ಮಂಗಳವಾರ, ಜನವರಿ 25, 2022
28 °C
ಭಾರತ ನಿರ್ಮಾಣ ಸೇವಾ ಕೇಂದ್ರಕ್ಕೆ ಭೂಮಿ ಪೂಜೆ

ಗದಗ | ಗ್ರಾಮೀಣ ಅಭಿವೃದ್ಧಿಗೆ ಆದ್ಯತೆ: ಸಿ.ಸಿ. ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನರಗುಂದ: ಗ್ರಾಮಗಳ ಅಭಿವೃದ್ಧಿಯಾದರೆ ರಾಜ್ಯ ಹಾಗೂ ದೇಶದ ಅಭಿವೃದ್ಧಿ ಸಾಧ್ಯ. ಆದ್ದರಿಂದ ನಮ್ಮ ಸರ್ಕಾರ ಆಡಳಿತಕ್ಕೆ ಬಂದ ನಂತರ ಗ್ರಾಮೀಣ ಅಭಿವೃದ್ಧಿಗೆ ಮೊದಲು ಆದ್ಯತೆ ನೀಡಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ತಾಲ್ಲೂಕಿನ ಭೈರನಹಟ್ಟಿಯಲ್ಲಿ ಈಚೆಗೆ ಭೈರನಹಟ್ಟಿಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರಾಜೀವ್‌ಗಾಂಧಿ ಭಾರತ ನಿರ್ಮಾಣ ಸೇವಾ ಕೇಂದ್ರ ಕಟ್ಟಡದ ಭೂಮಿ ಪೂಜಾ ಸಮಾರಂಭದಲ್ಲಿ ಮಾತನಾಡಿದರು.

ಮಹಾತ್ಮ ಗಾಂಧಿಯವರು ಮೊದಲು ಗ್ರಾಮೀಣ ಪ್ರದೇಶಗಳು ಅಭಿವೃದ್ದಿಗೊಂಡರೆ ಮಾತ್ರ ಈ ದೇಶ ಅಭಿವೃದ್ದಿಯಾಗಲು ಸಾಧ್ಯವಾಗುತ್ತದೆ ಎಂದು ಹೇಳಿದ್ದರು.

ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರವು ಕೂಡ ಪ್ರತಿ ವರ್ಷ ಹೆಚ್ಚಿನ ಹಣವನ್ನು ಗ್ರಾಮೀಣ ಭಾಗದ ಅಭಿವೃದ್ದಿಗೆ ನೀಡಿ ಗ್ರಾಮಗಳನ್ನು ಅಭಿವೃದ್ದಿಮಾಡುತ್ತಿದೆ. ಈಗಾಗಲೇ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳಿಂದ ಧಾರ್ಮಿಕವಾಗಿ ಹೆಸರು ಪಡೆದಿದೆ. ಆದ್ದರಿಂದ ಗ್ರಾಮಸ್ಥರು ಈ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿಸಲು ಪಕ್ಷಾತೀತವಾಗಿ ಕೈ ಜೊಡಿಸಬೇಕೆಂದರು.

ನನ್ನ ತವರು ಕ್ಷೇತ್ರದಲ್ಲಿ ಭೈರನಹಟ್ಟಿ ಗ್ರಾಮವು ನನಗೆ ಚುನಾವಣಿ ಸಂದರ್ಭದಲ್ಲಿ ಸಾಕಷ್ಟು ಬೆಂಬಲವು ನೀಡಿದೆ, ಈ ಗ್ರಾಮಕ್ಕೆ ಹೆಚ್ಚಿನ ಅನುದಾನ ನೀಡಿ, ಚರಂಡಿ, ಕುಡಿಯುವ ನೀರು, ರಸ್ತೆಗಳ ನಿರ್ಮಾಣ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತೇನೆಂದು ಭರವಸೆ ನೀಡಿದರು.

ಸಮಾರಂಭದಲ್ಲಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮವ್ವ ಕಟ್ಟಮನಿ, ಉಪಾಧ್ಯಕ್ಷ ನಾಗಪ್ಪ ಬೆನ್ನೂರ, ಜ್ಷಾನೇಶ ಮನನೇಕೊಪ್ಪ, ಶರಣಬಸಪ್ಪ ನರಸಾಪೂರ, ಪುಷ್ಪಾ ಪಾಟೀಲ, ಬಿ.ಬಿ.ಐನಾಪೂರ, ಶಂಕರಗೌಡ ಪಾಟೀಲ, ಚಂದ್ರ ದಂಡಿನ, ಎಪಿಎಂಸಿ ಅಧ್ಯಕ್ಷ ಶಂಕರಗೌಡ ಯಲ್ಲಪ್ಪಗೌಡ್ರ, ಮಲ್ಲಪ್ಪ ಮೇಟಿ, ಎಂ.ಎಸ್.ಪಾಟೀಲ, ಗುರಪ್ಪ ಆದಪ್ಪನವರ, ಬಿ.ಎಸ್.ಪಾಟೀಲ, ಪ್ರಕಾಶಗೌಡ ತಿರಕನಗೌಡ್ರ, ಶಿವನಗೌಡ ಹೆಬ್ಬಳ್ಳಿ, ಬಸವರಾಜ ಐನಾಪೂರ, ಎಲ್.ಎಂ.ಪಾಟೀಲ, ಉಮೇಶ ಮೊರಬದ, ನಿಂಗಪ್ಪ ತೆಗ್ಗಿನಮನಿ, ಹನಮಂತ ಸಂಗಟಿ, ಜಿಪಂ ಅಧಿಕಾರಿ. ಎಂ.ಬಿ.ತೂಗಣಿಸಿ, ತಾ.ಪಂ ಅಧಿಕಾರಿ ಚಂದ್ರಶೇಖರ ಕುರ್ತಕೋಟಿ, ಬಿ.ಸಿ.ಐನಾಪೂರ, ಗ್ರಾಪಂ ಅಭಿವೃದ್ದಿ ಅಧಿಕಾರಿ ಎಸ್.ಆರ್.ಕಡದಳ್ಳಿಮಠ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.