ಬಯಲು ಶೌಚಾಲಯದ ತಾಣವಾದ ಎಪಿಎಂಸಿ ಆವರಣ
ತಹಶೀಲ್ದಾರ್ ಕಚೇರಿ ಪಕ್ಕದಲ್ಲಿನ ಎಪಿಎಂಸಿ ಆವರಣದಲ್ಲಿ ಹಂದಿಗಳ ವಾಸ
ಎಪಿಎಂಸಿ ಆವರಣದಲ್ಲಿನ ಕಸದ ರಾಶಿ
ದುರಸ್ತಿ ತಲುಪಿದ ಎಪಿಎಂಸಿ ಗೋದಾಮಿನ ಹೊರನೋಟ

ಹೋರಾಟ ಅನಿವಾರ್ಯ: ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಎಪಿಎಂಸಿ ಅಧೋಗತಿ ತಲುಪಿದ್ದು ಶೀಘ್ರವಾಗಿ ಪ್ರಾರಂಭಿಸದೆ ಇದ್ದಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ
ಸಂತೋಷ ಕುರಿ ಸಾಮಾಜಿಕ ಹೋರಾಟಗಾರ
ಚಕ್ಕಡಿ ಚಳವಳಿ: ಎಪಿಎಂಸಿ ಇದ್ದರೂ ಇಲ್ಲದಂತಾಗಿದೆ. ಅದನ್ನು ಪ್ರಾರಂಭಿಸುವಂತೆ ಹಲವಾರು ಬಾರಿ ಮನವಿ ನೀಡಲಾಗಿದೆ. ಮನವಿಗೆ ಸ್ಪಂದಿಸದಿದ್ದರೆ ಚಕ್ಕಡಿ ಚಳವಳಿ ಕೈಗೊಂಡು ಹೋರಾಟ ನಡೆಸಲಾಗುವುದು.
ವಿಠ್ಠಲ ಬಿಡವೆ ಯುವ ರೈತ
ಮೂರು ತಿಂಗಳಲ್ಲಿ ಪ್ರಾರಂಭ: ಖರೀದಿದಾರರಿಗೆ ನಿವೇಶನ ಹಂಚಲು ಮಂಜೂರಾತಿ ಹಾಗೂ ಎಪಿಎಂಸಿ ಪ್ರಾರಂಭಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಎರಡು ಮೂರು ತಿಂಗಳಲ್ಲಿ ಪ್ರಾರಂಭಿಸಲಾಗುವುದು.
ಡಾ.ಕೋಡಿಗೌಡ ಕೆ.ಎ. ಹೆಚ್ಚುವರಿ ನಿರ್ದೇಶಕ ಬೆಳಗಾವಿ ವಿಭಾಗ