ವಿವಿಧ ಬಗೆಯ ಗಿಡಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡುವ ‘ಅಮೃತ ವಾಟಿಕಾ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಅದೇರೀತಿ, ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಯುವಜನರಲ್ಲಿ ರಾಷ್ಟ್ರೀಯ ಸೇವಾ ಭಾವನೆಯನ್ನು ಬೆಳೆಸಿದ ಸಾಧನೆ ಪರಿಗಣಿಸಿ ಪ್ರಧಾನಮಂತ್ರಿಗಳಿಂದ ವಿಶೇಷ ಆತಿಥ್ಯ ಹಾಗೂ ಸನ್ಮಾನ ಸ್ವೀಕರಿಸುವ ಸುವರ್ಣಾವಕಾಶ ಈ ಇಬ್ಬರು ವಿದ್ಯಾರ್ಥಿಗಳಿಗೆ ಸಿಕ್ಕಿದೆ’ ಎಂದು ಎನ್‌ಎಸ್‌ಎಸ್ ಜಿಲ್ಲಾ ನೋಡಲ್ ಅಧಿಕಾರಿ ಶ್ರೀನಿವಾಸ ಬಡಿಗೇರ ತಿಳಿಸಿದ್ದಾರೆ.