ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದಿಷ್ಟ ಗುರಿ ಇದ್ದರೆ ಯಶಸ್ಸು ನಿಶ್ಚಿತ

ತೋಂಟದಾರ್ಯ ಕಾಲೇಜಿನಲ್ಲಿ ಎಂಜಿನಿಯರ್ಸ್‌ ಡೇ ಆಚರಣೆ– ಎಸ್‌ಪಿ ಯತೀಶ್‌ ಉದ್ಘಾಟನೆ
Last Updated 16 ಸೆಪ್ಟೆಂಬರ್ 2021, 4:36 IST
ಅಕ್ಷರ ಗಾತ್ರ

ಗದಗ: ‘ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿದ್ದು, ನಿರ್ದಿಷ್ಟ ಗುರಿ ಹೊಂದುವುದರೊಂದಿಗೆ ಗುರುಗಳನ್ನು ಆದರ್ಶವಾಗಿಟ್ಟುಕೊಡು ಅಭ್ಯಾಸ ಮಾಡಿದರೆ ಯಶಸ್ಸು ನಿಶ್ಚಿತ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌ ತಿಳಿಸಿದರು.

ನಗರದ ತೋಂಟದಾರ್ಯ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬುಧವಾರ ನಡೆದ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಎಂಜಿನಿಯರ್ಸ್‌ ಡೇ ಉದ್ಘಾಟಿಸಿ ಅವರು ಮಾತನಾಡಿದರು.

‘ತಂತ್ರಜ್ಞಾನ ಯುಗದಲ್ಲಿ ಅವಕಾಶಗಳು ಸಾಕಷ್ಟಿವೆ. ಸೌಲಭ್ಯಗಳಿದ್ದರೂ ಅದನ್ನು ಬಳಸಿಕೊಳ್ಳುವ ಇಚ್ಛಾಶಕ್ತಿಯ ಕೊರತೆಯನ್ನು ಅನೇಕರು ಹೊಂದಿದ್ದಾರೆ. ಆಲಸ್ಯ ಬಿಟ್ಟು ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡರೆ ಮಾತ್ರ ನಾವು ಆದರ್ಶವ್ಯಕ್ತಿಯಾಗಿ ಬೆಳೆಯಲು ಸಾಧ್ಯ’ ಎಂದು ಸಲಹೆ ನೀಡಿದರು.

‘ಇತ್ತೀಚಿನ ದಿನಗಳಲ್ಲಿ ಕೇಂದ್ರ ಮತ್ತು ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಮೇಲುಗೈ ಸಾಧಿಸುತ್ತಿದ್ದಾರೆ. ಎಂಜಿನಿಯರಿಂಗ್‌ ಕಲಿತ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಮತ್ತು ಕೆಎಎಸ್ ಪಾಸಾಗಿ ಉನ್ನತ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಹೇಳಿದರು.

ಇಟಲಿಯ ಇಲಿಂದಾ ಇಂಡೆಕ್ಷನ್ ಫರ್ನೆಸ್ ಕಂಪನಿಯ ನಿರ್ದೇಶಕ ಗೈಡೊ ಬೈಲೆಟ್ಟೆ ಮಾತನಾಡಿ, ‘ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ದೇಶ ವಿದೇಶದ ಕಂಪನಿಗಳಲ್ಲಿ ಕೆಲಸ ಮಾಡಲು ವಿಪುಲ ಅವಕಾಶಗಳಿವೆ. ಇದರೊಂದಿಗೆ ಸ್ವಯಂ ಉದ್ಯೋಗ ಪ್ರಾರಂಭಿಸಿ ಸಾವಿರಾರು ಜನರಿಗೆ ಉದ್ಯೋಗ ನೀಡಬಹುದು’ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎಂ.ಅವಟಿ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಈರಣ್ಣ ಕೊರಚಗಾವ್, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಡಿ.ಎಂ.ಗೌಡರ, ಡಾ. ಜಿ.ಡಿ.ರೇವಣಕರ ವೇದಿಕೆ ಮೇಲೆ ಉಪಸ್ಥಿತರಿದ್ದರು. ಡಾ.ಜಯಶ್ರೀ ರಡ್ಡೇರ ನಿರೂಪಿಸಿದರು. ಸಹನಾ ಪ್ರಾರ್ಥಿಸಿದರು. ಡಾ. ಆರ್.ವಿ.ಕಡಿ ವಂದಿಸಿದರು.

ಪ್ರೊ.ವಿಜಯಕುಮಾರ ಮಾಲಗಿತ್ತಿ, ಡಾ.ಸುಜಾತಾ ಭಾವಿಕಟ್ಟಿ, ಡಾ.ವಿ.ಟಿ.ಮಾಗಳದ, ಬಿ.ಕೆ.ಬೆಳ್ಳೆರಿ, ಎನ್.ಟಿ.ಪೂಜಾರ, ಅರುಣಕುಮಾರ, ಮಂಜುನಾಥ ಕಮ್ಮಾರ, ಪ್ರಸನ್ನ ನಾಡಗೌಡ, ಚಂಬಮ್ಮ ಕೋಟಿ, ಜಗದೀಶ ಶಿವನಗುತಿ, ವೆಂಕಟೇಶ ಭಾಂಡಗೆ, ರಮೇಶ ಬಡಿಗೇರ, ಆನಂದ ಹಳ್ಳಿ, ಮಲ್ಲಿಕಾರ್ಜುನ ಜಿ.ಡಿ., ಶಶಿಧರಗೌಡ ಮತ್ತು ಎಲ್ಲ ವಿಭಾಗದ ಮುಖ್ಯಸ್ಥರು ಬೋಧಕ - ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಜೀವನದಲ್ಲಿ ಯಶಸ್ಸು ಸಾಧಿಸಲು ವಿದ್ಯಾರ್ಥಿಗಳು ಕೆಲವೊಂದು ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ಸಾಧನೆ ಮಾಡಿದ ನಂತರ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಬದ್ಧತೆ ಪ್ರದರ್ಶಿಸಬೇಕು
ಯತೀಶ್‌ ಎನ್‌., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

‘ದೇಶಕ್ಕೆ ಕೀರ್ತಿ ತನ್ನಿ’

‘ಸರ್ ಎಂ.ವಿಶ್ವೇಶ್ವರಯ್ಯ ಅವರ ಕೊಡುಗೆ ಪ್ರಪಂಚಕ್ಕೆ ಮಾದರಿಯಾಗಿದೆ’ ಎಂದು ಬೆಂಗಳೂರಿನ ಎಂಎನ್‌ಸಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಾಯಿಕುಮಾರ ಹೇಳಿದರು.

‘ವಿದ್ಯಾರ್ಥಿಗಳು ಕೂಡ ಅವರಂತೆ ತಮ್ಮದೇ ಆದ ಛಾಪು ಮೂಡಿಸಿ ಮುಂಚೂಣಿಗೆ ಬರಬೇಕು. ಸರ್‌ ಎಂ.ವಿ. ಅವರ ಆದರ್ಶಗಳನ್ನು ಪಾಲಿಸಿ ದೇಶಕ್ಕೆ ಕೀರ್ತಿ ತರಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT