ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚಲಿ: ರಸ್ತೆ ಆವರಿಸಿದ ಕೊಳಚೆ ನೀರು

ಚಂದ್ರಶೇಖರ್ ಕ.ಭಜಂತ್ರಿ
Published 6 ಮಾರ್ಚ್ 2024, 6:14 IST
Last Updated 6 ಮಾರ್ಚ್ 2024, 6:14 IST
ಅಕ್ಷರ ಗಾತ್ರ

ಚಿಂಚಲಿ (ಮುಳಗುಂದ): ಚಿಂಚಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಲ್ಲೂರ ಗ್ರಾಮ ಸಮರ್ಪಕ ಒಳಚರಂಡಿ ವ್ಯವಸ್ಥೆ, ಸ್ವಚ್ಛತೆ ಇಲ್ಲದೇ ದುರ್ನಾತ ಬೀರುತ್ತಿದೆ. ಜನರು ರೋಗ ಹರಡುವ ಭೀತಿಯಲ್ಲೇ ಕಾಲ ಕಳೆಯುವಂತಾಗಿದೆ.

ಗ್ರಾಮದ ವಾರ್ಡ್ ಸಂಖ್ಯೆ ಒಂದು ಮತ್ತು ಎರಡರ ನಡುವೆ ಎರಡು ದಶಕಗಳ ಹಿಂದೆ ಒಳಚರಂಡಿ ನಿರ್ಮಾಣ ಮಾಡಲಾಗಿದೆ. ಈ ಮೊದಲು ಒಳಚಂಡಿ ನಿರ್ವಹಣೆ ಕೆಲಸ ನಡೆಯುತಿತ್ತು, ಆದರೆ ಕಳೆದ ಒಂದು ವರ್ಷದಿಂದ ಚರಂಡಿ ನಿರ್ವಹಣೆ ಕಾರ್ಯ ಆಗದ ಕಾರಣ ಒಳಚರಂಡಿ ಚಂಬರ್‌ನಲ್ಲಿ ಹೂಳು ತುಂಬಿಕೊಂಡಿದೆ.

ಒಳಚರಂಡಿ ಬಂದಾಗಿದೆ, ಪರಿಣಾಮ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿದೆ. ಇದರಿಂದ ಗ್ರಾಮಸ್ಥರು ನಿತ್ಯವು ದುರ್ನಾತದಲ್ಲಿ ಕಾಲ ಕಳೆಯುವ ಸ್ಥಿತಿ ಎದುರಾಗಿದೆ.

ಪ್ರಮುಖವಾಗಿ ಇಲ್ಲಿನ ವಾರ್ಡ್ ಸಂಖ್ಯೆ ಒಂದು ಮತ್ತು ಎರಡರ ನಡುವೆ ಕಳೆದ ಎರಡು ದಶಕಗಳ ಹಿಂದೆ ಒಳಚರಂಡಿ ನಿರ್ಮಾಣ ಮಾಡಲಾಗಿದೆ, ಈ ಹಿಂದೆ ಒಳಚಂಡಿ ನಿರ್ವಹಣೆ ಕೆಲಸ ನಡೆಯುತಿತ್ತು, ಆದರೆ ಕಳೆದೊಂದು ವರ್ಷದಿಂದ ನಿರ್ವಹಣೆ ಮಾಡದೆ ಇರುವುದರಿಂದ ಒಳಚರಂಡಿ ಚಂಬರ್‌ನಲ್ಲಿ ಹೊಳು ತುಂಬಿದೆ.

‘ಕೆಲದಿನಗಳ ಹಿಂದೆ ಒಳಚರಂಡಿ ದುರಸ್ತಿ ಮಾಡಲಾಗಿತ್ತಾದರೂ ಪೂರ್ಣ ಕೆಲಸ ನಡೆದಿಲ್ಲ, ದುರಸ್ತಿಗೆ ತೆಗೆದ ಮ್ಯಾನ್‌ಹೋಲ್ ಮುಚ್ಚಳ ಹಾಗೆ ಬಿಡಲಾಗಿದೆ. ರಸ್ತೆ ಮಧ್ಯ ಕೊಳಚೆ ನೀರು ಸಂಗ್ರಹವಾಗಿ ಸಂಚಾರ ಬಂದಾಗಿದ್ದು, ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗಿದೆ. ಕೊಳಚೆಯಿಂದಾಗಿ ದುರ್ನಾತವೂ ಹೆಚ್ಚಾಗಿದೆ, ಈ ಕುರಿತು ಗ್ರಾಮ ಪಂಚಾಯ್ತಿಗೆ ಸಾಕಷ್ಟು ಬಾರಿ ಮನವಿ ಕೊಟ್ಟರೂ ಸಹ ಯಾವುದೇ ಪ್ರಯೋಜವಾಗಿಲ್ಲ’ ಎಂದು ನಿವಾಸಿಗಳು ದೂರಿದರು.

‘ವಾರ್ಡ್ ಸಂಖ್ಯೆ 2ರಲ್ಲಿ ಚರಂಡಿಗಳ ಸ್ವಚ್ಛತೆ ಕೈಗೊಂಡಿಲ್ಲ, ಪರಿಣಾಮ ಮನೆಗಳ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಕೆಲವು ಭಾಗದಲ್ಲಿ ರಸ್ತೆ ಮಧ್ಯ ನೀರು ನಿಂತು ಕೊಳಚೆ ಸಂಗ್ರಹವಾಗುತ್ತಿದೆ. ಕೊಳಚೆ ಸ್ಥಳಗಳು ಸೊಳ್ಳೆ ಉತ್ಪತ್ತಿ ತಾಣವಾಗಿ, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ’ ಗ್ರಾಮಸ್ಥ ಎಂದು ಪ್ರಕಾಶ ನೀಲಣ್ಣವರ ಆರೋಪಿಸಿದರು.

ಹೊನ್ನತ್ತೆಮ್ಮನ ಗುಡಿ ಹತ್ತಿರದ ಕೆಲವು ಮನೆಗಳಿಗೆ ವಿದ್ಯುತ್ ಕಂಬ ಅಳವಡಿಸಲಾಗಿದೆ. ಇನ್ನೂ ಹಲವು ಮನೆಗಳ ನಿವಾಸಿಗಳು ಕತ್ತಲಲ್ಲೆ ಕಾಲ ಕಳೆಯುವ ಸ್ಥಿತಿ ಈಗಲೂ ಮುಂದುವರಿದಿದೆ. ಸುಗಮ ರಸ್ತೆ, ಮೂಲ ಸೌಲಭ್ಯ ಒದಗಿಸುವಂತೆ ಹಲವು ವರ್ಷಗಳಿಂದ ಮನವಿ ಕೊಟ್ಟರೂ ಸಹ ಇನ್ನೂ ಒದಗಿಸಿಲ್ಲ. ಸ್ವಚ್ಛತೆ ಮತ್ತು ಗ್ರಾಮದ ನೈರ್ಮಲ್ಯ ಕಾಪಾಡಬೇಕಿದ್ದ ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯ ವಹಿಸಿದೆ. ಕೊಡಲೆ ಸೌಲಭ್ಯ ಒದಗಿಸಿ ಸ್ವಚ್ಛತೆಗೆ ಆಧ್ಯತೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಲ್ಲೂರ ಗ್ರಾಮದಲ್ಲಿನ ಒಳಚರಂಡಿಯನ್ನು ಮಾರ್ಚ್ 11 ರೊಳಗೆ ದುರಸ್ತಿ ಮಾಡದೆ ಇದ್ದಲ್ಲಿ ಗ್ರಾಮ ಪಂಚಾಯ್ತಿ ಎದುರು ಪ್ರತಿಭಟನೆ ಮಾಡುತ್ತೇವೆ. ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT