಕ್ರವಾರ, ಫೆಬ್ರವರಿ 26, 2021
29 °C

ಗ್ರಾಮೀಣದಲ್ಲಿ ಪುರುಷರೇ ಹೆಚ್ಚು ಅನಕ್ಷರಸ್ಥರು, ಸ್ತ್ರೀಶಕ್ತಿ ಸಾಕ್ಷರತೆಯ ಬೆಳಕು!

ಜೋಮನ್‌ ವರ್ಗೀಸ್‌ Updated:

ಅಕ್ಷರ ಗಾತ್ರ : | |

ಗದಗ: ಜಿಲ್ಲೆಯಲ್ಲಿ 2011ರಿಂದೀಚೆಗೆ 1.58 ಲಕ್ಷ ಜನರು ನವ ಸಾಕ್ಷರರಾಗಿದ್ದಾರೆ. ಇವರಲ್ಲಿ ಮಹಿಳಾ ಸಾಕ್ಷರತೆ ಪ್ರಮಾಣ ಶೇ 65.29ರಷ್ಟಿದೆ. ವಯಸ್ಕರ ಶಿಕ್ಷಣ ಇಲಾಖೆ ಕೈಗೊಂಡ ವಿವಿಧ ಕಾರ್ಯಕ್ರಮಗಳಿಂದ ಮಹಿಳಾ ಸಾಕ್ಷರತೆ, ವಿಶೇಷವಾಗಿ ಗ್ರಾಮೀಣ ಭಾಗದ ನೂರಾರು ಮಹಿಳೆಯರು ಅಕ್ಷರ ಕಲಿತಿದ್ದಾರೆ. ಇದು ಸಾಧ್ಯವಾಗಿದ್ದು ಸ್ತ್ರೀಶಕ್ತಿ ಗುಂಪುಗಳ ಮೂಲಕ.

2001ರಲ್ಲಿ ಜಿಲ್ಲೆಯಲ್ಲಿ ಮಹಿಳಾ ಸಾಕ್ಚರತಾ ಪ್ರಮಾಣ ಶೇ 52.52ರಷ್ಟಿತ್ತು. 2011ರಲ್ಲಿ ಇದು ಶೇ 12.77ರಷ್ಟು ಪ್ರಗತಿ ಕಂಡಿದೆ. ಸಾಕ್ಷರ ಭಾರತ್‌ ಯೋಜನೆಯ ಮೊದಲ ಹಂತಕ್ಕೆ ಜಿಲ್ಲೆಯಲ್ಲಿ 2011ರಲ್ಲಿ ಚಾಲನೆ ಸಿಕ್ಕಿತು. ಈ ಯೋಜನೆಯಡಿ, ಸ್ತ್ರೀಶಕ್ತಿ ಗುಂಪುಗಳನ್ನು ಸಮರ್ಥವಾಗಿ ಬಳಸಿಕೊಳ್ಳಲಾಯಿತು.

ಅಂದರೆ ಸ್ತ್ರೀಶಕ್ತಿ ಗುಂಪುಗಳಿಗೆ ಸದಸ್ಯೆ ಆಗಬೇಕಾದರೆ ಕನಿಷ್ಠ ಓದಲು, ಬರೆಯಲು ಕಲಿತಿರಬೇಕು, ಸಾಲ ಪಡೆಯಲು ಹೆಬ್ಬೆಟ್ಟು ಒತ್ತುವ ಬದಲು ಸಹಿ ಮಾಡಲು ಕಲಿತಿರಬೇಕು ಎಂಬ ನಿಬಂಧನೆ ವಿಧಿಸಲಾಯಿತು. ವಯಸ್ಕರ ಶಿಕ್ಷಣ ಇಲಾಖೆ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ತೆರಳಿ, ಸ್ತ್ರೀಶಕ್ತಿ ಗುಂಪುಗಳ ಸಭೆಗಳಲ್ಲಿ ಭಾಗವಹಿಸಿ, ಗುಂಪಿನ ಮುಖ್ಯಸ್ಥೆಯ ಮನವೊಲಿಸಿ,ಆಯಾ ಗುಂಪುಗಳಲ್ಲಿ ಅನಕ್ಷಸ್ಥರಾಗಿದ್ದ ಹೆಣ್ಣುಮಕ್ಕಳನ್ನು ಸಾಕ್ಷರರನ್ನಾಗಿ ಮಾಡುವ ಪಣ ತೊಟ್ಟರು. ಇದಕ್ಕಾಗಿ ಆಯಾ ಪ್ರದೇಶಗಳಲ್ಲಿ ವಾಸಿಸುವಂತಹ, ಓದು ಬರಹ ಬರುವಂತಹವರನ್ನು ಬೋಧಕರನ್ನಾಗಿ ನೇಮಕ ಮಾಡಿಕೊಳ್ಳಲಾಯಿತು.

ಈ ಕ್ರಮದಿಂದಾಗಿ ಜಿಲ್ಲೆಯ ರೋಣ, ನರಗುಂದ, ಮುಂಡರಗಿ, ಶಿರಹಟ್ಟಿ ತಾಲ್ಲೂಕುಗಳಲ್ಲಿ ಮಹಿಳಾ ಸಾಕ್ಷರತೆ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂತು. 2011ರಿಂದೀಚೆಗೆ ಜಿಲ್ಲೆಯ ವ್ಯಾಪ್ತಿಯಲ್ಲಿ ಅನಕ್ಷರಸ್ಥರಾಗಿ ಉಳಿದ ಮಹಿಳೆಯರ ಸಂಖ್ಯೆ 14,541 ಇದ್ದರೆ ಪುರುಷರ ಸಂಖ್ಯೆ 30,460 ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು