ಶನಿವಾರ, ಫೆಬ್ರವರಿ 4, 2023
28 °C

ಹಾಸನ | ಎರಡೂ ಕಾಲಿಲ್ಲದ ಬಡ ಯುವಕನನ್ನು ವರಿಸಿದ ಯುವತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಳೆನರಸೀಪುರ: ಎರಡೂ ಕಾಲಿಲ್ಲದ ಯುವಕನೊಬ್ಬನನ್ನು ತಾಲ್ಲೂಕಿನ ಗವಿಸೋಮನಹಳ್ಳಿಯ ದೇಗುಲದಲ್ಲಿ ಸೋಮವಾರ ಮದುವೆಯಾಗುವ ಮೂಲಕ ಯುವತಿಯೊಬ್ಬರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಯುವಕ ಶ್ರೀಮಂತನಲ್ಲದಿದ್ದರೂ; ಯುವತಿ ಮದುವೆಯಾಗಿದ್ದು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ. ಈ ಮದುವೆ ಹಲವರ ಹುಬ್ಬೇರಿಸಿದೆ.

ಗವಿಸೋಮನಹಳ್ಳಿಯ ವಿಶ್ವಕರ್ಮ ಜನಾಂಗದ ಕಾಳಮ್ಮ–ಗಂಗಾಧರಾಚಾರ್ ಪುತ್ರ ಜಿ.ಜಿ.ಸೋಮಾಚಾರ್ ಪುಟ್ಟಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ.

ಶಾಂತಿಗ್ರಾಮ ಹೋಬಳಿಯ ಶಶಿಕಲಾ ಲೇಟ್ ನರಸಿಂಹಮೂರ್ತಿ ಪುತ್ರಿ ವೀಣಾ, ಸೋಮಾಚಾರ್ ಅವರನ್ನು ವರಿಸಿದ್ದಾರೆ.

‘ಎರಡೂ ಗ್ರಾಮದ ಹಿರಿಯರು, ಈ ಮದುವೆ ಬಗ್ಗೆ ಹುಡುಗ–ಹುಡುಗಿಯ ಅಭಿಪ್ರಾಯ ಕೇಳಿ, ಇಬ್ಬರ ಒಪ್ಪಿಗೆ ನಂತರವೇ ಮದುವೆ ಮಾಡಿಸಿದ್ದೇವೆ’ ಎಂದು ಗವಿಸೋಮನಹಳ್ಳಿಯ ಗವಿರಂಗನಾಥಸ್ವಾಮಿ ದೇಗುಲದ ಅರ್ಚಕ ದಿವಾಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಇವರಿಬ್ಬರ ಸಂಸಾರ ಜೀವನಕ್ಕಾಗಿ ಕೆಲಸವೊಂದನ್ನು ಕೊಡಿಸಬೇಕು ಎಂದು ಗ್ರಾಮಸ್ಥರು ಶಾಸಕ ಎಚ್‌.ಡಿ.ರೇವಣ್ಣ ಅವರಿಗೆ ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು