ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರವಣಬೆಳಗೊಳದಲ್ಲಿ 7 ಸೆಂ.ಮೀ ಮಳೆ

Last Updated 22 ಏಪ್ರಿಲ್ 2021, 14:34 IST
ಅಕ್ಷರ ಗಾತ್ರ

ಹಾಸನ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ರಾತ್ರಿ ಹಾಗೂ ಗುರುವಾರ ಉತ್ತಮ ಮಳೆಯಾಗಿದೆ.

ನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬೆಳಿಗ್ಗೆ ಒಂದು ತಾಸಿಗೂ ಹೆಚ್ಚು ಮಳೆಯಾಯಿತು. ಜೋರು ಮಳೆಯಿಂದ
ರಸ್ತೆಗಳೆಲ್ಲ ಜಲಾವೃತವಾಗಿ ವಾಹನ ಸಂಚಾರಕ್ಕೆ ತೊಡಕಾಯಿತು.

ಸಕಲೇಶಪುರ ತಾಲ್ಲೂಕು ಕೊಣ್ಣೂರು ಗ್ರಾಮದ ಕೃಷ್ಣಯ್ಯ ಅವರ ಗದ್ದೆಯಲ್ಲಿ ಬೆಳೆದಿದ್ದ ಬೀನ್ಸ್‌ ಮಳೆ ಗಾಳಿಗೆ ನೆಲ ಕಚ್ಚಿದೆ.
ಹಾನುಬಾಳು, ಯಸಳೂರು, ಅರಸೀಕೆರೆ ತಾಲ್ಲೂಕಿನ ಗಂಡಸಿ, ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ,
ನುಗ್ಗೇಹಳ್ಳಿ, ಹಿರೀಸಾವೆಯಲ್ಲಿ ರಭಸದ ಮಳೆಯಾಗಿದೆ.

ಗುರುವಾರ ಬೆಳಿಗ್ಗೆವರೆಗಿನ 24 ಗಂಟೆಯಲ್ಲಿ ದಾಖಲಾದ ಹೋಬಳಿವಾರು ಮಳೆ ವರದಿ: ಹಾಸನ ತಾಲ್ಲೂಕಿನ
ಶಾಂತಿಗ್ರಾಮ 2.3 ಸೆಂಟಿ ಮೀಟರ್‌, ಕಸಬಾ 1.5 ಸೆಂ.ಮೀ, ಸಾಲಗಾಮೆ 2.5 ಸೆಂ.ಮೀ, ದುದ್ದ 2.7 ಸೆಂ.ಮೀ
ಮಳೆಯಾಗಿದೆ.
ಆಲೂರು ತಾಲ್ಲೂಕಿನ ಪಾಳ್ಯ 2 ಸೆಂ.ಮೀ., ಕೆ. ಹೊಸಕೋಟೆ 2.7 ಸೆಂ.ಮೀ., ಆಲೂರು 3 ಸೆಂ.ಮೀ. ಮಳೆಯಾಗಿದೆ.ಸಕಲೇಶಪುರ ತಾಲ್ಲೂಕಿನ ಹಾನುಬಾಳು 2.3 ಸೆಂ.ಮೀ, ಬಾಳ್ಳುಪೇಟೆ 1 ಸೆಂ.ಮೀ., ಸಕಲೇಶಪುರ 1 ಸೆಂ.ಮೀ, ಶುಕ್ರವಾರ ಸಂತೆ 1.6 ಸೆಂ.ಮೀ., ಯಸಳೂರು 4.2 ಸೆಂ.ಮೀ., ಹೊಸೂರು 4.3 ಸೆಂ. ಮೀ ಮಳೆ ಸುರಿದಿದೆ.

ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ 1.2 ಸೆಂ.ಮೀ., ಕೊಣನೂರು 1 ಸೆಂ.ಮೀ. ಮಳೆಯಾಗಿದೆ.
ಅರಸೀಕೆರೆ ತಾಲ್ಲೂಕಿನ ಗಂಡಸಿ 6.1 ಸೆಂ.ಮೀ., ಮಳೆಯಾಗಿದೆ. ಬೇಲೂರು ತಾಲ್ಲೂಕಿನ ಹಳೇಬೀಡು 1.1 ಸೆಂ.ಮೀ., ಹಗರೆ2 ಸೆಂ.ಮೀ, ಅರೇಹಳ್ಳಿ 1.6 ಸೆಂ.ಮೀ. ಮಳೆಯಾಗಿದೆ.ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ 1 ಸೆಂ.ಮೀ., ಉದಯಪುರ 2 ಸೆಂ.ಮೀ., ಬಾಗೂರು 4 ಸೆಂ.ಮೀ., ನುಗ್ಗೇಹಳ್ಳಿ 3.2ಸೆಂ.ಮೀ., ಹಿರೀಸಾವೆ 3.1 ಸೆಂ.ಮೀ., ಶ್ರವಣಬೆಳಗೋಳ 7.3 ಸೆಂ.ಮೀ.,ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT