ಹೊಳೆನರಸೀಪುರ: ‘ಶಾಲೆ, ವಸತಿ ಗೃಹಗಳ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಲೊಕೋಪಯೋಗಿ ಇಲಾಖೆಯಿಂದ ಮಾಡಿಸದೆ ಗೃಹಮಂಡಳಿಯಿಂದ ಮಾಡಿಸಿ ಸರ್ಕಾರ ಮತ್ತು ಅಧಿಕಾರಿಗಳು ಶೇ 30ರಷ್ಟು ಕಮಿಷನ್ ಪಡೆಯುತ್ತಿದ್ದಾರೆ’ ಎಂದು ಶಾಸಕ ರೇವಣ್ಣ ಆರೋಪಿಸಿದರು.

ಸೋಮವಾರ ಪಟ್ಟಣದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ನಲ್ಲಿ ₹1.5 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸುತ್ತಿರುವ 5 ಪ್ರಯೋಗಾಲಯ ಕಟ್ಟಡ ಹಾಗೂ ಚಟ್ಟನಹಳ್ಳಿ ಹೌಸಿಂಗ್ ಬೋರ್ಡ್ನಲ್ಲಿ ₹8.60 ಕೋಟಿ ವೆಚ್ಚದಲ್ಲಿ 52 ಕೊಠಡಿಗಳ 5 ಅಂತಸ್ತಿನ ಮೊರಾರ್ಜಿ ದೇಸಾಯಿ ವಸತಿ ನಿಲಯ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಸಿ ಮಾತನಾಡಿದರು.

‘ಪಿಡ್ಬ್ಲ್ಯುಡಿ ಇಲಾಖೆಯಿಂದ ಕೆಲಸ ಮಾಡಿಸಿದ್ದರೆ ಸರ್ಕಾರಕ್ಕೆ ಹಣ ಉಳಿಯುತ್ತಿತ್ತು ಆದರೆ, 30 ಪರ್ಸೆಂಟ್ ಕಮಿಷನ್ ಸಿಗುತ್ತಿರಲಿಲ್ಲ. ಕಮಿಷನ್ ಆಸೆಗಾಗಿ ಗೃಹಮಂಡಳಿಗೆ ಶಾಲಾ ಕಟ್ಟಡಗಳನ್ನು ಕಟ್ಟಲು ಅವಕಾಶ ನೀಡಿದೆ’ ಎಂದು ದೂರಿದರು.

‘ಪ್ರಥಮ ದರ್ಜೆ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ಗಳಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹಿಸುವ ಕಾಲೇಜು ಅಭಿವೃದ್ದಿ ನಿಧಿ (ಐ.ಡಿ.ಎಫ್) ಹಣವನ್ನು ಆಯಾಯ ಕಾಲೇಜುಗಳ ಅಭಿವೃದ್ಧಿಗೆ ಬಳಸಲು ಅವಕಾಶ ಇತ್ತು. ಆದರೆ ಈ ಸರ್ಕಾರ ಎಲ್ಲಾ ಕಾಲೇಜುಗಳ ಹಣವನ್ನು ಕ್ರೋಢಿಕರಿಸಿ ಕಾಲೇಜುಗಳಿಗೆ ಅಗತ್ಯ ಅಲಕರಣೆಗಳನ್ನು ನೀಡಲಾಗುತ್ತದೆ ಎನ್ನುವ ಆದೇಶ ಹೊರಡಿಸಿತ್ತು. 2 ವರ್ಷಗಳಾದರೂ ಯಾವುದೇ ಉಪಕರಣ ನೀಡಲಿಲ್ಲ. ಇದರಲ್ಲೂ ಕಮಿಷನ್ ಪಡೆಯುವ ಉದ್ದೇಶವಿದೆ’ ಎಂದು ಆರೋಪಿಸಿದರು.

‘ಇದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಆಗುತ್ತಿದೆ. ಆದ್ದರಿಂದ ಸರ್ಕಾರ ಆದೇಶವನ್ನು ಹಿಂದಕ್ಕೆ ಪಡೆದು ಆಯಾಯ ಕಾಲೇಜುಗಳ ಐಡಿಎಫ್ ನಿಧಿಯನ್ನು ಈ ಹಿಂದಿನ ನಿಯಮದಂತೆ ಆಯಾಯಾ ಕಾಲೆಜುಗಳಿಗೇ ಬಳಸಲು ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.

ಪ್ರಾಂಶುಪಾಲ ಶ್ರೀಧರ್, ಗೃಹ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ಮಂಜುಳಾ, ಎಇಇ ಪ್ರಮೋದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.