ಶುಕ್ರವಾರ, 14 ನವೆಂಬರ್ 2025
×
ADVERTISEMENT
ADVERTISEMENT

ಶಿರಹಟ್ಟಿ: ರೇಷ್ಮೆ ಕೃಷಿಯಲ್ಲಿ ಅರಳಿದ ಸಹೋದರರ ಬದುಕು

ಮೂವರು ರೈತರಿಂದ ರೇಷ್ಮೆ ಬೆಳೆ; ಕಾಡದ ಕೃಷಿ ಕಾರ್ಮಿಕರ ಕೊರತೆ
ನಿಂಗಪ್ಪ ಹಮ್ಮಿಗಿ
Published : 14 ನವೆಂಬರ್ 2025, 4:10 IST
Last Updated : 14 ನವೆಂಬರ್ 2025, 4:10 IST
ಫಾಲೋ ಮಾಡಿ
Comments
ತಮ್ಮ ಹೊಲದಲ್ಲಿ ಬೆಳೆದ ರೇಷ್ಮೆ ಬೆಳೆಯಲ್ಲಿ ರೈತ ಶಿವಪ್ಪ ರೇಷ್ಮೆ ಇಲಾಖೆಯ ಸಿಬ್ಬಂದಿಯೊಂದಿಗೆ.
ತಮ್ಮ ಹೊಲದಲ್ಲಿ ಬೆಳೆದ ರೇಷ್ಮೆ ಬೆಳೆಯಲ್ಲಿ ರೈತ ಶಿವಪ್ಪ ರೇಷ್ಮೆ ಇಲಾಖೆಯ ಸಿಬ್ಬಂದಿಯೊಂದಿಗೆ.
ನಾವು ಅಣ್ಣಾತಮ್ಮಾ ಎಲ್ಲಾರೂ ಕೂಡೆ ಇರ್ತಿವಿ. ನಾವೆಲ್ಲಾರೂ ಹೊಲ್ದಾಗ ಕೆಲ್ಸಾ ಮಾಡೋದ್ರಿಂದ ನಮ್ಗ ಆಳಿಂದ ಅವಶ್ಯಕತಿ ಇಲ್ಲ. ನಮ್ಮ ಕೆಲ್ಸಾ ನಾವಾ ಮಾಡ್ಕೊತಿವ್ರಿ.
ಶಿವಪ್ಪ ಘಂಟಿ, ರೈತ
ವರ್ಷಕ್ಕೆ 10 ಬೆಳೆ: ಲಕ್ಷಾಂತರ ಆದಾಯ
ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ರೇಷ್ಮೆ ಗೂಡಿಗೆ ₹700ರಿಂದ ₹800 ದರ ಇದೆ. ಒಂದು ವರ್ಷದಲ್ಲಿ 8 ರಿಂದ 10 ಬೆಳೆಗಳನ್ನು ತೆಗೆಯುವ ಘಂಟಿ ಸಹೋದರರು ವರ್ಷಕ್ಕೆ ಸುಮಾರು ₹10 ಲಕ್ಷದಿಂದ ₹12 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಅದರಲ್ಲಿ ವರ್ಷದಲ್ಲಿ ₹1.5 ಲಕ್ಷ ಖರ್ಚು ತೆಗೆದು ಬರೊಬ್ಬರಿ ₹10 ಲಕ್ಷ ನಿವ್ವಳ ಲಾಭವನ್ನು ರೇಷ್ಮೆಯೊಂದರಲ್ಲಿಯೇ ತೆಗೆಯುತ್ತಾರೆ. ಇದರ ಜೊತೆಗೆ ತೋಟದಲ್ಲಿನ ಇತರೆ ಹಾಗೂ ಒಣ ಬೇಸಾಯದ ಜಮೀನಿನಲ್ಲಿ ಬೆಳೆಯಲಾದ ಗೋವಿನಜೋಳ ಹೆಸರು ಶೇಂಗಾ ಸೇರಿದಂತೆ ಇತರೆ ಬೆಳೆಗಳಿಂದ ಸುಮಾರು ₹2 ಲಕ್ಷದಿಂದ ₹3 ಲಕ್ಷ ಆದಾಯ ಪಡೆಯುತ್ತಿದ್ದಾರೆ.
ಕೃಷಿಯೊಂದಿಗೆ ಕುರಿ ಎಮ್ಮೆ ಸಾಕಣೆ
ರೇಷ್ಮೆ ಕೃಷಿಯೊಂದಿಗೆ ಎಮ್ಮೆ ಹಾಗೂ ಕುರಿ ಸಾಕಣೆ ಮಾಡುತ್ತಿರುವ ರೈತ ಸಹೋದರರು ಅದರಲ್ಲೂ ಲಾಭದಲ್ಲಿದ್ದಾರೆ. ಸುಮಾರು 25 ಕುರಿ ಹಾಗೂ 5 ಎಮ್ಮೆಗಳನ್ನು ಸಾಕಣೆ ಮಾಡುತ್ತಿದ್ದಾರೆ. ಒಂದು ಕುರಿಯನ್ನು ₹8 ಸಾವಿರದಿಂದ  ₹10 ಸಾವಿರಕ್ಕೆ ಮಾರಾಟ ಮಾಡುತ್ತಾರೆ. ಇವರಿಗೆ ಮೇವಿನ ಕೊರತೆ ತಲೆದೋರಿಲ್ಲ. ಅಲ್ಲದೇ ಕುರಿ ಹಾಗೂ ಎಮ್ಮೆಯ ಸಗಣಿ ಗೊಬ್ಬರದಿಂದ ರೇಷ್ಮೆ ಬೆಳೆ ಸಮೃದ್ಧವಾಗಿ ಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT