ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾತನೂರು ಗ್ರಾಪಂಗೆ ಗಿರಿಯಪ್ಪ ಅಧ್ಯಕ್ಷ

Last Updated 19 ಡಿಸೆಂಬರ್ 2018, 13:06 IST
ಅಕ್ಷರ ಗಾತ್ರ

ಮಾಗಡಿ: ಸಾತನೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಗಿರಿಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಗಂಗಾಧರ್‌ ತಿಳಿಸಿದರು.

ಪಂಚಾಯಿತಿ ಕಚೇರಿಯ ಆವರಣದಲ್ಲಿ ಚುನಾವಣೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕೆ.ಎನ್‌. ಗಂಗರಾಜು ರಾಜೀನಾಮೆ ನೀಡಿದ್ದರಿಂದ ಈ ಸ್ಥಾನ ತೆರವಾಗಿತ್ತು. ಬುಧವಾರ ಈ ಸಂಬಂಧ ಚುನಾವಣೆ ನಿಗದಿಪಡಿಸಲಾಗಿತ್ತು.

ಚುನಾವಣಾ ಪ್ರಕ್ರಿಯೆ ಆರಂಭವಾಗಿ ಮಧ್ಯಾಹ್ನ 12.30ರ ತನಕ ಗಿರಿಯಪ್ಪ ಅವರನ್ನು ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸಲಿಲ್ಲ ಎಂದು ಗಂಗಾಧರ್‌ ಹೇಳಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಶಿಕಲಾ, ಕಾರ್ಯದರ್ಶಿ ಎ.ನಾಗರಾಜು ಇದ್ದರು.

ಅಭಿನಂದನೆ: ಜಿಲ್ಲಾ ಪಂಚಾಯಿತಿ ಸದಸ್ಯೆ ನಾಗರತ್ನಚಂದ್ರೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಮಾ ರಮೇಶ್‌,ಹಾಲು ಒಕ್ಕೂಟದ ನಿರ್ದೇಶಕ ನರಸಿಂಹ ಮೂರ್ತಿ, ಕಾಂಗ್ರೆಸ್‌ ಮುಖಂಡರಾದ ಜಿ.ಕೃಷ್ಣ, ಉಮೇಶ್‌, ಅಳಲಕುಪ್ಪೆ ಕಾಂತರಾಜು, ಡಿ.ಎಸ್‌. ಗಿರಿಯಪ್ಪ, ಟ್ರಾಕ್ಟರ್‌ ರಾಜಣ್ಣ, ಶಿವರತ್ನಮ್ಮ, ನಂಜುಂಡಯ್ಯ, ಭೈರಪ್ಪ, ಮಂಜುನಾಥ, ಮಹೇಶ್‌,ನಾರಾಯಣ, ಉಮೇಶ್‌, ಬೋರೇಗೌಡ, ಮಂಜು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗಂಗಾಂಬಿಕಾ ಉಪಸ್ಥಿತರಿದ್ದು ಗಿರಿಯಪ್ಪ ಅವರಿಗೆ ಶುಭ ಕೋರಿದರು.

ಸದಸ್ಯರಾದ ಕೆ.ಎನ್‌.ಗಂಗರಾಜು, ದೇವರಾಜಮ್ಮ, ಮಂಗಳ, ಸಂಪತ್‌ ಕುಮಾರ್‌, ಡಿ.ಸಿ. ಮೂರ್ತಿ, ಯಶೋಧ, ಗಂಗಮ್ಮ, ಸಿದ್ದಗಂಗಮ್ಮ, ಎಚ್‌.ಸಿ. ಗಂಗರಾಜು, ಚನ್ನವೀರಪ್ಪ, ಯಶೋದಮ್ಮ ಉಪಸ್ಥಿತರಿದ್ದು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ಅಭಿವೃದ್ದಿಯತ್ತ ಗಮನ: ‘ಸದಸ್ಯರೆಲ್ಲರ ಸಹಕಾರದಿಂದ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ದುಡಿಯುವೆ. ಕುಡಿಯುವ ನೀರು ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸಲು ಶ್ರಮಿಸುತ್ತೇವೆ’ ಎಂದು ಗಿರಿಯಪ್ಪ ತಿಳಿಸಿದರು. ಪಟಾಕಿ ಸಿಡಿಸಿ, ಸಿಹಿ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT