ನರೇಗಲ್: ‘ಸಮಾಜಕ್ಕೆ ಯಾವುದಾರೂ ಒಂದು ರೂಪದಲ್ಲಿ ಸೇವೆ ಸಲ್ಲಿಸಬೇಕಾಗಿರುವುದು ಪ್ರತಿಯೊಬ್ಬ ಮಾನವನ ಕರ್ತವ್ಯ’ ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ನರೇಗಲ್ ಸಮೀಪದ ಅಬ್ಬಿಗೇರಿ ಗ್ರಾಮದ ರೇಣುಕಾಚಾರ್ಯ ಸಾಂಸ್ಕೃತಿಕ ಸಭಾ ಭವನದಲ್ಲಿ ಪ್ರವಣ ಪ್ರಕಾಶನ ಧಾರವಾಡ ಹಾಗೂ ತರುಣ ಸಂಘ ಮತ್ತು ಡಾ. ಆರ್. ಬಿ. ಬಸವರಡ್ಡೇರ ಅಭಿಮಾನಿ ಬಳಗ ವತಿಯಿಂದ ಭಾನುವಾರ ನಡೆದ ಅನನ್ಯ ಅಭಿನಂದನಾ ಗ್ರಂಥ ಲೋಕಾರ್ಪಣೆ ಹಾಗೂ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಡಾ. ಆರ್. ಬಿ. ಬಸವರಡ್ಡೇರ ಅವರು ವೈದ್ಯಕೀಯ ಸೇವೆಯ ಜೊತೆಗೆ ರಾಜಕೀಯ, ಸಾಮಾಜಿಕ ಮತ್ತು ಸಂಘ ಸಂಸ್ಥೆಗಳಲ್ಲಿಯೂ ನಿರಂತರವಾಗಿ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಇಂದಿನ ಯುವಕರಗೆ ಅವರ ಜೀವನ ಮಾದರಿಯಾಗಿದೆ’ ಎಂದರು.

ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿದರು. ರೋಣ ಗುಲಗಂಜಿಮಠದ ಗುರುಪಾದ ಸ್ವಾಮೀಜಿ ಆಶೀರ್ವಚನ ನೀಡಿದರು. ಕೊಡಗಾನೂರ ಚಂದ್ರಶೇಖರ ಸ್ವಾಮೀಜಿ, ಮುಗಳಖೋಡ ಶಾಖಾಮಠದ ಬಸವರಾಜ ಶರಣರು ಸಮ್ಮುಖ ವಹಿಸಿದ್ದರು. ನಿವೃತ್ತಿ ಪ್ರಾಚಾರ್ಯ ಬಿ.ಎಫ್. ಚೇಗರಡ್ಡಿ, ಬಸಯ್ಯ ಶಿರೋಳ ಪ್ರಾಸ್ತಾವಿಕ ಮಾತನಾಡಿದರು. ನರಗುಂದ ಮಾಜಿ ಶಾಸಕ ಬಿ.ಆರ್. ಯಾವಗಲ್ಲ, ಬಿ.ವಿ. ಶಿರೂರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಲಲಿತಾ ರಾಠೋಡ, ಉಪಾಧ್ಯಕ್ಷೆ ಜ್ಯೋತಿ ತೆಗ್ಗಿನಕೇರಿ, ಐ.ಎಸ್. ಪಾಟೀಲ, ಮಹೇಶ ತಿಪ್ಪಶೆಟ್ಟಿ , ಅಂದಪ್ಪ ವೀರಾಪುರ, ಬಸವರಾಜ ಪಲ್ಲೇದ ಇದ್ದರು.

ವಿವಿಧ ಸಾಧಕರಿಕೆ ಸನ್ಮಾನ

ಪಾಲಾಕ್ಷಯ್ಯ ಶಾಸ್ತ್ರಿ ಅರಳೆಲೆಮಠ ಚನ್ನಮ್ಮ ಹರದಾರಿ ವಿಕಾಸ ತಿಪ್ಪಶೆಟ್ಟಿ ವೀರೇಶ ಪಸಾರದ ಶರಣಪ್ಪ ತಿಪ್ಪಶೆಟ್ಟಿ ನಿವೃತ್ತ ಯೋಧ ಗುರುಪಾದಗೌಡ ಪಾಟೀಲ ಮಾರುತಿ ಬಂಡಿವಡ್ಡರ ಅಂದಾನಗೌಡ ಮುದಿಗೌಡ್ರ ಶರಣಪ್ಪ ಹುಳ್ಳಿಯವರ ಆನಂದ ಹಳ್ಳಿ ವಿರುಪಾಕ್ಷಪ್ಪ ರಾಮೇನಹಳ್ಳಿ ಮಲ್ಲಿಕಾರ್ಜುನ ತಾಳಿಕೋಟಿ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಸೌಮ್ಯ ಬಸವರಡ್ಡೇರ ಭಾಗ್ಯ ಐಹೋಳಿ ಸಂಜನಾ ನಿರಲೋಟಿ ಲಕ್ಷ್ಮೀ ನಿರಲೋಟಿ ಸಿಂಚನಾ ವೀರಾಪೂರ ಸಾವಿತ್ರಿ ತಲ್ಲೂರ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.