ಶನಿವಾರ, ಮೇ 8, 2021
26 °C

ನಗರಸಭೆ: ರೂ. 26 ಲಕ್ಷ ಉಳಿತಾಯ ಬಜೆಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಗೊರೂರಿನ ಪ್ರವಾಸಿ ಮಂದಿರ ದಲ್ಲಿ ಮಂಗಳವಾರ ಆಯೋಜಿಸಿದ್ದ ಬಜೆಟ್ ಸಭೆಯಲ್ಲಿ ನಗರಸಭೆ ಅಧ್ಯಕ್ಷ ಸಿ.ಆರ್. ಶಂಕರ್ ನಗರಸಭೆಯ 2012- 13ನೇ ಸಾಲಿಗೆ 26,89,862 ರೂಪಾಯಿ ಉಳಿತಾಯ ಬಜೆಟ್ ಮಂಡಿಸಿದರು.ಪ್ರಸಕ್ತ ಸಾಲಿನಲ್ಲಿ ಆರಂಭ ಶಿಲ್ಕು 5,24,01,379 ರೂಪಾಯಿ ಸೇರಿದಂತೆ ನಗರ ಸಭೆ 72,98,11,862 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಿದ್ದು, 72,71,22,000 ರೂಪಾಯಿ ಖರ್ಚಿನ ಬಜೆಟ್ ರೂಪಿಸಿದೆ.`ರಸ್ತೆ ಕಾಮಗಾರಿ, ಡಾಂಬರೀಕರಣ, ರಸ್ತೆ ಉನ್ನತೀಕರಣಕ್ಕೆ ಗರಿಷ್ಠ ಐದು ಕೋಟಿ ರೂಪಾಯಿ ವೆಚ್ಚ ಮಾಡಲು ಯೋಜಿಸಲಾಗಿದೆ. ಉಳಿದಂತೆ ರಸ್ತೆಬದಿ ಚರಂಡಿ ನಿರ್ಮಾಣಕ್ಕೆ ನಾಲ್ಕು ಕೋಟಿ, ಹೊಸ ಬಡಾವಣೆಗಳ ಅಭಿವೃದ್ಧಿಗೆ 3 ಕೋಟಿ, ಕೊಳಚೆ ಪ್ರದೇಶ ಅಭಿವೃದ್ಧಿಗೆ 1.50 ಕೋಟಿ ರೂಪಾಯಿ ವೆಚ್ಚ ಮಾಡುವ ಪ್ರಸ್ತಾವನೆ ಇದೆ.ಬಸ್ ನಿಲ್ದಾಣಗಳ ನಿರ್ಮಾಣಕ್ಕೆ 40ಲಕ್ಷ ಹಾಗೂ ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ 30 ಲಕ್ಷ ರೂಪಾಯಿ ಮೀಸಲಿಡಲಾಗಿದೆ.ಆಕ್ಷೇಪ: `ದಾಖಲೆಗಳಲ್ಲಿ ಬರಿಯ ಆದಾಯ ಖರ್ಚುಗಳನ್ನು ತೋರಿಸಿದರೇನು ಬಂತು ? ಅದನ್ನು ಜಾರಿ ಮಾಡುವ ಇಚ್ಛಾಶಕ್ತಿ ಬೇಕು. ಅಂಥ ಶಕ್ತಿ ನಿಮಗೆ ಇಲ್ಲ~ ಎಂದು ನಗರಸಭೆಯ ಕಾಂಗ್ರೆಸ್ ಸದಸ್ಯ ಯಶವಂತ್ ಅವರು ಅಧ್ಯಕ್ಷ ಸಿ.ಆರ್. ಶಂಕರ್ ಮೇಲೆ ನೇರವಾಗಿ ದಾಳಿ ನಡೆಸಿದರು.ಮಂಗಳವಾರ ಶಂಕರ್ ಅವರು ನಗರಸಭೆಯ 2012-13ನೇ ಸಾಲಿನ ಬಜೆಟ್ ಮಂಡಿಸಿದ ಬಳಿಕ ಮಾತನಾಡಿದ ಯಶವಂತ್, `ಈ ಬಜೆಟ್ ಸುಳ್ಳಿನ ಕಂತೆ. ಬಜೆಟ್‌ನಲ್ಲಿ ಆದಾಯ ಮತ್ತು ಖರ್ಚನ್ನು ತೋರಿಸುವುದು ಸುಲ–ಭ. ಆದರೆ ಆದಾಯವನ್ನು ಕ್ರೂಢಿ ೀಕರಿಸುವ ಶಕ್ತಿ ಅಧ್ಯಕ್ಷರಿಗಾಗಲಿ, ನಗರಸಭೆಯ ಸಿಬ್ಬಂದಿಗಾಗಲಿ ಇಲ್ಲ.ನಗರಸಭೆಯ ಮಳಿಗೆಗಳಿಂದ 40 ಲಕ್ಷ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ. ಕಳೆದ ವರ್ಷವೂ ಸುಮಾರು ಇಷ್ಟೇ ಆದಾಯ ನಿರೀಕ್ಷಿಸಲಾಗಿತ್ತು. ಆದರೆ ಬಂದಿರುವುದು 18 ಲಕ್ಷ ರೂಪಾಯಿ ಮಾತ್ರ. ಉದ್ದಿಮೆ ಪರವಾನಿಗೆ ಶುಲ್ಕದ ರೂಪದಲ್ಲಿ 8 ಲಕ್ಷ ನಿರೀಕ್ಷಿ–ಸಿದ್ದರೆ, ಬಂದಿದ್ದು ಕೇವಲ 4 ಲಕ್ಷ. ಬರಬೇಕಾದ ಬಾಡಿಗೆಯನ್ನು ವಸೂಲಿ ಮಾಡುವ ಶಕ್ತಿ ಇಲ್ಲದ ಮೇಲೆ ಬಜೆಟ್‌ನಲ್ಲಿ ಅದನ್ನು ತೋರಿಸುವುದೇಕೆ ? ಎಂದು ಅಧ್ಯಕ್ಷರಿಗೆ               ಸವಾಲೆಸೆದರು.`ಕುಡಿಯುವ ನೀರಿನ ಬಗ್ಗೆ ಬಜೆಟ್‌ನಲ್ಲಿ ಹೆಚ್ಚಿನ ಉಲ್ಲೇಖವಿಲ್ಲ, ಎರಡನೇ ಹಂತದ ಯೋಜನೆಯ ಪ್ರಸ್ತಾಪವಿಲ್ಲ, ಡಂಪಿಂಗ್ ಯಾರ್ಡ್, ನಗರದಲ್ಲಿ ಫುಟ್‌ಪಾತ್, ಶೌಚಾಲಯಗಳ ನಿರ್ಮಾಣ ಮತ್ತಿತರ ಹಲವು ವಿಚಾರಗಳನ್ನು ಕಳೆದ ಬಜೆಟ್‌ನಲ್ಲೂ ಉಲ್ಲೇಖಿಸಿ ಹಣ ಮೀಸಲಿಡಲಾಗಿತ್ತು. ಅಂಥ ಯಾವ ಕಾಮಗಾರಿಯೂ ನಗರದಲ್ಲಿ ಆಗಿಲ್ಲ. ಈ ಬಾರಿ ಮತ್ತೆ ಅದನ್ನೇ ಹೇಳಿದ್ದೀರಿ ಎಂದು ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಆದರೆ ಬಿಜೆಪಿಯ ಕೆ.ಟಿ. ಪ್ರಕಾಶ್, ಜೆಡಿಎಸ್‌ನ  ಡಾ.ಎಚ್.ಎಸ್. ಅನಿಲ್ ಕುಮಾರ್  ಹಾಗೂ ಸಯ್ಯದ್ ಅಕ್ಬರ್ ಅವರು ಬಜೆಟ್‌ಗೆ ಮೆಚ್ಚುಗೆ ವ್ಯಕ್ತಪಡಿಸುತ್ತ, `ಇದು ಆಶಾದಾಯಕ ಬಜೆಟ್, ಕಟ್ಟುನಿಟ್ಟಾಗಿ ಜಾರಿಮಾಡುವ ಪ್ರಯತ್ನವನ್ನು ಮಾಡಬೇಕು~ ಎಂದು ಸಲಹೆ ನೀಡಿದರು.`ಹಾಸನದ ಜನಸಂಖ್ಯೆ ಹೆಚ್ಚಾಗುತ್ತಿದೆ, ನಗರವೂ ಬೆಳೆಯುತ್ತಿದೆ ಇದನ್ನು ಮನಗಂಡು ನೀರು ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕಾಗಿತ್ತು. ಕಳೆದ ವರ್ಷ ನೀರಿನ ಕಂದಾಯ ಹೆಚ್ಚಿಸಲಾಗಿದೆ. ಆದರೆ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿಲ್ಲ. ಉಳಿದ ಮಳಿಗೆಗಳ ಬಾಡಿಗೆ, ಕಂದಾಯ ವಸೂಲಿಯಲ್ಲೂ ನಗರಸಭೆ ಆಸಕ್ತಿ             ವಹಿಸುತ್ತಿಲ್ಲ. ಈ ಎಲ್ಲ ದೃಷ್ಟಿಯಿಂದ ನೋಡಿದರೆ ಬಜೆಟ್ ಅವೈಜ್ಞಾನಿಕವಾಗಿದೆ ಮಾತ್ರವಲ್ಲದೆ ದೂರದೃಷ್ಟಿಯೂ ಇಲ್ಲ~ ಎಂದು ಬಿಜೆಪಿಯ ಡಿ. ಪ್ರಸನ್ನ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.