ನರೇಗಲ್: ‘ರಾಮ ನಾಮ ಜಪ ಪಠಿಸುವುದರಿಂದ ಒಳ್ಳೆಯದಾಗುತ್ತದೆ. ಮೋಕ್ಷ ಮಾರ್ಗವೂ ಕಾಣುಗುತ್ತದೆ. ಹೆಬ್ಬಳ್ಳಿಯಲ್ಲಿ 15 ಕೋಟಿ ಶ್ರೀರಾಮ ನಾಮ ಜಪ ಸಂಕಲ್ಪ ಮಾಡಲಾಗಿದೆ’ ಎಂದು ದತ್ತಾವಧೂತ ಮಹಾರಾಜರು ಹೇಳಿದರು.

ಪಟ್ಟಣದ ದತ್ತಾತ್ರೇಯ ದೇವಸ್ಥಾನದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಒಮ್ಮೆಲೆ ಎಲ್ಲರೂ ಸೇರಿ ಜಪ ಮಾಡಲು ಅನಾನುಕೂಲವಾಗುತ್ತದೆ. ಅದಕ್ಕಾಗಿ ಯೋಜನೆ ರೂಪಿಸಲಾಗಿದೆ. ನರೇಗಲ್ನ ಭಕ್ತರು 10–15 ಜನರ ಗುಂಪು ಮಾಡಿಕೊಳ್ಳಬೇಕು. ಈ ಗುಂಪಿನ ಸದಸ್ಯರು ತಮಗೆ ಅನುಕೂಲವಾದ ದಿನ ಹೆಬ್ಬಳ್ಳಿಗೆ ಬಂದು ಜಪ ಮಾಡಬಹುದು. ಒಂದು ತಾಸಿಗೆ 3,000 ಜಪ ಆಗುವುದರಿಂದ ಯಾರೇ ಬಂದರೂ ಕನಿಷ್ಠ ಒಂದು ತಾಸು ಜಪ ಮಾಡಬೇಕು’ ಎಂದರು.

ನಿವೃತ್ತ ಮುಖ್ಯಶಿಕ್ಷಕ ಅರುಣ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀವಲ್ಲಭಭಟ್ಟ ಸದರಜೋಶಿ, ರಂಗಣ್ಣನವರು ಕುಲಕರ್ಣಿ, ನಾಗರಾಜ ಗ್ರಾಮಪುರೋಹಿತ, ಎ.ಜಿ. ಕುಲಕರ್ಣಿ, ಆನಂದ ಕುಲಕರ್ಣಿ, ಅರುಣ ಗ್ರಾಮಪುರೋಹಿತ, ಪ್ರಶಾಂತ ಗ್ರಾಮಪುರೋಹಿತ, ಅಜಿತ ಕುಲಕರ್ಣಿ, ರಘುನಾಥ ಕೊಂಡಿ, ಎಸ್.ಎಚ್. ಕುಲಕರ್ಣಿ, ಆದರ್ಶ ಕುಲಕರ್ಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.